ವಾಷಿಂಗ್ಟನ್: ಚೀನಾ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತಿದೆ ಎಂದು ಅಮೆರಿಕ ಆಗಾಗ ಆರೋಪ ಮಾಡುತ್ತಿದ್ದು, ಇದೀಗ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ನೌಕೆ ಯುಎಸ್ಎಸ್ ಬೆನ್ಫೋಲ್ಡ್ ಅನ್ನು ಸಂಚರಿಸುವಂತೆ ಮಾಡುವ ಮೂಲಕ ಎಚ್ಚರಿಕೆ ರವಾನಿಸಿದೆ.
ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುತ್ತಿರುವ ಚೀನಾ ಸಾಗರಗಳ ಮೇಲಿನ ವಿವಿಧ ದೇಶಗಳ ಕಾನೂನಿಗೆ ಗಂಭೀರ ಬೆದರಿಕೆಯಾಗಿದೆ ಎಂದು ಅಮೆರಿಕ ಹೇಳಿಕೊಂಡಿದ್ದು, ದಕ್ಷಿಣ ಚೀನಾ ಸಮುದ್ರದ ಪಾರ್ಸೆಲ್ ದ್ವೀಪಗಳು ಎಂದು ಕರೆಯಲ್ಪಡುವ, ಕ್ಷಿಶಾ ದ್ವೀಪಗಳ ಬಳಿ ಎನ್ನ ಯುಎಸ್ಎಸ್ ಬೆನ್ಫೋಲ್ಡ್ ನೌಕೆ ಓಡಾಟ ನಡೆಸಿದೆ.
ಯುಎಸ್ಎಸ್ ಬೆನ್ಫೋಲ್ಡ್ ಯುದ್ಧನೌಕೆಯು ದಕ್ಷಿಣ ಚೀನಾ ಸಮುದ್ರವನ್ನು ತಲುಪುವ ಮೂಲಕ ಸಮುದ್ರದ ಸ್ವಾತಂತ್ರ್ಯ, ಹಕ್ಕುಗಳು ಮತ್ತು ಸಮುದ್ರದ ಕಾನೂನುಬದ್ಧ ಬಳಕೆಯನ್ನು ಉಳಿಸಿಕೊಂಡಿದೆ ಎಂದು ಅಮೆರಿಕ ನೌಕಾಪಡೆ ಹೇಳಿದ್ದು, ಇದು ಆಪರೇಷನ್ FONOP (Freedom of Navigation Operation) ಭಾಗವಾಗಿತ್ತು ಎನ್ನಲಾಗಿದೆ.
ಈ ದ್ವೀಪಗಳ ಮೇಲೆ ವಿಯೆಟ್ನಾಂ ಮತ್ತು ತೈವಾನ್ ಕೂಡಾ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಿವೆ. ಆದರೆ, ಚೀನಾ ಸುಮಾರು 46 ವರ್ಷಗಳಿಗಿಂತಲೂ ಈ ದ್ವೀಪಗಳ ಮೇಲೆ ಅಧಿಕಾರ ಸ್ಥಾಪಿಸಿದೆ. ಅಲ್ಲಿ ಸೇನೆಯನ್ನು ನಿಯೋಜನೆ ಮಾಡುವ ಮೂಲಕ ದ್ವೀಪಗಳನ್ನು ಬಲಪಡಿಸಲಾಗಿದೆ ಎಂದು ಅಮೆರಿಕ ನೌಕಾಪಡೆ ಹೇಳಿದೆ.
ಪಾರ್ಸೆಲ್ ದ್ವೀಪಗಳು ಸುಮಾರು 130 ಸಣ್ಣ ಸಣ್ಣ ದ್ವೀಪಗಳ ಗುಂಪಾಗಿದ್ದು, ದಕ್ಷಿಣ ಚೀನಾ ಸಮುದ್ರದ ವಾಯುವ್ಯ ಭಾಗದಲ್ಲಿವೆ. ಅಲ್ಲಿ ಸುಮಾರು 1400 ಜನರು ಇರಬಹುದು ಎನ್ನಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಚೀನಾ ಪ್ರತಿಕ್ರಿಯೆ: ದಕ್ಷಿಣ ಚೀನಾ ಸಮುದ್ರದಲ್ಲಿ ಯುಎಸ್ ನೌಕಾಪಡೆಯ ಕಾರ್ಯಾಚರಣೆಗೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಅಪಾಯವನ್ನು ಸೃಷ್ಟಿಸಲು ಅಮೆರಿಕ ಬಯಸಿದೆ ಎಂಬುದನ್ನು ಈ ಕಾರ್ಯಾಚರಣೆ ಸಾಬೀತುಪಡಿಸುತ್ತದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಕ್ಯಾಪಿಟಲ್ ಗಲಭೆ ತನಿಖೆಗೆ ಸಹಕರಿಸುವಂತೆ ಇವಾಂಕಾ ಟ್ರಂಪ್ಗೆ ಪತ್ರ