ETV Bharat / international

ವಿದೇಶಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ನಿಯಮದ ವಿರುದ್ಧ ಅಮೆರಿಕ ಸಂಸತ್​ನಲ್ಲಿ ವಿಧೇಯಕ ಮಂಡನೆ

author img

By

Published : Jul 29, 2021, 9:29 AM IST

ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ​ ತೆರಳುವ ವಿದ್ಯಾರ್ಥಿಗಳು ಓದು ಮುಗಿದ ಬಳಿಕ ನೌಕರಿ ಉದ್ದೇಶಕ್ಕಾಗಿ ಅಲ್ಲೇ ಉಳಿಯಲು ಅವಕಾಶ ಮಾಡಿಕೊಡುವ ಒಪಿಟಿ ನಿಯಮದ ವಿರುದ್ಧ ಯುಎಸ್ ಸಂಸದರು ಮಸೂದೆ ಮಂಡಿಸಿದ್ದಾರೆ.

foreign students to stay after studies
ಮಸೂದೆ ಮಂಡನೆ

ವಾಷಿಂಗ್ಟನ್: ವಿದ್ಯಾಭ್ಯಾಸ ಮುಗಿದ ಬಳಿಕವೂ ಉದ್ಯೋಗದ ಉದ್ದೇಶಕ್ಕಾಗಿ ವಿದೇಶಿ ವಿದ್ಯಾರ್ಥಿಗಳು ದೇಶದಲ್ಲಿ ಉಳಿದುಕೊಳ್ಳಬಹುದು ಎಂಬ ನಿಯಮವನ್ನು ತೆಗೆದು ಹಾಕುವಂತೆ ಅಮೆರಿಕ​ ಸಂಸದರ ಗುಂಪು ಸಂಸತ್​​ನಲ್ಲಿ ಮತ್ತೊಮ್ಮೆ ಮಸೂದೆ ಮಂಡಿಸಿದ್ದಾರೆ.

ಸಂಸದರಾದ ಪೌಲ್​ ಎ ಗೋಸರ್​, ಮೋ ಬ್ರೂಕ್ಸ್, ಆ್ಯಂಡಿ ಬಿಗ್ಸ್ ಮತ್ತು ಮ್ಯಾಟ್ ಗಯೆಟ್ಸ್, ಹೈ ಸ್ಕಿಲ್ಲ್​ಡ್ ಅಮೆರಿಕನ್ ಆ್ಯಕ್ಟ್ ( High-Skilled Americans Act) ಅನ್ನು ಮಂಡಿಸಿದ್ದಾರೆ. ಇದು ಅಪ್ಶನಲ್ ಪ್ರಾಕ್ಟಿಸ್ ಟ್ರೈನಿಂಗ್ (Optional Practice Training OPT) ಸಂಬಂಧ ಅಮೆರಿಕ​ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಗೆ ತಿದ್ದುಪಡಿ ತರುತ್ತದೆ.

ಓದಿ : ನಾವು ತಾಲಿಬಾನ್​​ ಉಗ್ರ ಸಂಘಟನೆಗೆ ಬೆಂಬಲ ನೀಡುತ್ತಿಲ್ಲ: ಇಮ್ರಾನ್​ ಖಾನ್ ಸ್ಪಷ್ಟನೆ

ದೇಶದಲ್ಲಿ ಇರುವುದು ಒಂದು ಕಾರ್ಯಕ್ರಮವೇ ಹೊರತು ಕಾನೂನಲ್ಲ. ಇದು ದೇಶದ ಕಾರ್ಮಿಕರನ್ನು ಹೊರಗಿಟ್ಟು, ವಿದೇಶಿಗರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳಲು ಸಹಕಾರಿಯಾಗಿದೆ. ಒಪಿಟಿ ಎಂದರೆ ಇದು ಒಂದು ರೀತಿಯಲ್ಲಿ ದೇಶದ ಕಾರ್ಮಿಕರನ್ನು ಉದ್ಯೋಗದಿಂದ ದೂರ ಇಡುವ ಕಾನೂನು ಎಂದು ಸಂಸದ ಗೋಸರ್ ಹೇಳಿದ್ದಾರೆ.

ಹೈ ಸ್ಕಿಲ್ಲ್​ಡ್ ಅಮೆರಿಕನ್ ಆ್ಯಕ್ಟ್ ಅನ್ನು ಮೊದಲ ಬಾರಿಗೆ 116 ನೇ ಅಮೆರಿಕನ್ ಸಂಸತ್​ನಲ್ಲಿ ಗೋಸರ್ ಮಂಡಿಸಿದ್ದರು. ಅಲ್ಲದೇ ಎರಡು ಸಲ ಅಮೆರಿಕ ಕಾರ್ಮಿಕರ ಪರವಾಗಿ ಹೋಂ ಲ್ಯಾಂಡ್ ಸೆಕ್ಯೂರಿಟಿ ಡಿಪಾರ್ಟ್​​ಮೆಂಟ್ ವಿರುದ್ದ ಒಪಿಟಿ ತೆಗೆದು ಹಾಕುವಂತೆ ಅಮಿಕಸ್ ಬ್ರೀಫ್ಸ್ ( ಪ್ರಕರಣಕ್ಕೆ ಸಂಬಂಧಪಡದ ವ್ಯಕ್ತಿ ಪ್ರಕರಣದ ಪರವಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡುವುದು) ಗೆ ಸಹಿ ಹಾಕಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.