ವಾಷಿಂಗ್ಟನ್ : ಯುಎಸ್ ಸರ್ಕಾರವು ಬಯೋಟೆಕ್ ಕಂಪನಿ ಮೊಡೆರ್ನಾದ ಹೆಚ್ಚುವರಿ 100 ಮಿಲಿಯನ್ ಕೋವಿಡ್ -19 ಡೋಸ್‌ಗಳನ್ನು ಖರೀದಿಸುವುದಾಗಿ ಹೇಳಿದೆ ಎಂದು ಕಂಪನಿ ಘೋಷಿಸಿದೆ. ಹೀಗಾಗಿ ಮೊಡೆರ್ನಾಗೆ ಒಟ್ಟು 200 ಲಸಿಕೆಗಳ ಪೂರೈಕೆ ಒಪ್ಪಂದ ದೃಢಪಟ್ಟಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, "ಅಮೆರಿಕ ಸರ್ಕಾರ ಖರೀದಿಸಿದ ಮೊದಲ 100 ಮಿಲಿಯನ್ ಡೋಸ್‌ಗಳಲ್ಲಿ, ಅಂದಾಜು 20 ಮಿಲಿಯನ್ ಡೋಸ್‌ಗಳನ್ನು 2020ರ ಡಿಸೆಂಬರ್ ಅಂತ್ಯದ ವೇಳೆಗೆ ತಲುಪಿಸಲಾಗುವುದು ಮತ್ತು ಉಳಿದದ್ದನ್ನು 2021ರ ಮೊದಲ ತ್ರೈಮಾಸಿಕದಲ್ಲಿ ತಲುಪಿಸಲಾಗುತ್ತದೆ. 2021ರ 2ನೇ ತ್ರೈಮಾಸಿಕದಲ್ಲಿ 100 ಮಿಲಿಯನ್ ಡೋಸ್‌ಗಳ ಹೊಸ ಆರ್ಡರ್‌ನ ಅಮೆರಿಕಾಗೆ ತಲುಪಿಸಲಾಗುತ್ತದೆ ಎಂದು ಮೊಡೆರ್ನಾ ಹೇಳಿದೆ.
ಈಗ ಹೊಸದಾಗಿ 100 ಡೋಸ್ ಖರೀದಿ ಮಾಡುತ್ತಿರುವುದು ಅಮೆರಿಕನ್ನರಿಗೆ ಇನ್ನೂ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ. 2021ರ 2ನೇ ತ್ರೈಮಾಸಿಕದ ವೇಳೆಗೆ ಅಗತ್ಯವಿರುವ ಎಲ್ಲಾ ಅಮೆರಿಕನ್ನರಿಗೆ ಲಸಿಕೆ ಹಾಕಲು ನಮಗೆ ಸಾಕಷ್ಟು ಪೂರೈಕೆ ಇರುತ್ತದೆ ಎಂದು ಕಂಪನಿ ತಿಳಿಸಿದೆ.
ಈಗಾಗಲೇ ಲಸಿಕೆಗಾಗಿ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ)ಯಿಂದ ತುರ್ತು ಬಳಕೆಯ ಅಧಿಕಾರವನ್ನು (ಇಯುಎ) ಸ್ವೀಕರಿಸಲು ವಿತರಣೆಗಳು ಶುರುವಾಗಿದೆ ಎಂದು ಮೊಡೆರ್ನಾ ಹೇಳಿದೆ.
ಈ ಹೆಚ್ಚುವರಿ ಪೂರೈಕೆ ಒಪ್ಪಂದವನ್ನು ನಾವು ಪ್ರಶಂಸಿಸುತ್ತೇವೆ ಎಂದು ನ್ಯೂಯಾರ್ಕ್-ರಾಜ್ಯ ಆಧಾರಿತ ಬಯೋಟೆಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀಫನ್ ಬಾನ್ಸೆಲ್ ಹೇಳಿದ್ದಾರೆ. ನಾವು ಯುಎಸ್ ಮತ್ತು ಯುಎಸ್ ಹೊರಗಡೆ ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದೇವೆ.
ಹಾಗೆಯೇ ನಾವು ಯುಎಸ್ ಎಫ್ಡಿಎಯೊಂದಿಗೆ ತುರ್ತು ಬಳಕೆಯ ದೃಢೀಕರಣಕ್ಕಾಗಿ ಮತ್ತು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯೊಂದಿಗೆ ಷರತ್ತು ಬದ್ಧ ಮಾರ್ಕೆಟಿಂಗ್ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ ಮತ್ತು ನಮ್ಮ ಲಸಿಕೆಯೊಂದಿಗೆ ಈ ಜಾಗತಿಕ ಕೊರೊನಾ ಸಾಂಕ್ರಾಮಿಕ ರೋಗವನ್ನು ತೊಲಗಿಸಲು ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ "ಎಂದು ಮೊಡೆರ್ನಾ ಹೇಳಿದೆ.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಇತ್ತೀಚಿನ ವರದಿ ಪ್ರಕಾರ, ಜಾಗತಿಕವಾಗಿ 70,058,867 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈವರೆಗೆ 1,590,622 ಜನ ಕೋವಿಡ್ನಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.