ETV Bharat / international

ಡೆಮಾಕ್ರಟಿಕ್ ಪಕ್ಷ ಜಯಗಳಿಸಿದ್ರೆ ಗಡಿ ವಿಚಾರಗಳಲ್ಲೂ ಭಾರತದ ಪರ: ಜೋ ಬಿಡೆನ್​ - ಡೊನಾಲ್ಡ್ ಟ್ರಂಪ್​

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಆಯ್ಕೆಯಾದರೆ ಭಾರತ ಪರ ನಿಲ್ಲುವುದಾಗಿ ಹಾಗೂ ಭಾರತ ಮತ್ತು ಅಮೆರಿಕದ ಸಂಬಂಧವನ್ನು ಇನ್ನಷ್ಟು ಬಲಪಡಿಸಲಾಗುತ್ತದೆ ಎಂದು ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಸ್ಪಷ್ಟಪಡಿಸಿದ್ದಾರೆ.

Joe Biden
ಜೋ ಬಿಡನ್
author img

By

Published : Aug 16, 2020, 11:50 AM IST

ವಾಷಿಂಗ್ಟನ್ (ಅಮೆರಿಕ): ಈ ಬಾರಿಯ ಚುನಾವಣೆಯಲ್ಲಿ ತಾವು ಆಯ್ಕೆಯಾದರೆ ಭಾರತ ಪರ ನಿಲ್ಲುವುದಾಗಿ ಹಾಗೂ ಭಾರತ ಮತ್ತು ಅಮೆರಿಕದ ಸಂಬಂಧವನ್ನು ಇನ್ನಷ್ಟು ನಲಪಡಿಸಲಾಗುತ್ತದೆ ಎಂದು ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಸ್ಪಷ್ಟಪಡಿಸಿದ್ದಾರೆ.

ಇದೇ ವರ್ಷ ನವೆಂಬರ್ 3ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಈ ಬಾರಿ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್ ಟ್ರಂಪ್ ಎದುರಾಳಿಯಾಗಿರುವ ಡೆಮಾಕ್ರಟಿಕ್​ ಪಕ್ಷದ ಜೋ ಬಿಡೆನ್ ಅಮೆರಿಕದಲ್ಲಿನ ಅನಿವಾಸಿ ಭಾರತೀಯ ಮತಗಳನ್ನು ಸೆಳೆಯಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ತಮ್ಮದೇ ಪಕ್ಷದ ಕಮಲಾ ಹ್ಯಾರಿಸ್ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧೆ ನಡೆಸುತ್ತಿರುವುದು ಜೋ ಬಿಡೆನ್ ಅವರಿಗೆ ವರವಾಗಲಿದ್ದು, ಅದರ ಜೊತೆಗೆ ಭಾರತದೊಂದಿಗೆ ಬಾಂಧವ್ಯವನ್ನು ಹೆಚ್ಚಿಸುವ ಮಾತುಗಳನ್ನಾಡಿದ್ದಾರೆ.

15 ವರ್ಷಗಳ ಹಿಂದೆ ಭಾರತದೊಂದಿಗಿನ ನಾಗರಿಕ ಅಣ್ವಸ್ತ್ರದ ಬಗೆಗಿನ ಐತಿಹಾಸಿಕ ಒಪ್ಪಂದಕ್ಕೆ ನಾನು ಒಪ್ಪಿಗೆ ನೀಡಿದ್ದೆ. ಭಾರತ ಹಾಗೂ ಅಮೆರಿಕ ಒಗ್ಗಟ್ಟಾಗಿದ್ದರೆ ಜಗತ್ತು ಸುರಕ್ಷಿತವಾಗಿರುತ್ತದೆ ಎಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ವೇಳೆ ಇಂಡೋ-ಅಮೆರಿಕನ್ ನಾಗರಿಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಬಿಡೆನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ನಮ್ಮ ಪಕ್ಷ ಅಮೆರಿಕದಲ್ಲಿ ಅಧಿಕಾರಕ್ಕೆ ಬಂದರೆ ಭಾರತ ಎದುರಿಸುತ್ತಿರುವ ಸವಾಲುಗಳು ಹಾಗೂ ಬೇರೆ ಬೇರೆ ರಾಷ್ಟ್ರಗಳೊಂದಿಗೆ ಹೊಂದಿರುವ ವಿವಾದಗಳ ವಿಚಾರದಲ್ಲಿ ನಾವು ಭಾರತದ ಪರ ನಿಲ್ಲುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಬೇರೆ ಬೇರೆ ಅಧ್ಯಕ್ಷರ ವೇಳೆಗಿಂತ ನಾನು ಉಪಾಧ್ಯಕ್ಷನಾಗಿದ್ದ ಬರಾಕ್​ ಒಬಾಮಾ ಅವರ ಆಡಳಿತಾವಧಿಯಲ್ಲೇ ಹೆಚ್ಚು ಮಂದಿ ಇಂಡೋ-ಅಮೆರಿಕನ್ ಸಹೋದ್ಯೋಗಿಗಳು ನಮ್ಮೊಂದಿಗಿದ್ದಾರೆ. ನನ್ನ ಆತ್ಮೀಯ ಸ್ನೇಹಿತೆ ಕಮಲಾ ಹ್ಯಾರಿಸ್ ಕೂಡಾ ಇವರಲ್ಲೊಬ್ಬರು ಎಂದು ಬಿಡೆನ್ ಈ ವೇಳೆ ಹೇಳಿದ್ದಾರೆ.

ಕಮಲಾ ಹ್ಯಾರಿಸ್ ಸ್ಮಾರ್ಟ್ ಎಂದು ನಮಗೆಲ್ಲರಿಗೂ ತಿಳಿದಿದೆ. ಕಮಲಾ ಅವರ ತಾಯಿ ಅವರದ್ದು ಸ್ಫೂರ್ತಿದಾಯಕ ಕತೆ ಎಂದು​ ಕಮಲಾ ಹ್ಯಾರಿಸ್ ಹಾಗೂ ಅವರ ಕುಟುಂಬದ ಸಾಹಸಗಾಥೆಯನ್ನು ಜೋ ಬಿಡೆನ್​ ಪ್ರಶಂಸಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.