ETV Bharat / international

ನಾಯಕತ್ವದ ವಿರುದ್ಧ ಅವಿಶ್ವಾಸ ಮತ ಚಲಾವಣೆಗೆ ಮುಂದಾದ ಯುಎಸ್ ಕ್ಯಾಪಿಟಲ್ ಪೊಲೀಸರು - ಜನವರಿ 6 ರ ದಂಗೆ

ಮಾಧ್ಯಮ ವರದಿಗಳ ಪ್ರಕಾರ, ಜನವರಿ 6 ರ ದಂಗೆಯಲ್ಲಿ ಕ್ಯಾಪಿಟಲ್ ಪೊಲೀಸ್ ಮತ್ತು ಮೆಟ್ರೋಪಾಲಿಟನ್ ಪೊಲೀಸ್ ಸೇರಿದಂತೆ 140 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಕೆಲವು ಅಧಿಕಾರಿಗಳಿಗೆ ಮಿದುಳಿನ ಗಾಯಗಳಾಗಿದ್ದು, ಒಬ್ಬರು ಕಣ್ಣು ಕಳೆದುಕೊಳ್ಳುವ ನಿರೀಕ್ಷೆಯಿದೆ ಮತ್ತು ಇನ್ನೊಬ್ಬ ಅಧಿಕಾರಿಯನ್ನು ಲೋಹದ ಬೇಲಿಯ ಮುಳ್ಳಿನಿಂದ ಇರಿಯಲಾಗಿದೆ.

US Capitol police to hold no-confidence vote against senior leadership
ಹಿರಿಯ ನಾಯಕತ್ವದ ವಿರುದ್ಧ ಅವಿಶ್ವಾಸ ಮತ ಚಲಾವಣೆಗೆ ಮುಂದಾದ ಯುಎಸ್ ಕ್ಯಾಪಿಟಲ್ ಪೊಲೀಸರು
author img

By

Published : Feb 11, 2021, 5:56 PM IST

ವಾಷಿಂಗ್ಟನ್: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರ ಹಿಂಸಾತ್ಮಕ ಕೃತ್ಯವನ್ನು ಸಮರ್ಪಕವಾಗಿ ತಡೆಯುವಲ್ಲಿ ವಿಫಲವಾದ ಕಾರಣ ಯುಎಸ್ ಕ್ಯಾಪಿಟಲ್ ಪೊಲೀಸ್​ ಸದಸ್ಯರು ಈ ವಾರ ಫೋರ್ಸ್ ನಾಯಕತ್ವದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ಯೋಜನೆ ರೂಪಿಸಿದ್ದಾರೆ.

ಕ್ಯಾಪಿಟಲ್ ಪೊಲೀಸ್ ಒಕ್ಕೂಟದ ಕಾರ್ಯನಿರ್ವಾಹಕ ಮಂಡಳಿ ಈ ವಾರ ಹಿರಿಯ ನಾಯಕತ್ವದ ಸದಸ್ಯರ ವಿರುದ್ಧ ಅವಿಶ್ವಾಸ ಮತದಾನಕ್ಕೆ ಕರೆ ನೀಡಿದೆ. ಇದರಲ್ಲಿ ಆ್ಯಕ್ಟಿಂಗ್ ಚೀಫ್ ಯೋಗಾನಂದ ಪಿಟ್ಮನ್, ಸಹಾಯಕ ಮುಖ್ಯಸ್ಥ ಚಾಡ್ ಥಾಮಸ್, ಆ್ಯಕ್ಟಿಂಗ್ ಅಸಿಸ್ಟೆಂಟ್ ಚೀಫ್ ಸೀನ್ ಗಲ್ಲಾಘರ್, ಮತ್ತು ಉಪ ಮುಖ್ಯಸ್ಥರಾದ ತಿಮೋತಿ ಬೋವೆನ್, ಜೆಫ್ರಿ ಪಿಕೆಟ್ ಮತ್ತು ಎರಿಕ್ ವಾಲ್ಡೋ ವಿರುದ್ಧ ನಿರ್ಣಯ ಮಂಡಿಸಲು ಒಕ್ಕೂಟ ಮುಂದಾಗಿದೆ.

ನಾಯಕತ್ವದ ವೈಫಲ್ಯಗಳೇ ಈ ದಂಗೆಗೆ ಕಾರಣ. ನಾಯಕತ್ವವು ನಮ್ಮನ್ನು ವಿಫಲಗೊಳಿಸಿದೆ, ಮತ್ತು ನಾವು ಭಯಾನಕ ಬೆಲೆ ತೆತ್ತಿದ್ದೇವೆ ಎಂದು ಕ್ಯಾಪಿಟಲ್ ಪೊಲೀಸ್ ಯೂನಿಯನ್ ಅಧ್ಯಕ್ಷರು ಹೇಳಿದ್ದಾರೆ.

ಜನವರಿ 6 ರಂದು, ಟ್ರಂಪ್ ಬೆಂಬಲಿಗರ ಗುಂಪು ಯುಎಸ್ ಕ್ಯಾಪಿಟಲ್​ಗೆ ಅತಿಕ್ರಮಣ ಮಾಡಿತ್ತು. ಅಂದು ಗಲಭೆಯಲ್ಲಿ ಒಬ್ಬ ವಾಯುಪಡೆಯ ಯೋಧ ಸೇರಿದಂತೆ ಐವರು ಸಾವನ್ನಪ್ಪಿದ್ದರು. ಆ ವೇಳೆ, ಟ್ರಂಪ್ ಬೆಂಬಲಿಗನೋರ್ವನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದರು.

ಈ ಮಾರಣಾಂತಿಕ ಹಿಂಸಾಚಾರವನ್ನು ಪ್ರಚೋದಿಸಿದ ಕಾರಣಕ್ಕಾಗಿ ಟ್ರಂಪ್​ ವಿರುದ್ಧ ದೋಷಾರೋಪಣೆ ಸಲ್ಲಿಸಲಾಗಿತ್ತು. ಮತ್ತು ಎರಡು ಬಾರಿ ದೋಷಾರೋಪಣೆ ಒಳಗಾದ ಮೊದಲ ಯುಎಸ್ ಅಧ್ಯಕ್ಷ ಟ್ರಂಪ್​ ಆಗಿದ್ದಾರೆ. ಟ್ರಂಪ್ ಪ್ರಸ್ತುತ ತಮ್ಮ ಎರಡನೇ ದೋಷಾರೋಪಣೆ ವಿಚಾರಣೆಗೆ ಒಳಗಾಗುತ್ತಿದ್ದಾರೆ, ಅಲ್ಲಿ ಚುನಾವಣಾ ಸೋಲನ್ನು ಸ್ವೀಕರಿಸಲು ಮೊಂಡುತನದಿಂದ ನಿರಾಕರಿಸುವ ಮೂಲಕ ಟ್ರಂಪ್ ಹಿಂಸಾಚಾರವನ್ನು ಪ್ರಚೋದಿಸಿದರು. 2024 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಸೇರಿದಂತೆ ಯಾವುದೇ ಸಾರ್ವಜನಿಕ ಹುದ್ದೆಗಳನ್ನು ಅಲಂಕರಿಸುವುದನ್ನು ತಡೆಯಲು ಹೌಸ್ ವ್ಯವಸ್ಥಾಪಕರು ಈ ಮೂಲಕ ಟ್ರಂಪ್​ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.