ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕದ ಕರಾಳ ರೂಪವನ್ನು ನೋಡಿ, ಅದರಿಂದ ಚೇತರಿಸಿಕೊಂಡು ಸಹಜ ಸ್ಥಿತಿಯತ್ತ ಮರಳುತ್ತಿರುವ ಅಮೆರಿಕವು ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದವರು ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂದು ತನ್ನ ಜನತೆಗೆ ಸೂಚಿಸಿದೆ.
ಹೊಸ ಕೋವಿಡ್ ಮಾರ್ಗಸೂಚಿ ಹೊರಡಿಸಿರುವ ಯುಎಸ್ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ), ಸಂಪೂರ್ಣವಾಗಿ ವ್ಯಾಕ್ಸಿನ್ ಹಾಕಿಸಿಕೊಂಡ ಜನರು ಮಾಸ್ಕ್ ಧರಿಸಬೇಕಿಲ್ಲ. ದೈಹಿಕ ಅಂತರ ಕಾಯ್ದುಕೊಳ್ಳಬೇಕಿಲ್ಲ. ದೇಶದೊಳಗೆ ಪ್ರಯಾಣಿಸುವವರು ಕ್ವಾರಂಟೈನ್ಗೆ ಒಳಪಡುವ ಅಗತ್ಯತೆಯಿಲ್ಲ ಎಂದು ಸಲಹೆ ನೀಡಿದೆ.
-
Today is a great day for America in our long battle with COVID-19.
— Joe Biden (@JoeBiden) May 13, 2021 " class="align-text-top noRightClick twitterSection" data="
Just a few hours ago, the CDC announced they are no longer recommending that fully vaccinated people need to wear masks.
">Today is a great day for America in our long battle with COVID-19.
— Joe Biden (@JoeBiden) May 13, 2021
Just a few hours ago, the CDC announced they are no longer recommending that fully vaccinated people need to wear masks.Today is a great day for America in our long battle with COVID-19.
— Joe Biden (@JoeBiden) May 13, 2021
Just a few hours ago, the CDC announced they are no longer recommending that fully vaccinated people need to wear masks.
ಸಿಡಿಸಿ ಮಾರ್ಗಸೂಚಿಯನ್ನು ಶ್ಲಾಘಿಸಿರುವ ಯುಸ್ ಅಧ್ಯಕ್ಷ ಜೋ ಬೈಡನ್, "ಕೋವಿಡ್ ವಿರುದ್ಧದ ಹೋರಾಟದಲ್ಲಿ ಇಂದು ಅಮೆರಿಕಕ್ಕೆ ಒಳ್ಳೆಯ ದಿನ. ಲಸಿಕೆ ಪಡೆಯಿರಿ ಅಥವಾ ವ್ಯಾಕ್ಸಿನ್ ಹಾಕಿಸಿಕೊಳ್ಳುವವರೆಗೂ ಮಾಸ್ಕ್ ಧರಿಸಿ" ಎಂದು ಹೇಳಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಬೈಡನ್ ಇಬ್ಬರೂ ಮಾಸ್ಕ್ ಧರಿಸದೇ ಶ್ವೇತಭವನದ ಎದುರು ಮಾಧ್ಯಮಗಳ ಮುಂದೆ ಬಂದಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಹೊಸ ಬಗೆ ಕೋವಿಡ್ ಅಟ್ಟಹಾಸ: ಅಮೆರಿಕದಲ್ಲಿ 12-15 ವಯಸ್ಸಿನ ಮಕ್ಕಳಿಗೂ ಲಸಿಕೆ
"ನೀವು ಸಂಪೂರ್ಣವಾಗಿ ಲಸಿಕೆ ಪಡೆಯುತ್ತೀರೋ, ಇಲ್ಲಾ ಮಾಸ್ಕ್ ಧರಿಸುತ್ತೀರೋ? ಆಯ್ಕೆ ನಿಮ್ಮದು. ಆದರೆ ಸಾಂಕ್ರಾಮಿಕದ ವಿರುದ್ಧದ ಹೋರಾಟ ಕೊನೆಯಾಗುವವರೆಗೂ ದಯವಿಟ್ಟು ನಿಮ್ಮನ್ನು ರಕ್ಷಿಸಿಕೊಳ್ಳಿ" ಎಂದು ಶ್ವೇತಭವನ ಟ್ವೀಟ್ ಮಾಡಿದೆ.
-
Big news from the CDC: If you’re fully vaccinated, you do not need to wear a mask – indoors or outdoors, in most settings.
— The White House (@WhiteHouse) May 13, 2021 " class="align-text-top noRightClick twitterSection" data="
We’ve gotten this far. Whether you choose to get vaccinated or wear a mask, please protect yourself until we get to the finish line. pic.twitter.com/XI4yPmhWaD
">Big news from the CDC: If you’re fully vaccinated, you do not need to wear a mask – indoors or outdoors, in most settings.
— The White House (@WhiteHouse) May 13, 2021
We’ve gotten this far. Whether you choose to get vaccinated or wear a mask, please protect yourself until we get to the finish line. pic.twitter.com/XI4yPmhWaDBig news from the CDC: If you’re fully vaccinated, you do not need to wear a mask – indoors or outdoors, in most settings.
— The White House (@WhiteHouse) May 13, 2021
We’ve gotten this far. Whether you choose to get vaccinated or wear a mask, please protect yourself until we get to the finish line. pic.twitter.com/XI4yPmhWaD
ವಿಶ್ವದ ಕೋವಿಡ್ ಪೀಡಿತ ರಾಷ್ಟ್ರಗಳಲ್ಲಿ ಕೊರೊನಾ ಕೇಸ್ಗಳು ಹಾಗೂ ಸಾವಿನ ಸಂಖ್ಯೆ ಎರಡರಲ್ಲೂ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಇದೀಗ ವೈರಸ್ ಆರ್ಭಟ ಕಡಿಮೆಯಾಗಿದೆ. ಈವರೆಗೆ 3,36,26,097 ಸೋಂಕಿತರು ಪತ್ತೆಯಾಗಿದ್ದು, 5,98,540 ಮಂದಿ ಬಲಿಯಾಗಿದ್ದಾರೆ. ಯುಎಸ್ ಜನಸಂಖ್ಯೆಯ ಶೇ.47 ರಷ್ಟು ಅಂದರೆ 154 ಮಿಲಿಯನ್ ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದು, ಇವರಲ್ಲಿ 119 ಮಿಲಿಯನ್ ಜನರು ಎರಡೂ ಡೋಸ್ಗಳನ್ನು ಹಾಕಿಸಿಕೊಂಡಿದ್ದಾರೆ. 12 ರಿಂದ 15 ವರ್ಷದ ಮಕ್ಕಳಿಗೆ ಕೂಡ ಶೀಘ್ರದಲ್ಲೇ ವ್ಯಾಕ್ಸಿನೇಷನ್ ಆರಂಭವಾಗಲಿದೆ.