ETV Bharat / international

ಟ್ರಂಪ್​ ವಿರುದ್ಧ ಕೊಲೆ ಆರೋಪ; ಇರಾಕ್ ಕೋರ್ಟ್​ನಿಂದ ಅರೆಸ್ಟ್ ವಾರೆಂಟ್ ಜಾರಿ - ಇರಾಕ್​ ನ್ಯಾಯಾಲಯ ಟ್ರಂಪ್​ ವಿರುದ್ಧ ಬಂಧನ ವಾರೆಂಟ್

ಅಮೆರಿಕ ಅಧ್ಯಕ್ಷ ಸ್ಥಾನದಿಂದ ಡೊನಾಲ್ಡ್​ ಟ್ರಂಪ್ ಜನವರಿ 20ರಂದು ಕೆಳಗಿಳಿಯಲಿದ್ದು, ಇದರ ಬೆನ್ನಲ್ಲೇ ಅವರ ವಿರುದ್ಧ ಅರೆಸ್ಟ್​ ವಾರೆಂಟ್ ಜಾರಿಯಾಗಿದೆ.

US President Donald Trump
US President Donald Trump
author img

By

Published : Jan 8, 2021, 5:20 PM IST

Updated : Jan 8, 2021, 5:30 PM IST

ಬಾಗ್ದಾದ್​: ಅಮೆರಿಕ ಅಧ್ಯಕ್ಷೀಯ ಸ್ಥಾನದಿಂದ ಕೆಲವೇ ದಿನಗಳಲ್ಲಿ ಕೆಳಗಿಳಿಯಲಿರುವ ಡೊನಾಲ್ಡ್​ ಟ್ರಂಪ್​ ವಿರುದ್ಧ ಇದೀಗ ಅರೆಸ್ಟ್​ ವಾರೆಂಟ್ ಜಾರಿಯಾಗಿದೆ.

ಕಳೆದ ವರ್ಷ ಜನವರಿ 2020ರಲ್ಲಿ ನಡೆದಿರುವ ಇರಾನ್ ಜನರಲ್ ಹತ್ಯೆ ಹಾಗೂ​ ಇರಾಕಿ ಸೇನಾ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಇರಾಕ್​ ನ್ಯಾಯಾಲಯ ಟ್ರಂಪ್​ ವಿರುದ್ಧ ಬಂಧನ ವಾರೆಂಟ್​ ಜಾರಿ ಮಾಡಿದೆ. ಬಾಗ್ದಾದ್​ ಕೋರ್ಟ್​ ಈ ಮಾಹಿತಿ ನೀಡಿದ್ದು, ಜನರಲ್​ ಖಾಸಿಂ ಸುಲೇಮಾನಿ ಹಾಗೂ ಅಬು ಮಹ್ದಿ ಅಲ್​ ಮುಹಂದೀಸ್​​ ಕಳೆದ ವರ್ಷ ಜನವರಿಯಲ್ಲಿ ಯುಎಸ್​ನಿಂದ ನಡೆದ ಡ್ರೋನ್​ ದಾಳಿಯಲ್ಲಿ ಸಾವನ್ನಪ್ಪಿದ್ದರು. ಇದರ ಬಗ್ಗೆ ತನಿಖೆ ನಡೆಸಿರುವ ಬಾಗ್ದಾದ್​ ಇನ್ವೆಸ್ಟಿಗೇಟಿವ್​ ಕೋರ್ಟ್​ ಟ್ರಂಪ್​ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ.

ಓದಿ: ವಿಡಿಯೋ: ಮೊದಲ ಕೋವಿಡ್‌ ಲಸಿಕೆ ಪಡೆದು ಮಾದರಿಯಾದ ಸಿಂಗಪುರ ಪ್ರಧಾನಿ!

ಅಲ್​ ಮಹಂದೀಸ್​​ ಅವರ ಕುಟುಂಬ ಸದಸ್ಯರು ನೀಡಿದ್ದ ದೂರು ಹಾಗೂ ಪ್ರಾಥಮಿಕ ತನಿಖಾ ಕಾರ್ಯ ವಿಧಾನ ಪೂರ್ಣಗೊಳಿಸಿದ ನಂತರ ನ್ಯಾಯಾಧೀಶರು ಈ ಅರೆಸ್ಟ್​ ವಾರೆಂಟ್​ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇಸ್ಲಾಮಿಕ್​ ಸ್ಟೇಟ್​ ಭಯೋತ್ಪಾದಕ ಸಂಸ್ಥೆ ವಿರುದ್ಧ ಹೋರಾಡಲು ಸ್ಥಾಪನೆ ಮಾಡಲಾಗಿದ್ದ ಪಾಪ್ಯುಲರ್​ ಮೊಬಿಲೈಸೇಶನ್​ ಫೋರ್ಸ್​ನ ಉಪನಾಯಕರಾಗಿ ಅಲ್ ಮಹಂದೀಸ್ ಆಯ್ಕೆಯಾಗಿದ್ದರು.

Last Updated : Jan 8, 2021, 5:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.