ETV Bharat / international

ನೀರು-ಸೋಪ್​ನಿಂದ ಕೈತೊಳೆದರೆ ಕೊರೊನಾ ಆರ್ಭಟ ಕ್ಷೀಣ: ವಿಶ್ವ ಆರೋಗ್ಯ ಸಂಸ್ಥೆ - ಕೊರೊನಾ ವೈರಸ್ ಲಕ್ಷಣಗಳು

ನೀರು ಮತ್ತು ಸಾಬೂನಿನಿಂದ ಕೈ ತೊಳೆಯುವುದು ವೈರಸ್ ಅನ್ನು ಕೊಲ್ಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದಕ್ಕೆ ಏಷ್ಯಾನ್​ ಡೆವಲಪ್‌ಮೆಂಟ್ ಬ್ಯಾಂಕ್​ನ ಅಧ್ಯಕ್ಷರು ಸೇರಿದಂತೆ ವಿಶ್ವದ ಹಲವು ದೇಶದ ನಾಯಕರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ
author img

By

Published : May 15, 2020, 9:58 PM IST

ಹೈದರಾಬಾದ್: ಕೊರೊನಾ ವೈರಸ್​ ಹರಡುವುದನ್ನು ತಡೆಗಟ್ಟುವಲ್ಲಿ ನೀರು, ಸ್ಯಾನಿಟೈಸೇಷನ್​ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವುದರ ಜತೆಗೆ ಸಾಮಾಜಿಕ ಅಂತರವು ಅತಿ ಮುಖ್ಯವಾಗಿವೆ. ಇದು ಕೋವಿಡ್​ನಿಂದ ಜೀವ ಉಳಿಸುವ ಮತ್ತು ಆರೋಗ್ಯ ರಕ್ಷಣೆಯ ಮೊದಲ ಹಂತವಾಗಿದೆ. ನೀರು ಮತ್ತು ಸಾಬೂನಿನಿಂದ ಕೈ ತೊಳೆದರೆ ವೈರಸ್ ನಾಶವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ತಿಳಿಸಿದೆ.

ಏಷ್ಯಾನ್​ ಡೆವಲಪ್‌ಮೆಂಟ್ ಬ್ಯಾಂಕ್​ನ ಅಧ್ಯಕ್ಷರು ಸೇರಿದಂತೆ ವಿಶ್ವದ ಹಲವು ದೇಶದ ನಾಯಕರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ.

ನೀರು ಮತ್ತು ಸ್ಯಾನಿಟೈಸರ್​ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು, ಅಸಮಾನತೆಗಳನ್ನು ಹೋಗಲಾಡಿಸುವುದು, ಕೊರೊನಾಗೆ ಹೆಚ್ಚು ಗುರಿಯಾಗುವ ಸಾಧ್ಯತೆ ಇರುವವರನ್ನು ನೋಡಿಕೊಳ್ಳುವುದು ಅಗತ್ಯವಾಗಿದೆ. ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಅಂತರಗಳು ಜನರನ್ನು ಕೊರೊನಾದಿಂದ ರಕ್ಷಿಸಲು ಮಾತ್ರವಲ್ಲ ಇತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ ಎಂದು ಹೇಳಿದೆ.

ಜನರ ಆರೋಗ್ಯವನ್ನು ರಕ್ಷಿಸಲು ಮತ್ತು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳನ್ನು ಬೆಂಬಲಿಸಲು ನೀರು ಮತ್ತು ಸ್ಯಾನಿಟೈಸರ್​ ವ್ಯವಸ್ಥೆಗಳು ಸ್ಥಿತಿಸ್ಥಾಪಕ ಮತ್ತು ಸುಸ್ಥಿರವೆಂದು ಖಚಿತಪಡಿಸಿಕೊಳ್ಳಬೇಕಿದೆ. ನೈರ್ಮಲ್ಯಕ್ಕೆ ಅಗತ್ಯವಿರುವ ವಸ್ತುಗಳ ಉತ್ಪಾದನಾ ಸಾಮರ್ಥ್ಯ ಸೇರಿದಂತೆ ಅಸ್ತವ್ಯಸ್ತವಾಗಿರುವ ಜಾಗತಿಕ ಪೂರೈಕೆ ಸರಪಳಿಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.