ಕಾಬೂಲ್: ಅಫ್ಘಾನಿಸ್ತಾನದ ನಂಗರ್‌ಹಾರ್ ಪ್ರಾಂತ್ಯದಲ್ಲಿ ಶನಿವಾರ ಕಾರ್ ಬಾಂಬ್ ಸ್ಫೋಟಗೊಂಡು ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಾನಿಖಿಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
ನಂಗರ್‌ಹಾರ್ ಗವರ್ನರ್ ವಕ್ತಾರರು ಸಾವು-ನೋವುಗಳ ಮಾಹಿತಿ ದೃಢಪಡಿಸಿದ್ದಾರೆ. ಕೆಲವು ಬಂದೂಕುಧಾರಿಗಳು ಜಿಲ್ಲಾ ಗವರ್ನರ್ ಕಾಂಪೌಂಡ್ ಒಳಗೆ ಪ್ರವೇಶಿಸಲು ಮುಂದಾದರು. ಆದರೆ, ಭದ್ರತಾ ಪಡೆಗಳಿಂದ ಅವರನ್ನು ಹತ್ಯೆ ಮಾಡಿದರು ಎಂದು ಹೇಳಿದರು.
ದಾಳಿಯಲ್ಲಿ ಮೃತಪಟ್ಟವರಲ್ಲಿ ಕನಿಷ್ಠ ಎಂಟು ಮಂದಿ ನಾಗರಿಕರು ಎಂದು ನಂಗರ್‌ಹಾರ್ ಪ್ರಾಂತೀಯ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.