ETV Bharat / international

ಮ್ಯಾನ್ಮಾರ್​ನಲ್ಲಿ ಶಸ್ತ್ರಸಜ್ಜಿತರಿಂದ ದಾಳಿ: ಪೊಲೀಸರು, ನಾಗರಿಕರು ಸೇರಿ 12 ಮಂದಿ ಬಲಿ - Myanmar govt

ಮ್ಯಾನ್ಮಾರ್ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಆರ್ಮಿ ನಡೆಸಿದ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ.

12 killed in armed attack in Myanmar
ಮ್ಯಾನ್ಮಾರ್​ನಲ್ಲಿ ಶಸ್ತ್ರಸಜ್ಜಿತರಿಂದ ದಾಳಿ
author img

By

Published : Feb 6, 2021, 11:40 AM IST

ಯಾಂಗೂನ್: ಮ್ಯಾನ್ಮಾರ್​ನ ಕೇಂದ್ರ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯರ ಬೆಂಗಾವಲು ವಾಹನದ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ನಡೆಸಿದ್ದು, ಒಂಬತ್ತು ನಾಗರಿಕರು ಮತ್ತು ಮೂವರು ಪೊಲೀಸರು ಬಲಿಯಾಗಿದ್ದಾರೆ.

ಮ್ಯಾನ್ಮಾರ್ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಆರ್ಮಿ (ಎಂಎನ್‌ಡಿಎಎ)ಯ 20 ಸದಸ್ಯರ ಗುಂಪು ಕೊಕಾಂಗ್ ಸ್ವ-ಆಡಳಿತ ವಲಯದ ಕೇಂದ್ರ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯರಾದ ಯು ಖಿನ್ ಮಾಂಗ್ ಎಲ್ವಿನ್​ರ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಇನ್ನೂ ಎಂಟು ನಾಗರಿಕರು ಮತ್ತು ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಕ್ರಾಂತಿ: ಸೂಕಿ ಸೇರಿ ಹಲವರು ವಶಕ್ಕೆ, ತುರ್ತುಪರಿಸ್ಥಿತಿ ಘೋಷಿಸಿದ ಸೇನೆ

ಮ್ಯಾನ್ಮಾರ್​ನಲ್ಲಿ ಸರ್ಕಾರ ಮತ್ತು ಮಿಲಿಟರಿ ಆಡಳಿತದ ನಡುವೆ ಕಳೆದ ಹಲವು ದಿನಗಳಿಂದ ಸಂಘರ್ಷ ನಡೆಯುತ್ತಿದ್ದು, ರಾಜಕೀಯ ಅಸ್ಥಿರತೆ ಮುಂದುವರಿದಿದೆ. ದೇಶದಲ್ಲಿ ಒಂದು ವರ್ಷ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಈ ದಾಳಿ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.