ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ವಿವಾದಾಸ್ಪದವಾಗಿದ್ದರೇ ಅಥವಾ ಅದರಲ್ಲಿ ಏನಾದರೂ ಗೋಲ್ಮಾಲ್ ನಡೆದರೆ, ಅದನ್ನು ಎದುರಿಸಲು ಕಾಂಗ್ರೆಸ್ ತಯಾರಿದೆ ಎಂದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.
ಚುನಾವಣಾ ಮತದಿಂದ ಸ್ಪಷ್ಟ ಬಹುಮತ ಬರದಿದ್ದರೇ, ಸದನ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುತ್ತದೆ ಎಂದು ದಿ ಹಿಲ್ ನ್ಯೂಸ್ ವೆಬ್‌ಸೈಟ್ ವರದಿ ಮಾಡಿದೆ.
"ಕಾನೂನು ಏನೆಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಮತ ಏಣಿಕೆ ವೇಳೆ ಕಾಂಗ್ರೆಸ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಪಾತ್ರ ಏನೆಂಬುದು ನಮಗೆ ತಿಳಿದಿದೆ."ನಾವು ಸಿದ್ಧರಿದ್ದೇವೆ, ನಾವು ಸಿದ್ಧರಾಗಿದ್ದೇವೆ. ಅಧ್ಯಕ್ಷರ ಈ ಬೇಜವಾಬ್ದಾರಿತನ, ಸಂವಿಧಾನದ ಬಗ್ಗೆ ಅವರ ಅಗೌರವ, ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಚುನಾವಣೆಯ ಸಮಗ್ರತೆಗಾಗಿ ನಾವು ಸ್ವಲ್ಪ ಸಮಯದವರೆಗೆ ಸಿದ್ಧರಾಗಿದ್ದೇವೆ ಎಂದು ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.
ಮಂಗಳವಾರ ರಾತ್ರಿಯೇ ವಿಜಯ ಘೋಷಿಸುವ ಯೋಜನೆಗಳನ್ನು ಟ್ರಂಪ್ ಖಾಸಗಿಯಾಗಿ ಚರ್ಚಿಸಿದ್ದಾರೆ ಎಂದು ಆಕ್ಸಿಯೋಸ್ ಸುದ್ದಿ ಪತ್ರಿಕೆ ಭಾನುವಾರ ವರದಿಯನ್ನು ಪ್ರಕಟಿಸಿತ್ತು. ಈ ವರದಿಯ ಒಂದು ದಿನದ ನಂತರ ಪೆಲೋಸಿ ಅವರ ಹೇಳಿಕೆಗಳು ಹೊರಬಿದ್ದಿವೆ.
ಭಾನುವಾರ ಉತ್ತರ ಕೆರೊಲಿನಾದ ಚಾರ್ಲೊಟ್‌ಗೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಆಕ್ಸಿಯೋಸ್ ವರದಿ "ಸುಳ್ಳು" ಎಂದು ಹೇಳಿದ್ದಾರೆ.