ವಾಷಿಂಗ್ಟನ್: ಜಗತಿನ ಪ್ರಸಿದ್ಧ ಕಲಾವಿದ ಲಿಯೊನಾರ್ಡೋ ಡಾ ವಿಂಚಿಯ 500 ವರ್ಷಗಳ ಹಳೆಯ ಪೇಂಟಿಂಗ್ ಒಂದು ದುಬಾರಿ ಬೆಲೆಗೆ ಮಾರಾಟವಾದ ದಾಖಲೆ ನಿರ್ಮಿಸಿದೆ.
'ಸಲ್ವಾಟರ್ ಮುಂಡಿ' ಪೇಂಟಿಂಗ್ ಹರಾಜೊಂದರಲ್ಲಿ ₹ 3,125 ಕೋಟಿ (450 ಮಿಲಿಯನ್ ಡಾಲರ್)ಗೆ ಮಾರಾಟವಾಗಿದೆ. ಲಂಡನ್ ಮೂಲದ ಕಲಾ ವ್ಯಾಪಾರಿ ಕೆನ್ನಿ ಷಾಚ್ಟರ್ ವೆಬ್ಸೈಟ್, 'ವಿಶ್ವದಲ್ಲಿಯೇ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಪೇಂಟಿಂಗ್ ಎಂಬ ಹೆಗ್ಗಳಿಕೆ ಪಡೆದಿದೆ ಎಂದು ಹೇಳಿಕೊಂಡಿದೆ.
ಸಲ್ವಾಟರ್ ಮುಂಡಿ ಹಾಗೂ ಸೇವಿಯರ್ ಆಫ್ ದಿ ವರ್ಲ್ಡ್ ಚಿತ್ರಕಲೆಯಲ್ಲಿ ಏಸು ಕ್ರಿಸ್ತನನ್ನು ಚಿತ್ರಿಸಲಾಗಿದೆ. ಕಲಾ ಜಗತ್ತಿನ ಶ್ರೇಷ್ಠ ರಹಸ್ಯಗಳಲ್ಲಿ ಇದು ಕೂಡ ಒಂದಾಗಿದೆ. ಸದ್ಯ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮಾಲೀಕತ್ವದ ಗಾರ್ಗಂಟ್ವಾನ್ ವಿಹಾರ ನೌಕೆಯಲ್ಲಿದೆ.
ಏಸು ಕ್ರಿಸ್ತನ ಈ ತೈಲ ವರ್ಣಚಿತ್ರವು ಒಂದು ಕೈಯಿಂದ ಜಗತ್ತನ್ನು ಆಶೀರ್ವದಿಸುವ ಮತ್ತೊಂದು ಕೈಯಲ್ಲಿ ಪಾರದರ್ಶಕ ಗೋಳವನ್ನು ಹಿಡಿದ್ದಾರೆ. ಇದರ ಮಾಲೀಕತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತು ವಿಶ್ವಾಸಾರ್ಹತೆಯ ಕುರಿತು ಆಗಾಗೆ ಪ್ರಶ್ನಿಸಲಾಗುತ್ತಿದೆ. ಈ ಎಲ್ಲ ವಿವಾದಗಳ ಮಧ್ಯೆ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ.