ಕ್ಯಾನ್ಬೆರಾ: ಪೂರ್ವ ಆಸ್ಟ್ರೇಲಿಯಾದಲ್ಲಿ ಬುಷ್ ಬೆಂಕಿಯಿಂದ ಕನಿಷ್ಠ 150 ಮನೆಗಳು ಸುಟ್ಟಿವೆ ಎಂದು ನ್ಯೂ ಸೌತ್ ವೇಲ್ಸ್ ಪ್ರದೇಶದ ಗ್ರಾಮೀಣ ಅಗ್ನಿಶಾಮಕ ಸೇವಾದಳ ತಿಳಿಸಿದೆ.
ಅಗ್ನಿ ಅವಘಡದಲ್ಲಿ ಕನಿಷ್ಠ 150ಕ್ಕೂ ಅಧಿಕ ಮನೆಗಳು ನಾಶವಾಗಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಬ್ಬರು ಬೆಂಕಿಗೆ ಆಹುತಿ ಆಗಿದ್ದು, 7 ಜನ ನಾಪತ್ತೆಯಾಗಿದ್ದಾರೆ ಎಂದಿದೆ.
ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿದ ಎನ್ಎಸ್ಡಬ್ಲ್ಯು, ಬುಷ್ ಬೆಂಕಿಗೆ ಕನಿಷ್ಠ 150 ಮನೆಗಳು ನಾಶವಾಗಿವೆ. ಬೆಂಕಿಯ ಕೆನ್ನಾಲಿಗೆ ಹಾಗೂ ದಟ್ಟ ಹೊಗೆಯಿಂದಾಗಿ ನಮ್ಮ ರಕ್ಷಣಾ ತಂಡಗಳು ಕೆಲವು ಪ್ರದೇಶಗಳಿಗೆ ತಲುಪಲು ಹರಸಾಹ ಪಡುತ್ತಿವೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು 7 ಜನ ಕಾಣೆಯಾಗಿದ್ದರೆ ಎಂದಿದೆ.
ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್‌ನಲ್ಲಿ ಹುಲ್ಲಿಗೆ ಬೆಂಕಿ ಹತ್ತಿದ್ದು, ಅದು ಕಾಡಿನ ತುಂಬ ವ್ಯಾಪಾಸಿದೆ. ಪರಿಣಾದ ಇಡೀ ಕಾನನವೇ ಧಗಧಗನೇ ಹೊತ್ತಿ ಉರಿಯುತ್ತಿದೆ. ಮುನ್ನಚ್ಚರಿಕೆ ಕ್ರಮವಾಗಿ ಅಗ್ನಿ ಅವಘಡ ಸಂಭವಿಸಿದ ಸುತ್ತಿಲ ಪ್ರದೇಶಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಎಚ್ಚರಿಕೆ ನೀಡಿಲಾಗಿದೆ.