ಲಾಸ್ ಏಂಜಲೀಸ್(ಅಮೆರಿಕ): ಅಮೆರಿಕ ಗುಪ್ತಚರ ಉಪಗ್ರಹವನ್ನು ಕ್ಯಾಲಿಫೋರ್ನಿಯಾದಿಂದ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿದೆ. NROL-87 ಉಪಗ್ರಹವು ವಾಂಡೆನ್‌ಬರ್ಗ್ ಬಾಹ್ಯಾಕಾಶ ಪಡೆಯ ಬೇಸ್‌ನಿಂದ ಭುಧವಾರ ಮಧ್ಯಾಹ್ನ 12:27ಕ್ಕೆ ಉಡಾವಣೆಗೊಂಡಿದೆ. ಇಂಟಿಲಿಜೆನ್ಸ್ ಉಪಗ್ರಹವನ್ನು ಕಕ್ಷೆಗೆ ತಲುಪಿಸಿದ ಲಾಂಚರ್ ವೆಹಿಕಲ್ ಲಾಸ್ ಏಂಜಲೀಸ್‌ನ ವಾಯುವ್ಯದ ಕಡಲತೀರದ ನೆಲೆಗೆ ಹಿಂತಿರುಗಿದೆ. ಅದನ್ನು ಭವಿಷ್ಯದ ಎನ್ಆರ್ಓ ಕಾರ್ಯಾಚರಣೆಯಲ್ಲಿ ಮರುಬಳಕೆ ಮಾಡಬಹುದಾಗಿದೆ.
ಎನ್ಆರ್ಓ NROL-87 ಉಪಗ್ರಹವನ್ನು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಉಡಾಯಿಸಲಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ರಿಕನ್ಸಿಷೆನ್ಸ್ ಆಫೀಸ್ ತಿಳಿಸಿದೆ. ಇನ್ನೂ ಎನ್ಆರ್ಓ ಎನ್ನುವುದು ಅಮೆರಿಕ ಉಪಗ್ರಹಗಳನ್ನು ಅಭಿವೃದ್ಧಿಪಡಿಸುವ, ನಿರ್ಮಿಸುವ, ಉಡಾವಣೆ ಮಾಡುವ ಮತ್ತು ನಿರ್ವಹಿಸುವ ಸರ್ಕಾರಿ ಸಂಸ್ಥೆಯಾಗಿದೆ.ಇದನ್ನೂ ಓದಿ: ವಿಮಾನ ಲ್ಯಾಂಡಿಂಗ್ ವೇಳೆ ಎದೆ ನಡುಗಿಸುವ ಘಟನೆ: ವಿಡಿಯೋ ನೋಡಿ
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ