ವಾಷಿಂಗ್ಟನ್: ಬಹು ನಿರೀಕ್ಷಿತ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇದ್ದು, ಮತದಾನ ಸಂಬಂಧಿತ ಹಿಂಸಾಚಾರದ ಹಿನ್ನೆಲೆಯಲ್ಲಿ ದೇಶಾದ್ಯಂತ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರತಿಭಟಿಸಲು ಶನಿವಾರ ರಾತ್ರಿ ಪ್ರತಿಭಟನಾಕಾರರು ಜಮಾಯಿಸಿದ ಹಿನ್ನೆಲೆ ಶ್ವೇತಭವನದ ಸುತ್ತಲೂ ಬೇಲಿಗಳನ್ನು ನಿರ್ಮಿಸಲಾಗಿದೆ.
ಶ್ವೇತಭವನದ ಪಕ್ಕದ ಬೀದಿಗಳಲ್ಲಿ ಬೆಳಕಿನ ಕಂಬಗಳ ಮೇಲೆ ಪೊಲೀಸ್ ಸಲಹಾ ಚಿಹ್ನೆಗಳನ್ನು ಹಾಕಲಾಗಿದ್ದು, ಚುನಾವಣೆಯ ಐದು ದಿನಗಳವರೆಗೆ ಬಂದೂಕುಗಳ ಬಳಕೆಯನ್ನು ನಿಷೇಧಿಸಲಾಗಿದೆ.
ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಂಗಡಿಗಳ ಕಿಟಕಿಗಳನ್ನು ಪ್ಲೈವುಡ್ನಿಂದ ಮುಚ್ಚಲಾಗುತ್ತಿವೆ. ಕೆಲ ಅಂಗಡಿಗಳಿಗೆ ತಾತ್ಕಾಲಿಕ ಅಡೆತಡೆಗಳನ್ನು ಹಾಕುತ್ತಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಯೋಜಿತ ಚಟುವಟಿಕೆಯ ಕುರಿತು ನಮಗೆ ಮಾಹಿತಿ ಬಂದಿಲ್ಲ. ಆದರೆ ನಾವು ಜಾಗರೂಕರಾಗಿರುತ್ತೇವೆ" ಎಂದು ವಾಷಿಂಗ್ಟನ್‌ನ ಉಪ ಮೇಯರ್ ಜಾನ್ ಫಾಲ್ಸಿಚಿಯೊ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಯಾವುದೇ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ. ಹಿಂಸಾಚಾರ ಸಂಭವಿಸಿದಲ್ಲಿ ತಕ್ಷಣ ತಿಳಿಸುವಂತೆ ನಾವು ಕರೆ ನೀಡುತ್ತೇವೆ" ಎಂದು ಅವರು ಹೇಳಿದರು.
ಅಂಗಡಿ ಮಾಲೀಕರು ಮುಂಜಾಗೃತಾ ಕ್ರಮವಾಗಿ ತಮ್ಮ ಅಂಗಡಿಗಳನ್ನು ರಕ್ಷಿಸುವ ದೃಶ್ಯಗಳು ಲಾಸ್ ಏಂಜಲೀಸ್, ನ್ಯೂಯಾರ್ಕ್ ಮತ್ತು ಚಿಕಾಗೊದಲ್ಲಿಯೂ ಕಾಣಿಸಿಕೊಂಡವು.
ಚಿಕಾಗೋದ ಮೇಯರ್ ಲೋರಿ ಲೈಟ್‌ಫೂಟ್, ನಿವಾಸಿಗಳುತಮ್ಮ ರಾಜಕೀಯ ಅಭಿಪ್ರಾಯಗಳನ್ನು ಸುರಕ್ಷಿತ ರೀತಿಯಲ್ಲಿ ವ್ಯಕ್ತಪಡಿಸುವಂತೆ ಕೇಳಿಕೊಂಡಿದ್ದಾರೆ.
"ನಮ್ಮ ಹತಾಶೆಯನ್ನು ಹಾಗೂ ನಮ್ಮ ಕೋಪವನ್ನು ಬೇರೊಬ್ಬರ ಮೇಲೆ ತೋರಿಸುವ ಹಕ್ಕು ನಮಗಿಲ್ಲ." ಎಂದು ಅವರು ಮಾದ್ಯಮಗಳಿಗೆ ತಿಳಿಸಿದ್ದಾರೆ.
ಹೊಸ ಸಮೀಕ್ಷೆಯ ಪ್ರಕಾರ, ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ರಾಷ್ಟ್ರೀಯ ಮಟ್ಟದಲ್ಲಿ ಡೊನಾಲ್ಡ್ ಟ್ರಂಪ್ಗಿಂತ 10 ಶೇಕಡಾ ಅಂಕಗಳಿಂದ ಮುನ್ನಡೆಯಲ್ಲಿದ್ದಾರೆ.
ರಾಷ್ಟ್ರೀಯ ನೋಂದಾಯಿತ ಮತದಾರರಲ್ಲಿ ಟ್ರಂಪ್ಗೆ 42 ಪ್ರತಿಶತದಷ್ಟು ಹಾಗೂ ಬಿಡೆನ್ಗೆ 52 ಶೇಕಡಾದಷ್ಟು ಬೆಂಬಲವಿದೆ ಎಂದು ಎನ್ಬಿಸಿ ನ್ಯೂಸ್ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ಸಮೀಕ್ಷೆಯು ಬಹಿರಂಗಪಡಿಸಿದೆ.