ETV Bharat / international

ಅಮೆರಿಕ ಸಂಪೂರ್ಣವಾಗಿ ತಾಲಿಬಾನ್‌ಗೆ ಶರಣಾಗಿದೆ, ಇದು ಅವಮಾನಕರ ವೈಫಲ್ಯ: ನಿಕ್ಕಿ ಹ್ಯಾಲೆ - ವಿಶ್ವಸಂಸ್ಥೆ

ಯುಎಸ್​ ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿಲ್ಲ. ಅವರು ಸಂಪೂರ್ಣವಾಗಿ ತಾಲಿಬಾನ್‌ಗೆ ಶರಣಾಗಿದ್ದಾರೆ. ಪ್ರಮುಖ ನ್ಯಾಟೋ ಕೇಂದ್ರವಾಗಿದ್ದ ಬಾಗ್ರಾಮ್ ಏರ್‌ಫೋರ್ಸ್ ಬೇಸ್​, ನಾವು ಪಡೆಯಬೇಕಿದ್ದ 85 ಬಿಲಿಯನ್ ಡಾಲರ್​ ಮೌಲ್ಯದ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಅವರು(ಯುಎಸ್​) ಉಗ್ರರಿಗೆ ಒಪ್ಪಿಸಿದ್ದಾರೆ ಎಂದು ಸಂದರ್ಶನವೊಂದರಲ್ಲಿ ವಿಶ್ವಸಂಸ್ಥೆಯ ಮಾಜಿ ಅಧಿಕಾರಿ ನಿಕ್ಕಿ ಹ್ಯಾಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

US
ನಿಕ್ಕಿ ಹ್ಯಾಲೆ-ಬೈಡನ್​
author img

By

Published : Aug 23, 2021, 7:34 AM IST

ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್(US) ತಾಲಿಬಾನ್​ಗೆ ಸಂಪೂರ್ಣವಾಗಿ ಶರಣಾಗಿದೆ. ಇದರ ಜೊತೆಗೆ, ಅಫ್ಘಾನಿಸ್ತಾನದಲ್ಲಿ ತನ್ನ ಮಿತ್ರರಾಷ್ಟ್ರಗಳನ್ನು ಯುಎಸ್​ ಕೈಬಿಟ್ಟಿದೆ ಎಂದು ಭಾರತ ಮೂಲದ ಅಮೆರಿಕದ​ ರಾಜಕಾರಣಿ ಮತ್ತು ವಿಶ್ವಸಂಸ್ಥೆಯ ಮಾಜಿ ಅಧಿಕಾರಿ ನಿಕ್ಕಿ ಹ್ಯಾಲೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಘ್ಘನ್​ನಿಂದ ಯುಎಸ್​ ಪಡೆಯನ್ನು ಬೈಡನ್​ ಸರ್ಕಾರ ಹಿಂತೆಗೆದುಕೊಂಡ ನೀತಿಯನ್ನು ಅವರು ಕಟುವಾಗಿ ಖಂಡಿಸಿದ್ದಾರೆ.

"ಯುಎಸ್​ ತಾಲಿಬಾನ್ ಜೊತೆ ಮಾತುಕತೆ ನಡೆಸುತ್ತಿಲ್ಲ. ಅವರು ಸಂಪೂರ್ಣವಾಗಿ ತಾಲಿಬಾನ್‌ಗೆ ಶರಣಾಗಿದ್ದಾರೆ. ಪ್ರಮುಖ ನ್ಯಾಟೋ ಕೇಂದ್ರವಾಗಿದ್ದ ಬಾಗ್ರಾಮ್ ಏರ್‌ಫೋರ್ಸ್ ಬೇಸ್​, ಜೊತೆಗೆ ನಾವು ಪಡೆಯಬೇಕಿದ್ದ 85 ಬಿಲಿಯನ್ ಡಾಲರ್​ ಮೌಲ್ಯದ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಅವರು(ಯುಎಸ್)​ ಉಗ್ರರಿಗೆ ಒಪ್ಪಿಸಿದ್ದಾರೆ" ಎಂದು ಹ್ಯಾಲೆ ಸಿಬಿಎಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಬೈಡನ್ ಸರ್ಕಾರದ ನಡೆಯನ್ನು ಟೀಕಿಸಿದರು.

"ಅಫ್ಘನ್​ನಲ್ಲಿದ್ದ ಅಮೆರಿಕನ್​ ಜನರನ್ನು ಬೈಡನ್​ ಅವರ ವಾಪಸಾತಿ​ ನೀತಿಯ ಮೂಲಕ ಕೈಬಿಡಲಾಗಿದೆ. ಇದು ಸಂಪೂರ್ಣ ಶರಣಾಗತಿ ಮತ್ತು ಮುಜುಗರದ ರೀತಿಯ ವೈಫಲ್ಯ" ಎಂದು ಅವರು ಹೇಳಿದರು.

2024ರ ಚುನಾವಣೆಯಲ್ಲಿ ಅಧ್ಯಕ್ಷೀಯ ಪಟ್ಟದ ಆಕಾಂಕ್ಷಿಯಾಗಿ ಕಾಣಿಸಿಕೊಂಡಿರುವ ಹ್ಯಾಲೆ, ಬೈಡನ್ ಆಡಳಿತದ ಅಫ್ಘನ್ ನೀತಿಗಳನ್ನು ಕಟುವಾಗಿ ವಿಮರ್ಶಿಸಿದ್ದಾರೆ. "ಇದು ನಂಬಲಾಗದ ಸನ್ನಿವೇಶ. ಅಫ್ಘನ್​ನಲ್ಲಿ ಅಕ್ಷರಶಃ ತಾಲಿಬಾನ್ ನಮ್ಮ ಅಮೆರಿಕನ್ನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದೆ. ನಮ್ಮ ಜನರನ್ನು ಅಲ್ಲಿಂದ ಕಾಪಾಡಲು ಮಾರ್ಗ ಕಂಡುಕೊಳ್ಳಬೇಕು" ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಟ್ರಂಪ್ ಆಡಳಿತದ ಸಂದರ್ಭದಲ್ಲಿ ನಾಲ್ಕು ವರ್ಷಗಳ ಕಾಲ ಅಫ್ಘಾನಿಸ್ತಾನ ಸುರಕ್ಷಿತವಾಗಿತ್ತು ಎಂದು ಹ್ಯಾಲೆ ಹೇಳಿದರು.

"ಬೈಡನ್‌ ಆಡಳಿತಕ್ಕೆ ಬಂದ ಏಳು ತಿಂಗಳಲ್ಲಿ ಏನಾಯಿತು? ನಾವು ಸಂಪೂರ್ಣವಾಗಿ ಶರಣಾಗಿದ್ದೇವೆ. ಪ್ರಪಂಚದ ದೃಷ್ಟಿಯಲ್ಲಿ ನಮ್ಮನ್ನು ನಾವು ಅವಮಾನಿಸಿಕೊಂಡಿದ್ದೇವೆ. ಸದ್ಯ ನೀವು ರಾಕ್ಷಸರ ಜೊತೆ ಮಾತುಕತೆ ಮುಂದಾಗಬೇಕಾದ ಸಂದರ್ಭ ಬಂದಿದೆ. ಆ ಮಾತುಕತೆ ಶಕ್ತಿಯುತವಾಗಿರಬೇಕೇ ಹೊರತು ದೌರ್ಬಲ್ಯದಿಂದ ಕೂಡಿರಬಾರದು" ಎಂದು ಹ್ಯಾಲೆ ಬೈಡನ್​ಗೆ ಆಕ್ರೋಶ ವ್ಯಕ್ತಪಡಿಸಿದರು.

"ಇದು ಗಂಭೀರ ವಿಚಾರವಾಗಿದೆ. ಅಮೆರಿಕಾಗೆ ಹಿಂತಿರುಗಲು ನೀಡಿದ್ದ ಆಗಸ್ಟ್​ 31ರ ವರೆಗಿನ ಗಡುವನ್ನು ಬೈಡನ್​ ಸರ್ಕಾರ ವಿಸ್ತರಿಸಬೇಕು. ಅಮೆರಿಕನ್ನರನ್ನು ಕಾಪಾಡಬೇಕಿದೆ. ನಾವು ಭರವಸೆಗಳನ್ನು ನೀಡಿದಂತೆ ಅಫ್ಘಾನ್ ಮಿತ್ರರಿಗೆ ಸಹಾಯ ಮಾಡಬೇಕಿದೆ. ಇದನ್ನು ಬಹಳ ಪ್ರಬಲ ರೀತಿಯಲ್ಲಿ ಮುಂದುವರಿಸುತ್ತೇವೆ ಎಂದು ನಾವು ಖಚಿತಪಡಿಸಿಕೊಳ್ಳಬೇಕಿದೆ" ಎಂದು ಹ್ಯಾಲಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.