ವಾಷಿಂಗ್ಟನ್(ಯುಎಸ್ಎ): ಇರಾಕ್‌ನಲ್ಲಿರುವ 2 ಮಿಲಿಟರಿ ನೆಲೆಗಳ ಮೇಲೆ ಇರಾನ್ ಸುಮಾರು 12 ಕ್ಷಿಪಣಿ ಉಡಾವಣೆ ಮಾಡಿದೆ. ಆದರೆ ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್ ಹಾಗೂ ಅಮೆರಿಕ ನಡುವಿನ ಸಮರ ಹಾಗೂ ಸುಲೇಮಾನಿ ಹತ್ಯೆ ನಂತರ ಉಭಯ ದೇಶಗಳ ನಡುವೆ ಯುದ್ಧ ಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ಟ್ರಂಪ್, ನಮ್ಮ ಬಳಿ ಜಗತ್ತಿನಲ್ಲೇ ಅತ್ಯಂತ ಸುಸಜ್ಜಿತವಾದ ಮಿಲಿಟರಿ ಪಡೆ ಇದ್ದು, ಹೆಚ್ಚು ಬಲಶಾಲಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಅದಲ್ಲದೆ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿಗಳ ಉಡಾವಣೆಯಿಂದ ಉಂಟಾದ ಸಾವು-ನೋವು ಹಾಗೂ ಇನ್ನಿತರ ಹಾನಿಗಳ ಮೌಲ್ಯಮಾಪನ ಈಗ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.