ವಾಷಿಂಗ್ಟನ್: ಸ್ಟ್ಯಾಂಡ್-ಅಪ್ ಹಾಸ್ಯನಟ ಮತ್ತು ನಟ ವೀರ್ ದಾಸ್ ಅವರು 'ದಿ ಬಬಲ್' ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.
ಚಲನಚಿತ್ರ ನಿರ್ಮಾಪಕ ಜುಡ್ ಆಪಟೋವ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರವು ಹಾಸ್ಯ ಪ್ರೇರಿತವಾಗಿದೆ. ಇಂಗ್ಲೆಂಡ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇದೀಗ ಹಾಸ್ಯನಟ ವೀರ್ ದಾಸ್ ಅವರು ಸಹ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬ್ಯಾರಿ ಮೆಂಡೆಲ್, ಡೊನಾಲ್ಡ್ ಸಬೌರಿನ್ ಮತ್ತು ಬ್ರಾಡಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದು, 'ಸೌತ್ ಪಾರ್ಕ್' ಖ್ಯಾತಿಯ ಪಾಮ್ ಬ್ರಾಡಿ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದಾರೆ. ಜೊತೆಗೆ ಕರೆನ್ ಗಿಲ್ಲನ್, ಐರಿಸ್ ಆಪಟೋವ್, ಫ್ರೆಡ್ ಆರ್ಮಿಸೆನ್, ಮಾರಿಯಾ ಬಕಲೋವಾ, ಡೇವಿಡ್ ಡುಚೊವ್ನಿ, ಕೀಗನ್-ಮೈಕೆಲ್ ಕೀ, ಲೆಸ್ಲಿ ಮನ್, ಪೆಡ್ರೊ ಪ್ಯಾಸ್ಕಲ್ ಮತ್ತು ಪೀಟರ್ ಸೆರಾಫಿನೋವಿಕ್ ಸೇರಿದಂತೆ ಮುಂತಾದ ನಟ ನಟಿಯರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.