ETV Bharat / international

ಚುನಾವಣೆ ಮತ ಎಣಿಕೆಯಲ್ಲಿ ಅಕ್ರಮ : ಬೈಡನ್​ ವಿರುದ್ಧ ಮತ್ತೆ ಟ್ರಂಪ್ ಆರೋಪ - US Election LIVE

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ ಎಣಿಕೆಯಲ್ಲಿ ಅಕ್ರಮ ನಡೆಯುತ್ತಿದೆ. ಅಕ್ರಮ ಮಾರ್ಗದ ಮೂಲಕ ಅಧಿಕಾರ ಪಡೆಯಲು ಬೈಡನ್​ ಹೀಗೆ ಮಾಡಿದ್ದಾರೆ ಎಂದು ಟ್ರಂಪ್ ಮತ್ತೆ ಮತ್ತೆ ಆರೋಪಿಸಿದ್ದಾರೆ.

ಬೈಡನ್​ ವಿರುದ್ಧ ಟ್ರಂಪ್ ಆರೋಪ
ಬೈಡನ್​ ವಿರುದ್ಧ ಟ್ರಂಪ್ ಆರೋಪ
author img

By

Published : Nov 6, 2020, 10:53 AM IST

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಇನ್ನೂ ಮತ ಎಣಿಕೆ ನಡೆಯುತ್ತಿರುವ ಕಾರಣ ಯಾರಿಗೂ ಸ್ಪಷ್ಟ ಬಹುಮತ ದಾಖಲಾಗಿಲ್ಲ. ಈ ವೇಳೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೈಡನ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರೆಟಿಕ್ ಅಭ್ಯರ್ಥಿ ಜೋ ಬೈಡನ್ ನಡುವೆ ಭಾರಿ ಪೈಪೋಟಿ ನಡೆದಿದೆ. ಈ ವರೆಗಿನ ಮತ ಎಣಿಕೆಯಲ್ಲಿ ಟ್ರಂಪ್ ಅವರಿಗಿಂತ ಜೋ ಬೈಡನ್ ಮುನ್ನಡೆ ಸಾಧಿಸಿದ್ದಾರೆ.

ಡೆಮಾಕ್ರೆಟಿಕ್ ಪಕ್ಷ ಮತವನ್ನು ಕದಿಯುತ್ತಿದೆ. ಅಕ್ರಮ ಮಾರ್ಗದ ಮೂಲಕ ಅಧಿಕಾರ ಪಡೆಯಲು ಬೈಡನ್​ ಹೀಗೆ ಮಾಡಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಡೊನಾಲ್ಡ್ ಟ್ರಂಪ್, ಡೆಮಾಕ್ರೆಟಿಕ್ ಪಕ್ಷ ನಮ್ಮ ಪಕ್ಷಕ್ಕೆ ಬಿದ್ದರುವ ಮತಗಳನ್ನು ಕದಿಯುತ್ತಿದೆ. ಇದರ ವಿರುದ್ಧ ಕಾನೂನು ಸಮರ ನಡೆಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ಅಮೆರಿಕದಲ್ಲಿ ಮತದಾನ ಪ್ರಕ್ರಿಯೆ ಮುಗಿದಿದೆ ಎಂದು ಟ್ವೀಟ್ ಮಾಡಿದ್ದ ಟ್ರಂಪ್, ಬಳಿಕ ತಮ್ಮ ಟ್ವೀಟ್‌ ಅನ್ನು ಡಿಲೀಟ್ ಮಾಡಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಮಿಚಿಗನ್​ ಕೋರ್ಟ್​ ಟ್ರಂಪ್​ ಅರ್ಜಿಯನ್ನ ವಜಾ ಮಾಡಿದೆ. ಇದು ಹಾಲಿ ಅಧ್ಯಕ್ಷರಿಗೆ ಹಿನ್ನಡೆಯನ್ನುಂಟು ಮಾಡಿದರೂ, ಕಾನೂನು ಹೋರಾಟ ಕೈಬಿಡದಿರಲು ಟ್ರಂಪ್​ ನಿರ್ಧರಿಸಿದ್ದಾರೆ.

ಬೈಡನ್ ಈಗಾಗಲೇ ಮಿಚಿಗನ್ ಮತ್ತು ವಿಸ್ಕಾನ್ಸಿನ್ ಗೆದ್ದಿದ್ದಾರೆ. ಅರಿಜೋನಾದಲ್ಲಿ ಟ್ರಂಪ್ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಟ್ರಂಪ್ ಅಭಿಮಾನ ಬಳಗ ಹೇಳಿದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶವಾದ ಮಾರಿಕೊಪಾ ಕೌಂಟಿಯನ್ನೂ ಒಳಗೊಂಡಂತೆ ಇನ್ನೂ ಅನೇಕ ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರೆದಿದೆ. ಇನ್ನೂ ಕೆಲ ದಿನಗಳ ಬಳಿಕವಷ್ಟೇ ಅಮೆರಿಕದ ಅಧ್ಯಕ್ಷ ಯಾರೆಂಬ ಅಂತಿಮ ಫಲಿತಾಂಶ ಹೊರಬೀಳಲಿದೆ.

ಪ್ರಸ್ತುತ ಬೈಡನ್​ 253 ಎಲೆಕ್ಟರೋಲ್​ ಮತಗಳನ್ನ ಪಡೆಯುವ ಮೂಲಕ ಮುನ್ನಡೆ ಗಳಿಸಿದ್ದು, ಅಧ್ಯಕ್ಷ ಪದವಿಗೆ 270 ಮತಗಳ ಅಗತ್ಯವಿದೆ. ಟ್ರಂಪ್​ 214 ಮತಗಳ ಮೂಲಕ ಹಿನ್ನಡೆ ಅನುಭವಿಸುತ್ತಿದ್ದಾರೆ. ಇನ್ನೂ ಹಲವು ರಾಜ್ಯಗಳಲ್ಲಿ ಮತ ಎಣಿಕೆ ಆಗಬೇಕಿದ್ದು, ಅಂತಿಮ ಫಲಿತಾಂಶಕ್ಕೆ ಕಾಯಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.