ETV Bharat / international

ಶ್ವೇತಭವನದೊಳಗೆ ಬಂದ ಅನುಮಾನಾಸ್ಪದ ವಿಮಾನ: ಅರ್ಧಗಂಟೆ ವೈಟ್​ಹೌಸ್​ ಲಾಕ್​​ಡೌನ್​ - ಶ್ವೇತ ಭವನದ ನಿರ್ಬಂಧಿತ ಪ್ರದೇಶಕ್ಕೆ ವಿಮಾನ

ಅನುಮಾನಸ್ಪದ ವಿಮಾನವೊಂದು ಶ್ವೇತಭವನದ ನಿಷೇಧಿತ ಪ್ರದೇಶದೊಳಗೆ ಬಂದಿದ್ದರಿಂದ ಲಾಕ್​ಡೌನ್​​ ಜಾರಿಗೊಳಿಸಲಾಗಿತ್ತು. ಆದ್ರೆ ಇದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದ ಬಳಿಕ ತೆರವುಗೊಳಿಸಲಾಗಿದೆ.

White House lockdown lifted after aircraft found out not to be 'hostile'
ಶ್ವೇತಭವನದೊಳಗೆ ಬಂದ ಅನುಮಾನಸ್ಪದ ವಿಮಾನ
author img

By

Published : Nov 27, 2019, 8:26 AM IST

ವಾಷಿಂಗ್ಟನ್: ಅಮೆರಿಕದ ಶ್ವೇತ ಭವನದ ಸುತ್ತಮುತ್ತ ಜಾರಿಗೊಳಿಸಿದ್ದ ನಿಷೇಧವನ್ನ ತೀವ್ರ ತಪಾಸಣೆ ಬಳಿಕ ತೆರವುಗೊಳಿಸಲಾಗಿದೆ. ಶ್ವೇತ ಭವನದ ನಿರ್ಬಂಧಿತ ಪ್ರದೇಶಕ್ಕೆ ವಿಮಾನವೊಂದು ಬಂದಿಳಿದ ಹಿನ್ನೆಲೆ ಇದು ಯಾವುದೋ ಶತ್ರುವಿನ ವಿಮಾನ ಇರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿತ್ತು. ನಿನ್ನೆ ಈ ವಿಮಾನದಿಂದ ಯಾವುದೇ ತೊಂದರೆ ಇಲ್ಲ ಎಂದು ವರದಿ ಬಂದಿದ್ದರಿಂದ ಪೊಲೀಸರು ಲಾಕ್​​ಡೌನ್​ ತೆರವುಗೊಳಿಸಿದ್ದಾರೆ.

ಶ್ವೇತಭವನದೊಳಗೆ ಬಂದ ಅನುಮಾನಸ್ಪದ ವಿಮಾನ

ಈ ಘಟನೆಯು ವಾಷಿಂಗ್ಟನ್‌ನಲ್ಲಿ ಸಾಕಷ್ಟು ಭೀತಿಯನ್ನುಂಟು ಮಾಡಿತ್ತು. ಹಾಗಾಗಿ ಯುಎಸ್ ಕ್ಯಾಪಿಟಲ್​​ನನ್ನು ಸ್ಥಳಾಂತರಿಸಲಾಗಿತ್ತು. ಅಲ್ಲದೇ ಶ್ವೇತಭವನದ ಸುತ್ತಮುತ್ತಲಿನ ರಸ್ತೆಗಳನ್ನು ಸಂಚಾರಕ್ಕೆ ಮುಚ್ಚಲಾಗಿತ್ತು.

ಈ ಸಂಬಂಧ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಈ ವಿಮಾನದಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಶ್ವೇತಭವನದ ಲಾಕ್​ಡೌನ್​​ನನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.

White House lockdown lifted after aircraft found out not to be 'hostile'
ಶ್ವೇತಭವನದೊಳಗೆ ಬಂದ ಅನುಮಾನಸ್ಪದ ವಿಮಾನ

ಎರಡು ಯುಎಸ್ ಕ್ಯಾಪಿಟಲ್ ಪೊಲೀಸ್ ಮೂಲಗಳ ಪ್ರಕಾರ ಪರಿಸ್ಥಿತಿ ಹತೋಟಿಗೆ ಬಂದಿದೆ. ಆದ್ರೆ ಈ ವಿಮಾನ ಹೇಗೆ ಬಂದಿದೆ ಮತ್ತು ಎಲ್ಲಿಂದ ಬಂದಿರುವುದು ತಿಳಿದು ಬಂದಿಲ್ಲ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

Intro:Body:

ds

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.