ವಾಷಿಂಗ್ಟನ್ (ಅಮೆರಿಕ): ಉಕ್ರೇನ್ ಗಡಿಭಾಗದಲ್ಲಿ ರಷ್ಯಾದ ಸೇನೆ ಜಮಾವಣೆಯಿಂದ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪೂರ್ವ ಯುರೋಪ್‌ಗೆ ಹೆಚ್ಚುವರಿಯಾಗಿ 3,000 ಸೈನಿಕರನ್ನು ಕಳುಹಿಸುವುದಾಗಿ ಬುಧವಾರ ಅಮೆರಿಕ ಹೇಳಿದೆ.
ಒಂದೆರಡು ದಿನಗಳಲ್ಲಿ ಸೇನಾ ಪಡೆಗಳನ್ನು ನಿಯೋಜಿಸಲಾಗುವುದು. ಅಮೆರಿಕದ ಸುಮಾರು 1,700 ಸೈನಿಕರನ್ನು ಉಕ್ರೇನ್‌ನ ಗಡಿಯಲ್ಲಿರುವ ಪೋಲೆಂಡ್‌ಗೆ ಕಳುಹಿಸಲಾಗುತ್ತದೆ. 300 ಸೈನಿಕರನ್ನು ಜರ್ಮನಿಗೆ ಹಾಗೂ 1,000 ಸೈನಿಕನ್ನ ರೊಮೇನಿಯಾಗೆ ಕಳುಹಿಸಲಾಗುವುದು ಎನ್ಹೆಚ್ಕೆ ವರ್ಲ್ಡ್ ವರದಿ ಮಾಡಿದೆ.
ಅಮೆರಿಕದ ಪಡೆಗಳು ಪೂರ್ವ ಯುರೋಪಿಯನ್ NATO ಮಿತ್ರ ದೇಶಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿವೆ. ಪೋಲೆಂಡ್, ಜರ್ಮನಿ ಮತ್ತು ರೊಮೇನಿಯಾದೊಂದಿಗಿನ ದ್ವಿಪಕ್ಷೀಯ ಒಪ್ಪಂದದ ಅಡಿ ಸೈನಿಕರನ್ನ ಕಳುಹಿಸಲಾಗುತ್ತಿದೆ ಎಂದು ಪೆಂಟಗನ್ ಪ್ರೆಸ್ ಕಾರ್ಯದರ್ಶಿ ಜಾನ್ ಕಿರ್ಬಿ ತಿಳಿಸಿದ್ದಾರೆ.
ಇನ್ನು ರಷ್ಯಾದ ಸುಮಾರು 100,000 ಪಡೆಗಳು ಉಕ್ರೇನ್ ಗಡಿಯಲ್ಲಿ ಬೀಡು ಬಿಟ್ಟಿದ್ದು, ಬಿಕ್ಕಟ್ಟು ತಗ್ಗಿಸುವ ಹಿನ್ನೆಲೆಯಲ್ಲಿ ಬೈಡನ್ ಸರ್ಕಾರ ರಷ್ಯಾ ಸರ್ಕಾರದ ಮೇಲೆ ಒತ್ತಡ ಹೇರುವುದನ್ನು ಮುಂದುವರೆಸುತ್ತಿದೆ.
ಓದಿ: ಶಾಲೆಯಲ್ಲಿ ಹಿಜಾಬ್, ಕೇಸರಿ ಶಾಲಿಗೆ ಇಲ್ಲ ಅವಕಾಶ: ಗೃಹ ಸಚಿವ ಆರಗ ಜ್ಞಾನೇಂದ್ರ