ETV Bharat / international

ಜಾಗತಿಕ ಒಕ್ಕೂಟ ನಿರ್ಮಿಸಲು ಬೈಡನ್​​ ಸರ್ಕಾರ ಕೆಲಸ ಮಾಡುತ್ತಿದೆ: ಜೆನ್ ಪ್ಸಾಕಿ - ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ

ಬೈಡನ್ ಆಡಳಿತವು ಜಿ-7 ಮತ್ತು ನ್ಯಾಟೋ ಸಂಘಟನೆ ಮೀರಿ ಜಾಗತಿಕ ಒಕ್ಕೂಟ ನಿರ್ಮಿಸಲು ಕೆಲಸ ಮಾಡುತ್ತಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿದರು.

White House Press Secretary Jen Psaki
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ
author img

By

Published : Mar 15, 2022, 10:59 AM IST

ವಾಷಿಂಗ್ಟನ್(ಅಮೆರಿಕ): ಬೈಡನ್ ಆಡಳಿತವು ಜಿ-7(ಜಗತ್ತಿನ ಪ್ರಮುಖ ಆರ್ಥಿಕ ಬಲಾಡ್ಯ ದೇಶಗಳಾದ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಇಂಗ್ಲೆಂಡ್‌ ದೇಶಗಳು ಸೇರಿ ಮಾಡಿಕೊಂಡಿರುವ ಅನಧಿಕೃತ ಒಕ್ಕೂಟ) ಮತ್ತು ನ್ಯಾಟೋ ಸಂಘಟನೆ ಮೀರಿ ಜಾಗತಿಕ ಒಕ್ಕೂಟ ನಿರ್ಮಿಸಲು ಕೆಲಸ ಮಾಡುತ್ತಿದೆ ಎಂದು ಶ್ವೇತಭವನ ಹೇಳಿದೆ.

ಚೀನಾ, ಭಾರತ, ಬ್ರೆಜಿಲ್ ಮತ್ತು ಮೆಕ್ಸಿಕೊದಂತಹ ಕೆಲವು ದೊಡ್ಡ ದೇಶಗಳು ರಷ್ಯಾದ ವಿರುದ್ಧ ಅಮೆರಿಕದ ಆರ್ಥಿಕ ಯುದ್ಧದ ಭಾಗವಾಗಿಲ್ಲ. ಆದರೆ, ಅದು ಮಾಸ್ಕೋ ವಿರುದ್ಧದ ಬೈಡನ್​​ ಆಡಳಿತದ ಪ್ರಯತ್ನಗಳನ್ನು ದುರ್ಬಲಗೊಳಿಸುವುದಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಸುದ್ದಿಗಾರರಿಗೆ ತಿಳಿಸಿದರು.

ಕೇವಲ ಚೀನಾ ಮಾತ್ರವಲ್ಲ, ಭಾರತ ಅಥವಾ ಬ್ರೆಜಿಲ್‌ನಂತಹ ವಿಶ್ವದ ಕೆಲವು ದೊಡ್ಡ ದೇಶಗಳು, ಮೆಕ್ಸಿಕೊದಂತಹ ಲ್ಯಾಟಿನ್ ಅಮೆರಿಕದ ಕೆಲವು ದೇಶಗಳು ರಷ್ಯಾದ ವಿರುದ್ಧದ ಈ ಆರ್ಥಿಕ ಯುದ್ಧದ ಭಾಗವಾಗಿಲ್ಲ. ಇದು ಶ್ವೇತಭವನದ ಪ್ರಯತ್ನವನ್ನು ದುರ್ಬಲಗೊಳಿಸುವ ಸಂಗತಿಯಲ್ಲ ಎಂದು ನಾನು ಹೇಳುತ್ತೇನೆ. ನಾವು ಜಿ-7 ಮತ್ತು ನಮ್ಮ ನ್ಯಾಟೋ ಪಾಲುದಾರರನ್ನು ಮೀರಿ ಜಾಗತಿಕ ಒಕ್ಕೂಟ ನಿರ್ಮಿಸಲು ಕೆಲಸ ಮಾಡುತ್ತಿದ್ದೇವೆ ಮತ್ತು ಅದರಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿದ್ದೇವೆ ಎಂದರು.

ನಾವು ನೋಡುತ್ತಿರುವಂತೆ ಜಾಗತಿಕ ವೇದಿಕೆಯಲ್ಲಿ ಅಧ್ಯಕ್ಷರ ನಾಯಕತ್ವದ ಪ್ರಭಾವ ಮತ್ತು ಜಾರಿಗೆ ಬಂದ ಆರ್ಥಿಕ ನೀತಿಗಳ ಪರಿಣಾಮಗಳು ರಷ್ಯಾದ ಆರ್ಥಿಕತೆ ಕುಸಿತದ ಅಂಚಿನಲ್ಲಿದೆ. ಈ ಆರ್ಥಿಕ ನಿರ್ಬಂಧಗಳ ಸಮಯದಲ್ಲಿ ಚೀನಾ ರಷ್ಯಾಕ್ಕೆ ಹೆಚ್ಚು ಸಹಾಯಕವಾಗುವುದು ಅಸಂಭವವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಉಭಯ ದೇಶಗಳ ನಡುವೆ ಮಾತುಕತೆ ಮಧ್ಯೆಯೇ ಉಕ್ರೇನ್‌ ಮೇಲೆ ರಷ್ಯಾ ದಾಳಿ.. ನಾಗರಿಕರ ನರಳಾಟ, ನ್ಯಾಟೋ ಕೆರಳಿಸಿದ ರಷ್ಯಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.