ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ಸದಸ್ಯರು ಹೆಚ್ಚಿರುವ ಅಮೆರಿಕದ ಸೆನೆಟ್ ಬುಧವಾರ 500 ಬಿಲಿಯನ್ ಯುಎಸ್ ಡಾಲರ್ನ ಮೊತ್ತದ ಕೊರೊನಾ ವೈರಸ್ ಪರಿಹಾರ ಮಸೂದೆ ಪರ ಮತ ಚಲಾಯಿಸಲಿದೆ ಎಂದು ಸೆನೆಟ್ ಮೆಜಾರಿಟಿ ಲೀಡರ್ ಮೆಕ್ ಕಾನ್ನೆಲ್ ಘೋಷಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ಟೋಬರ್ 9ರಂದು 1.8 ಟ್ರಿಲಿಯನ್ ಯುಎಸ್ ಡಾಲರ್ಗಳ ಪರಿಹಾರ ಮಸೂದೆಯ ಪ್ಯಾಕೇಜ್ ಪ್ರಸ್ತಾಪವನ್ನು ಮಂಡಿಸಿತ್ತು. ಇದಾದ ನಂತರ ಮೆಕ್ ಕಾನ್ನೆಲ್ ಶನಿವಾರ ಮಾಹಿತಿ ನೀಡಿದ್ದು, ಪರಿಹಾರ ಮಸೂದೆ ಪರ ಮತ ಚಲಾಯಿಸಲಿದೆ ರಿಪಬ್ಲಿಕನ್ ಪಕ್ಷ ಮತ ಹಾಕಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೆಕ್ ಕಾನ್ನೆಲ್ ಪ್ರಕಾರ ಈ ಮಸೂದೆಯಲ್ಲಿ ನಿರುದ್ಯೋಗ ನಿವಾರಣೆಗೆ ಕ್ರಮ, ಸಣ್ಣ ವ್ಯಾಪಾರಕ್ಕೆ ನೆರವು, ಶಾಲೆಗಳಿಗೆ 100 ಬಿಲಿಯನ್ ಡಾಲರ್‌ಗಿಂತ ಹೆಚ್ಚಿನ ಅನುದಾನ, ಕೊರೊನಾ ಲಸಿಕೆ ಅಭಿವೃದ್ಧಿ ಮತ್ತು ವಿತರಣೆ ಮುಂತಾದವುಗಳ ಬಗ್ಗೆ ಗಮನ ಹರಿಸಲಾಗುತ್ತದೆ ಎಂದು ದಿ ಹಿಲ್ ನ್ಯೂಸ್ ವೆಬ್‌ಸೈಟ್ ವರದಿ ಮಾಡಿದೆ.
'ಈ ಮಸೂದೆ ಎಲ್ಲಾ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುತ್ತವೆ ಎಂದು ಯಾರೂ ಭಾವಿಸುವುದಿಲ್ಲ. ಇದು ಕಾರ್ಮಿಕರು ಮತ್ತು ಕುಟುಂಬಗಳಿಗೆ ಹೆಚ್ಚು ಸಹಾಯವನ್ನು ನೀಡುತ್ತದೆ' ಎಂದು ಹಿಲ್ ನ್ಯೂಸ್ ವೆಬ್‌ಸೈಟ್ ಮೆಕ್‌ಕಾನ್ನೆಲ್ ಹೇಳಿಕೆಯನ್ನು ಉಲ್ಲೇಖಿಸಿದೆ.