ವಾಷಿಂಗ್ಟನ್: ಉಕ್ರೇನ್ಗೆ ಭದ್ರತಾ ನೆರವನ್ನು ತಡೆಹಿಡಿಯುವ ಮೂಲಕ ಅಮೆರಿಕಾ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಡರಲ್ ಕಾನೂನನ್ನು ಉಲ್ಲಂಘಿಸಿದೆ ಎಂದು ಫೆಡರಲ್ ವಾಚ್ ಡಾಗ್ ಸಂಸ್ಥೆ ತಿಳಿಸಿದೆ.
ಒಂದು ವರ್ಷದ ಹಿಂದೆ ಉಕ್ರೇನ್ಗೆ ಕಾಂಗ್ರೆಸ್(ಅಮೆರಿಕಾ ಸಂಸತ್) ಸಹಾಯಹಸ್ತವನ್ನು ನೀಡಿತ್ತು. ಇದನ್ನು ತಡೆಹಿಡಿಯುವ ಮೂಲಕ ಮ್ಯಾನೇಜ್ಮೆಂಟ್ ಮತ್ತು ಬಜೆಟ್ ಇಲಾಖೆಯೂ ಕಾನೂನನ್ನು ಉಲ್ಲಂಘಿಸಿದೆ ಎಂದು ಸರ್ಕಾರಿ ಅಕೌಂಟೆಬಿಲಿಟಿ ಆಫೀಸ್ ವರದಿಯಲ್ಲಿ ತಿಳಿಸಿದೆ. ಅಧ್ಯಕ್ಷರು ಈ ರೀತಿ ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ಎಂದು ವರದಿಯಲ್ಲಿ ಟ್ರಂಪ್ಗೆ ಚಾಟಿ ಬೀಸಲಾಗಿದೆ..
ಕಳೆದ ಬೇಸಿಗೆಯಲ್ಲಿ ಟ್ರಂಪ್‌ರ ಆದೇಶದ ಮೇರೆಗೆ ಮತ್ತು ಕಾಂಗ್ರೆಸ್ನ ಒತ್ತಾಯದಿಂದ ಸಹಾಯಹಸ್ತವನ್ನ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು. ಭದ್ರತಾ ನೆರವು ವಿಳಂಬಗೊಳಿಸುವಲ್ಲಿ ಒಎಂಬಿ ಇಂಪೌಂಡ್ಮೆಂಟ್ ಕಂಟ್ರೋಲ್ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ವರದಿ ಮಾಡುವ ಸ್ವತಂತ್ರ ಸಂಸ್ಥೆ ಹೇಳಿದೆ.
ಆದರೆ ಕ್ಯಾಪಿಟಲ್ ಹಿಲ್ ಡೆಮೋಕ್ರಾಟ್‌ಗಳು ಈ ಆರೋಪವನ್ನು ನಿರಾಕರಿಸಿದ್ದಾರೆ. ಈ ವರದಿ ಕಾನೂನುಬಾಹಿರವಾಗಿದೆ. ಟ್ರಂಪ್ ಅವರ ದೋಷಾರೋಪಣೆ ತನಿಖೆಯಲ್ಲಿ ಪ್ರಮುಖ ವ್ಯಕ್ತಿಯಾಗಿರುವ ಆಕ್ಟಿಂಗ್ ಚೀಫ್ ಆಫ್ ಸ್ಟಾಫ್ ಮಿಕ್ ಮುಲ್ವಾನೆ ಅವರು ಒಎಮ್ಬಿ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಹಾಗಾಗಿ ಈ ರೀತಿ ವರದಿ ನೀಡಿದ್ದಾರೆಂದು, ಆರೋಪವನ್ನು ತಳ್ಳಿ ಹಾಕಿದ್ದಾರೆ.