ವಾಷಿಂಗ್ಟನ್: ಕ್ಯಾಪಿಟಲ್ ಹಿಂಸಾಚಾರದ ಬಳಿಕ ಯುಎಸ್ ಕ್ಯಾಪಿಟಲ್ ಪೊಲೀಸ್ ಮುಖ್ಯಸ್ಥ ಸ್ಟೀವನ್ ಸುಂಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಕ್ಯಾಪಿಟಲ್ ಭವನದೊಳಗೆ ನುಗ್ಗದಂತೆ ತಡೆಯಲು ವಿಫಲರಾಗಿದ್ದಾರೆ ಎಂಬ ಟೀಕೆಗೆ ಗುರಿಯಾದ ಹಿನ್ನೆಲೆ ಈ ತಿಂಗಳು ರಾಜೀನಾಮೆ ನೀಡುವುದಾಗಿ ಯುಎಸ್ ಕ್ಯಾಪಿಟಲ್ ಪೊಲೀಸ್ ಮುಖ್ಯಸ್ಥ ಸ್ಟೀವನ್ ಸುಂಡ್ ಘೋಷಿಸಿದ್ದಾರೆ. ಸುಂಡ್ ಕ್ಯಾಪಿಟಲ್ ಪೊಲೀಸ್ ಮಂಡಳಿಗೆ ಪತ್ರ ಬರೆಯುವ ಮುಖೇನ ತಮ್ಮ ರಾಜೀನಾಮೆ ಘೋಷಿಸಿದ್ದು, ಇವರ ಜೊತೆಗೆ ಯುಎಸ್ ಕ್ಯಾಪಿಟಲ್ ಬೋರ್ಡ್ನ ಇತರ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಭವನಕ್ಕೆ ನುಗ್ಗಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದು, ಘಟನೆಯಲ್ಲಿ ಮಹಿಳೆ ಸೇರಿ ನಾಲ್ಕು ಜನ ಸಾವನ್ನಪ್ಪಿದ್ದರು. ಕಾಂಗ್ರೆಸ್ ಸಮಾವೇಶ, ಮತ ಚಲಾಯಿಸುವ ಮತ್ತು ಜೋ ಬೈಡನ್ ಅವರ ಅಧ್ಯಕ್ಷೀಯ ಗೆಲುವು ದೃಢೀಕರಿಸುವ ನಿರೀಕ್ಷೆಯಿಂದ ಟ್ರಂಪ್ ಬೆಂಬಲಿಗರು ಭದ್ರತಾ ಪರಿಧಿ ಉಲ್ಲಂಘಿಸಿ, ಅಮೆರಿಕದ ಕ್ಯಾಪಿಟಲ್ ಭವನದಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ರು. ಈ ಹಿನ್ನೆಲೆ ಭದ್ರತೆ ನೀಡಲು ವಿಫಲರಾದ ಕಾರಣ ಯುನೈಟೆಡ್ ಸ್ಟೇಟ್ಸ್ ಕ್ಯಾಪಿಟಲ್ ಪೊಲೀಸ್ ಕಾರ್ಮಿಕ ಸಮಿತಿಯು ಸುಂಡ್ ಅವರ ರಾಜೀನಾಮೆಗೆ ಆಗ್ರಹಿಸಿತ್ತು.
ಇದನ್ನೂ ಓದಿ:ಯುಎಸ್ ಕ್ಯಾಪಿಟಲ್ಗೆ ಮುತ್ತಿಗೆ : ಅಶ್ಲಿ ಬಬ್ಬಿತ್ ಸೇರಿದಂತೆ ಮೃತ ಮೂವರ ಮಾಹಿತಿ ಕಲೆ ಹಾಕಿದ ಪೊಲೀಸರು