ವಾಷಿಂಗ್ಟನ್: ಜಗತ್ತಿನ ಕೊರೊನಾ ಪ್ರಕರಣಗಳು ಹಾಗೂ ಮೃತರ ಸಂಖ್ಯೆಯಲ್ಲಿ ಮೊದಲ ಸ್ಥಾನವನ್ನೇ ಕಾಯ್ದಿರಿಸಿಕೊಂಡಿರುವ ಅಮೆರಿಕದಲ್ಲೀಗ ಸೋಂಕಿತರ ಸಂಖ್ಯೆ 30 ಮಿಲಿಯನ್ ಗಡಿ ದಾಟಿದೆ.
2020ರ ನವೆಂಬರ್ನಲ್ಲಿ ಅಮೆರಿಕದ ಕೋವಿಡ್ ಕೇಸ್ಗಳ ಸಂಖ್ಯೆ 10 ಮಿಲಿಯನ್ ಹಾಗೂ 2021ರ ಜನವರಿಯಲ್ಲಿ 20 ಮಿಲಿಯನ್ ಗಡಿ ತಲುಪಿತ್ತು. ಈಗ ಸೋಂಕಿತರ ಸಂಖ್ಯೆ 30,009,386 ಹಾಗೂ ಸಾವಿನ ಸಂಖ್ಯೆ 5,45,237ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: ಕೋವಿಡ್ ಅಬ್ಬರ: ನಿನ್ನೆ ಒಂದೇ ದಿನ 53 ಸಾವಿರ ಕೇಸ್, 250 ಸಾವು ವರದಿ.. ಒಟ್ಟು 5.31 ಕೋಟಿ ಮಂದಿಗೆ ಲಸಿಕೆ
36,47,735 ಪ್ರಕರಣಗಳೊಂದಿಗೆ ಕ್ಯಾಲಿಫೋರ್ನಿಯಾ ಕೋವಿಡ್ ಪೀಡಿತ ರಾಜ್ಯಗಳ ಪೈಕಿ ಸ್ಥಾನದಲ್ಲಿ ಮೊದಲಿದ್ದು, ನಂತರದ ಸ್ಥಾನದಲ್ಲಿ ಟೆಕ್ಸಾಸ್ (27,65,635), ಫ್ಲೋರಿಡಾ (20,21,656), ನ್ಯೂಯಾರ್ಕ್ (18,14,662) ನಗರಗಳಿವೆ. ಇನ್ನು ವಿಶ್ವದ ಕೋವಿಡ್ ಸಾವು-ನೋವಿನ ಪೈಕಿ ಬ್ರೆಜಿಲ್ ಎರಡನೇ ಹಾಗೂ ಭಾರತ ಮೂರನೇ ಸ್ಥಾನದಲ್ಲಿದೆ.