ETV Bharat / international

ಕೋವಿಡ್‌ಗೆ ಅಮೆರಿಕ ತತ್ತರ: 24 ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆ - ಕೊರೊನಾ ವೈರಸ್​ ಏರಿಕೆಯಲ್ಲಿ ದಾಖಲೆ ಬರೆದ ಅಮೆರಿಕ

ಕೋವಿಡ್‌-19 ಏರಿಕೆಯಲ್ಲಿ ಅಮೆರಿಕ ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಅದರಲ್ಲೂ ನ್ಯೂಯಾರ್ಕ್​ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

US sees highest single day spike of 512k Covid cases  America corona cases  highest covid cases register in America  24 ಗಂಟೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲು  ಕೊರೊನಾ ವೈರಸ್​ ಏರಿಕೆಯಲ್ಲಿ ದಾಖಲೆ ಬರೆದ ಅಮೆರಿಕ  ಅಮೆರಿಕಾ ಕೊರೊನಾ ಪ್ರಕರಣಗಳು
corona
author img

By

Published : Dec 30, 2021, 10:33 AM IST

ನ್ಯೂಯಾರ್ಕ್​: ಜಾಗತಿಕವಾಗಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ದೇಶ ಅಮೆರಿಕದಲ್ಲಿ ಕಳೆದೊಂದು ದಿನದಲ್ಲಿ 5,12,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದು ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಒಂದೇ ದಿನ ದಾಖಲಾದ ಅತಿ ಹೆಚ್ಚು ಕೋವಿಡ್​ ಸೋಂಕಿತರ ಸಂಖ್ಯೆ. ಈ ಪ್ರಕರಣಗಳೂ ಸೇರಿ ಒಟ್ಟು ಸೋಂಕಿತರ ಸಂಖ್ಯೆ 54 ಮಿಲಿಯನ್ ತಲುಪಿದೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ನೀಡಿದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,762 ರೋಗಿಗಳು ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 8,42,000 ಕ್ಕೂ ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳು ಮತ್ತು ಚೇತರಿಕೆ ಕ್ರಮವಾಗಿ 11,981,273 ಮತ್ತು 41,325,110 ಆಗಿದೆ.

ಇದೇ ವೇಳೆ, ಬೂಸ್ಟರ್ ಲಸಿಕೆಯಿಂದಲೂ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಈ ವರ್ಷದ ಜನವರಿ 8 ರಂದು ಒಂದೇ ದಿನ 2,94,015 ಪ್ರಕರಣಗಳು ಕಂಡುಬಂದಿದ್ದವು.

ಒಮಿಕ್ರಾನ್ ರೂಪಾಂತರ ದೇಶದ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ಕಾರಣವಾಗಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಪ್ರಕಾರ, ದೇಶದಲ್ಲಿ ಒಮಿಕ್ರಾನ್ ಶೇ 58.6ರಷ್ಟಿದೆ ಎಂದು ಅಂದಾಜಿಸಲಾಗಿದೆ. ಈ ವರ್ಷಾರಂಭದಲ್ಲಿ ಕೋವಿಡ್ ಹೆಚ್ಚಾಗಲು ಮುಖ್ಯ ಕಾರಣವಾದ ಡೆಲ್ಟಾ ರೂಪಾಂತರವು ಈಗ ದೇಶದ ಎಲ್ಲಾ ಪ್ರಕರಣಗಳಲ್ಲಿ ಶೇ 41.1 ರಷ್ಟಿದೆ ಎಂದು ಹೇಳಿದೆ.

ಪ್ರಸ್ತುತ ಕೋವಿಡ್​ನಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್ ಸೇರಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.