ವಾಷಿಂಗ್ಟನ್ (ಅಮೆರಿಕಾ): ತಾಲಿಬಾನ್ ಉಗ್ರಪಡೆ ಆಫ್ಘನ್ ಸೇನೆಯಿಂದ ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ಹಿಡಿದು, ಅಮೆರಿಕ ಸೇನೆಯ ಸಮವಸ್ತ್ರ ಧರಿಸಿ ತಿರುಗಾಡುತ್ತಿರುವುದು ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಮುಜುಗರವನ್ನುಂಟು ಮಾಡಿದೆ.
-
دا ۲۱۷ پامیر قول اردو ده، چې نن ماسپښین مجاهدینو فتحه کړ.
— Zabihullah (..ذبـــــیح الله م ) (@Zabehulah_M33) August 11, 2021 " class="align-text-top noRightClick twitterSection" data="
په دې قول اردو کې د هندۍ نظامي هلیکوپترو سربیره لسګونه عرادې ډول ډول نظامي وسائط، وسلې او نور وسائل د مجاهدینو لاس ته ورغلل. pic.twitter.com/Jrci8BedsW
">دا ۲۱۷ پامیر قول اردو ده، چې نن ماسپښین مجاهدینو فتحه کړ.
— Zabihullah (..ذبـــــیح الله م ) (@Zabehulah_M33) August 11, 2021
په دې قول اردو کې د هندۍ نظامي هلیکوپترو سربیره لسګونه عرادې ډول ډول نظامي وسائط، وسلې او نور وسائل د مجاهدینو لاس ته ورغلل. pic.twitter.com/Jrci8BedsWدا ۲۱۷ پامیر قول اردو ده، چې نن ماسپښین مجاهدینو فتحه کړ.
— Zabihullah (..ذبـــــیح الله م ) (@Zabehulah_M33) August 11, 2021
په دې قول اردو کې د هندۍ نظامي هلیکوپترو سربیره لسګونه عرادې ډول ډول نظامي وسائط، وسلې او نور وسائل د مجاهدینو لاس ته ورغلل. pic.twitter.com/Jrci8BedsW
ಒಂದು ತಿಂಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ತಾಲಿಬಾನ್ ಉಗ್ರಪಡೆ ಆಫ್ಘನ್ ಅನ್ನು ವಶಪಡಿಸಿಕೊಂಡು ತನ್ನ ಅಧಿಪತ್ಯ ಸ್ಥಾಪಿಸಿದೆ. ಈ ಮಧ್ಯೆ ಉಗ್ರರು, ಆಫ್ಘನ್ ಸಶಸ್ತ್ರ ಪಡೆಗಳಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಉಪಕರಣಗಳು, ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಹೆಚ್ಚಿನ ಉಪಕರಣಗಳು ಇತ್ತೀಚೆಗಷ್ಟೇ ವಾಷಿಂಗ್ಟನ್ನಿಂದ ಸರಬರಾಜಾಗಿದ್ದವು.
ಇದೀಗ, ಉಗ್ರರು ಅಮೆರಿಕದ M4, M18, M24 ಸ್ನೈಪರ್ ಶಸ್ತ್ರಾಸ್ತ್ರಗಳನ್ನು ಹಿಡಿದು, ಅಮೆರಿಕ ಸೇನೆಯ ಸಮವಸ್ತ್ರ ಧರಿಸಿ, ಹಮ್ವೀಸ್ನಲ್ಲಿ ಓಡಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.
20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಬೀಡುಬಿಟ್ಟಿದ್ದ ಅಮೆರಿಕ ಸೇನೆಯನ್ನು ಬೈಡನ್ ಸರ್ಕಾರ ಇತ್ತೀಚೆಗಷ್ಟೇ ಹಿಂತೆಗೆದುಕೊಂಡಿತ್ತು. ಇದೇ ಸಮಯದಲ್ಲಿ ತಾಲಿಬಾನ್ ಕಾಬೂಲ್ನನ್ನು ಆಕ್ರಮಿಸಿ ತನ್ನ ಸರ್ಕಾರ ರಚಿಸಲು ಮುಂದಾಯಿತು.
ತಾಲಿಬಾನ್ ಆಫ್ಘನ್ ಪಡೆಗಳಿಂದ ಹೆಚ್ಚಿನ ಸಲಕರಣೆಗಳನ್ನು ವಶಪಡಿಸಿಕೊಂಡಿತ್ತು. ಅಮೆರಿಕ ಸೇನೆಯಿಂದ ಆಫ್ಘನ್ ಸೇನೆ ಎರಡು ದಶಗಳ ಕಾಲ ತರಬೇತಿ ಪಡೆದಿದ್ದು, ಹತ್ತಾರು ಶತಕೋಟಿ ಡಾಲರ್ ಮೌಲ್ಯದ ಶಸ್ತ್ರ ಸಾಮಗ್ರಿಗಳನ್ನು ಖರೀದಿಸಿದ್ದರು. ವಾರಾಂತ್ಯದಲ್ಲಿ ಆಫ್ಘನ್ ಸೇನೆಯು ಯಾವುದೇ ಹೋರಾಟವಿಲ್ಲದೇ ತಾಲಿಬಾನ್ಗೆ ಶರಣಾಯಿತು.
ಇದನ್ನೂ ಓದಿ: ನೋಡಿ: ಕಾಬೂಲ್ ಏರ್ಪೋರ್ಟ್‌ನಲ್ಲಿ ಕಂಡುಬಂದ ಮನಕಲುಕುವ ದೃಶ್ಯಗಳು..
ಅಧಿಕೃತ ಅಂಕಿ - ಅಂಶಗಳ ಪ್ರಕಾರ, ಅಮೆರಿಕ ಮಿಲಿಟರಿ ಇತ್ತೀಚಿನ ವರ್ಷಗಳಲ್ಲಿ 7,000 ಕ್ಕಿಂತ ಹೆಚ್ಚು ಮೆಷಿನ್ ಗನ್, 4,700 ಹಮ್ವೀಗಳು ಮತ್ತು 20,000 ಗ್ರೆನೇಡ್ ಗಳನ್ನು ಆಫ್ಘನ್ ಸೇನೆಗೆ ಪೂರೈಸಿತು. ವಾಷಿಂಗ್ಟನ್ನಿಂದ ಆಫ್ಘನ್ ಸೇನೆ ಫಿರಂಗಿ, ಡ್ರೋನ್, 200 ಕ್ಕೂ ಹೆಚ್ಚು ವಿಮಾನಗಳು, ವಿಂಗ್, ಹೆಲಿಕಾಪ್ಟರ್ಗಳನ್ನು ಖರೀದಿಸಿತ್ತು.
ರಕ್ಷಣಾ ತಜ್ಞರಾದ ಜೇನ್ಸ್ ಪ್ರಕಾರ, ತಾಲಿಬಾನ್ನಿಂದ ತಪ್ಪಿಸಿಕೊಳ್ಳಲು ಐದು UH-60 ಬ್ಲಾಕ್ ಹಾಕ್ ಮತ್ತು 16 ರಷ್ಯಾ Mi-17 ಹೆಲಿಕಾಪ್ಟರ್‌ಗಳು ಮತ್ತು 10 A-29 ವಿಮಾನಗಳು ಸೇರಿದಂತೆ ಸುಮಾರು 40 ಅಫ್ಘಾನ್ ಮಿಲಿಟರಿ ವಿಮಾನಗಳನ್ನು ಉಜ್ಬೇಕಿಸ್ತಾನಕ್ಕೆ ಹಾರಿಸಲಾಯಿತು. ದೇಶದ ಜನರ ಹಿತಾಸಕ್ತಿ ವಿರುದ್ಧವಾಗಿ ವರ್ತಿಸುವವರ ಕೈಯಲ್ಲಿ ನಮ್ಮ ಉಪಕರಣಳಿರುವುದನ್ನು ನೋಡುವುದು ನಮಗೆ ಇಷ್ಟವಿಲ್ಲ ಎಂದು ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.