ವಾಷಿಂಗ್ಟನ್ (ಅಮೆರಿಕ): ರಷ್ಯಾ ಆಕ್ರಮಣದ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಉಕ್ರೇನ್‌ನ ಸಾಮರ್ಥ್ಯ ಕಡಿಮೆ ಎಂದು ಅಂದಾಜು ಮಾಡಲಾಗಿದೆ ಅಂತಾ ಯುಎಸ್ ಉನ್ನತ ಗುಪ್ತಚರ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ರಷ್ಯಾ ವಿರುದ್ಧ ಹೋರಾಡುವ ಉಕ್ರೇನ್‌ನ ಇಚ್ಛೆಯನ್ನು ಯುಎಸ್ ತಪ್ಪಾಗಿ ಪರಿಗಣಿಸಿದೆ. ವಿವಿಧ ಅಂಶಗಳ ಆಧಾರದ ಮೇಲೆ ಉಕ್ರೇನಿಯನ್ನರು ನಾನು ಅಂದುಕೊಂಡಷ್ಟು ಯುದ್ಧಕ್ಕೆ ಸಿದ್ಧವಾಗಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೆ, ನನ್ನ ಗ್ರಹಿಕೆ ತಪ್ಪಾಗಿತ್ತು. ಅವರು ಧೈರ್ಯ ಮತ್ತು ಗೌರವದಿಂದ ಹೋರಾಡುವ ಮೂಲಕ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ರಕ್ಷಣಾ ಗುಪ್ತಚರ ಸಂಸ್ಥೆಯ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಸ್ಕಾಟ್ ಬೆರಿಯರ್ ಹೇಳಿದ್ದಾರೆ.
ಇನ್ನೊಂದೆಡೆ, ಶ್ವೇತಭವನವು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಅಥವಾ ಗುಪ್ತಚರವನ್ನು ಒದಗಿಸುತ್ತಿಲ್ಲ ಎಂದು ರಿಪಬ್ಲಿಕನ್ ಪಕ್ಷ ಟೀಕೆ ಮಾಡಿದೆ. ಜೊತೆಗೆ ಬೈಡನ್ ಆಡಳಿತವು ಪ್ರಸ್ತುತ ಉಕ್ರೇನ್‌ಗೆ ಹಳೆಯ ರಷ್ಯನ್ ನಿರ್ಮಿತ ಯುದ್ಧವಿಮಾನಗಳನ್ನು ದಾನ ಮಾಡುವ ಮೂಲಕ ಪೋಲಿಷ್ ಯೋಜನೆಯನ್ನು ವಿರೋಧಿಸುತ್ತದೆ. ಇದರಿಂದ ಪುಟಿನ್ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸಬಹುದು ಎಂದು ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಹತ್ತು ವರ್ಷದಲ್ಲೇ ಬದಲಾದ ಮನ್ ಹಣೆಬರಹ: ಪಂಜಾಬ್ ಸಿಎಂ ಗದ್ದುಗೆ ಏರಲಿದ್ದಾರೆ ಕಾಮಿಡಿಯನ್!