ETV Bharat / international

ಅಮೆರಿಕ ಚುನಾವಣೆ: ಚುನಾವಣಾ ಕೇಂದ್ರಗಳ ಬಳಿ ಧಾವಿಸಿದ ಟ್ರಂಪ್ ಬೆಂಬಲಿಗರು - ರಿಪಬ್ಲಿಕ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್

ಎಂದಿಗೂ ಇಲ್ಲದ ವಿವಾದವನ್ನು ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸೃಷ್ಟಿಸಿದೆ. ಮಾಹಿತಿಯಂತೆ ಕೇವಲ 6 ಮತಗಳು ಜೋ ಬೈಡನ್ ಗೆಲ್ಲಲು ಅಗತ್ಯವಿದೆ.

US Election
ಅಮೆರಿಕ ಅಧ್ಯಕ್ಷೀಯ ಚುನಾವಣೆ
author img

By

Published : Nov 5, 2020, 4:13 PM IST

ವಾಷಿಂಗ್ಟನ್​​: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕಗ್ಗಂಟಾಗುತ್ತಿದೆ. ಇನ್ನೂ ಮತ ಎಣಿಕೆ ಜಾರಿಯಾಲ್ಲಿರುವಾಗಲೇ ಗೆಲುವು ಘೋಷಿಸಿಕೊಂಡು ಜೊತೆಗೆ ಅಕ್ರಮ ಚುನಾವಣೆ ನಡೆದಿರುವುದಾಗಿ ಆರೋಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಟ್ರಂಪ್ ಹೇಳಿಕೊಂಡಿದ್ದು, ಸಾಕಷ್ಟು ವಿವಾದವನ್ನು ಸೃಷ್ಟಿಸಿದೆ.

72,110,951 ಮತಗಳೊಂದಿಗೆ 264 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದಿರುವ ಜೋ ಬೈಡನ್ ಗೆಲುವಿಗೆ ಸಮೀಪದಲ್ಲಿದ್ದಾರೆ. 68,643,544 ಮಂದಿಯ ಮತಗಳೊಂದಿಗೆ 214 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಪಡೆದಿರುವ ರಿಪಬ್ಲಿಕ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಸ್ವಲ್ಪ ದೂರವಿದ್ದಾರೆ.

ಕೇವಲ ಆರು ಎಲೆಕ್ಟೋರಲ್ ಮತಗಳನ್ನು ಪಡೆದರೆ ಬೈಡನ್ ಗೆಲುವು ಸಾಧಿಸಲಿದ್ದು, ಟ್ರಂಪ್ ಗೆಲುವಿಗಾಗಿ ಸುಮಾರು ಇನ್ನೂ 56 ಎಲೆಕ್ಟೋರಲ್ ಮತಗಳನ್ನು ಪಡೆಯುವ ಅಗತ್ಯವಿದೆ. ಪೆನ್ಸಿಲ್ವೇನಿಯಾ, ನಾರ್ಥ್ ಕೆರೊಲಿನಾ, ಜಾರ್ಜಿಯಾ ಹಾಗೂ ನೆವಾಡದಲ್ಲಿ ಟ್ರಂಪ್ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಈ ರಾಜ್ಯಗಳಲ್ಲಿ ಇನ್ನೂ ಮತ ಎಣಿಕೆ ಪ್ರಗತಿಯಲ್ಲಿದೆ.

ಅತ್ಯಂತ ಪ್ರಮುಖವಾದ ಮಿಚಿಗನ್ ಹಾಗೂ ವಿಸ್ಕಾಸಿನ್ ರಾಜ್ಯಗಳು ಬೈಡನ್ ತೆಕ್ಕೆಗೆ ಬಿದ್ದಿವೆ. ಒಂದೆಡೆ ಪ್ರತಿ ಮತವನ್ನೂ ಎಣಿಕೆ ಮಾಡುವಂತೆ ನ್ಯೂಯಾರ್ಕ್​ನಲ್ಲಿ ಬಿಡೆನ್ ಪರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಕೆಲವೆಡೆ ಮತ ಎಣಿಕೆ ನಿಲ್ಲಿಸುವಂತೆ ಟ್ರಂಪ್ ಬೆಂಬಲಿಗರು ಚುನಾವಣಾ ಕೇಂದ್ರಗಳ ಬಳಿ ಜಮಾವಣೆಗೊಂಡಿದ್ದಾರೆ.

ಪೋರ್ಟ್​ಲ್ಯಾಂಡ್​​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪಟಾಕಿ ಹಾಗೂ ರೈಫಲ್ ಅನ್ನು ಜಪ್ತಿ ಮಾಡಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹಲವೆಡೆ ನ್ಯಾಷನಲ್ ಗಾರ್ಡ್​ಗಳ ನಿಯೋಜನೆ ಮಾಡಲಾಗಿದೆ. ನ್ಯೂಯಾರ್ಕ್​ನಲ್ಲಿ 50 ಮಂದಿಯನ್ನು ಹಾಗೂ ಡೆನ್ವೇರ್​​ನಲ್ಲಿ ಪೊಲೀಸರೊಂದಿಗೆ ಜಗಳಕ್ಕೆ ಇಳಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.