ವಾಷಿಂಗ್ಟನ್: ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರ.ವಾಣಿಜ್ಯ ವಹಿವಾಟಿನಲ್ಲಿ ಜಂಟಿಯಾಗಿ ಸಾಗಲಿವೆ ಎಂದು ಹೇಳುತ್ತಲೇ ಅಮೆರಿಕ ದ್ವಿಮುಖ ನೀತಿಯನ್ನು ಪಾಲಿಸುತ್ತಿದೆ.
ಭಾರತ ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಿದೆ ಎಂದು ಆಪಾದಿಸಿಕೊಂಡು ಬರುತ್ತಿದ್ದ ಟ್ರಂಪ್ ಸರ್ಕಾರ, ಇದೀಗ ತನ್ನ ಪ್ರಮುಖ ವಹಿವಾಟು ಪಾಲುದಾರರ ಕರೆನ್ಸಿ ಮೇಲ್ವಿಚಾರಣೆ (ಕರೆನ್ಸಿ ಮಾನಿಟರಿಂಗ್) ರಾಷ್ಟ್ರಗಳ ಪಟ್ಟಿಯಿಂದ ಭಾರತವನ್ನು ತೆಗೆದುಹಾಕಿದೆ.
ಚೀನಾ, ಜಪಾನ್, ದಕ್ಷಿಣ ಕೊರಿಯಾ, ಜರ್ಮನಿ, ಇಟಲಿ, ಐರ್ಲೆಂಡ್, ಸಿಂಗಾಪೂರ್, ಮಲೇಷಿಯಾ ಮತ್ತು ವಿಯೆಟ್ನಾಂ ಈ ಪಟ್ಟಿಯಲ್ಲಿವೆ. 2018ರ ಮೇ ನಲ್ಲಷ್ಟೇ ಅಮೆರಿಕದ ಕರೆನ್ಸಿ ಮೇಲ್ವಿಚಾರಣೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಭಾರತ, ಇದೀಗ ಈ ಪಟ್ಟಿಯಿಂದ ಹೊರ ಬಿದ್ದಿದೆ. ಭಾರತದೊಂದಿಗೆ ಸ್ವಿಟ್ಜರ್ಲೆಂಡ್ ಕೂಡ ಸೇರಿದೆ.
ಭಾರತವನ್ನು ಮೇಲ್ವಿಚಾರಣಾ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಮೂರು ಮಾನದಂಡಗಳ ಪೈಕಿ ಒಂದನ್ನು ಮಾತ್ರ ತಲುಪುವಲ್ಲಿ ಅದು ಯಶಸ್ವಿಯಾಗಿದೆ. ಸ್ವಿಸ್ ಮತ್ತು ಭಾರತ 2018ರ ವಿದೇಶಿ ವಿನಿಮಯ ಖರೀದಿಯ ಆವರ್ತನೆ ಹಾಗೂ ಪ್ರಮಾಣದಲ್ಲಿ ಕುಸಿತ ಕಂಡಿವೆ ಎಂದು ಅಮೆರಿಕದ ಖಜಾನೆ ಇಲಾಖೆ ಸ್ಪಷ್ಟನೆ ನೀಡಿದೆ.
ಮೇ 2018ರಲ್ಲಿ ಚೀನಾ, ಜರ್ಮನ್, ಜಪಾನ್, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳ ಜೊತೆಗೆ ಭಾರತವನ್ನು ಕರೆನ್ಸಿಯ ಮೇಲ್ವಿಚಾರಣಾ ಪಟ್ಟಿಗೆ ಮೊದಲ ಬಾರಿ ಸೇರ್ಪಡೆ ಮಾಡಿಕೊಂಡಿತ್ತು. ಭಾರತ ಸುಧಾರಣೆ ಕಾಣದೆ ಇದ್ದಲ್ಲಿ ಕರೆನ್ಸಿ ಪ್ರದರ್ಶನ (ಮ್ಯಾನಿಪ್ಯುಲೇಷನ್) ಪಟ್ಟಿಯಿಂದ ತೆಗೆದು ಹಾಕುವುದಾಗಿ 2018ರ ಅಕ್ಟೋಬರ್ ಎಚ್ಚರಿಸಿತ್ತು.
ಭಾರತಕ್ಕೆೇನು ತಲೆನೋವು?
ಭಾರತ- ಅಮೆರಿಕ ನಡುವೆ ಪ್ರತಿವರ್ಷ ಬಿಲಿಯನ್ ಡಾಲರ್ ಮೊತ್ತದ ವಾಣಿಜ್ಯ ವಹಿವಾಟು ನಡೆಸುತ್ತಿವೆ. ಸದ್ಯ ಫಾರೆಕ್ಸ್ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿದಿದ್ದು, ಅಮೆರಿಕದ ಈ ನಿರ್ಣಯದಿಂದ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.