ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಮಿಂಚಿನ ದಾಳಿ ನಡೆಸುವ ಮೂಲಕ ಯುದ್ಧದ ಪರಿಸ್ಥಿತಿಯಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಮತ್ತೊಂದೆಡೆ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ(ಐಸಿಬಿಎಂ) ವಿರುದ್ಧ ಯುಎಸ್‌ನ ದುರ್ಬಲತೆಯ ಬಗ್ಗೆ ಅಮೆರಿಕನ್ ಫಿಸಿಕಲ್ ಸೊಸೈಟಿ ಆಶ್ಚರ್ಯಕರ ವರದಿಯೊಂದನ್ನು ಪ್ರಕಟಿಸಿದೆ.
1957ರಿಂದಲೂ ಅಮೆರಿಕ 350 ಶತಕೋಟಿ ಡಾಲರ್‌ಗೂ ಅಧಿಕ ಖರ್ಚು ಮಾಡುವ ಮೂಲಕ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರಿಣಾಮಕಾರಿ ಪ್ರತಿಬಂಧಕ ವ್ಯವಸ್ಥೆ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಲೇ ಇದೆ. ವರದಿ ಪ್ರಕಾರ ಇದುವರೆಗೆ ಅಭಿವೃದ್ಧಿಪಡಿಸಿರುವ ಯಾವುದೇ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಐಸಿಬಿಎಂ ಬೆದರಿಕೆಗಳ ವಿರುದ್ಧ ಪರಿಣಾಮಕಾರಿಯಾಗಿಲ್ಲ. ಇದು ಬಹುಕುಶಲ ಅಥವಾ ಗ್ಲೈಡ್ ಮಾಡಬಹುದು ಎಂಬುದು ಅಧ್ಯಯನದಲ್ಲಿ ಹೇಳಲಾಗಿದೆ.
ಅಮೆರಿಕದ ಪ್ರಮುಖ ನಗರವೊಂದರ ಮೇಲೆ ಐಸಿಬಿಎಂ ಮೂಲಕ ಸಾಗಿಸಲಾದ ಒಂದು ಪರಮಾಣು ಸಿಡಿತಲೆ ಸ್ಫೋಟಗೊಂಡರೆ ಸುಮಾರು 10 ಲಕ್ಷ ಜನರನ್ನು ಕೊಲ್ಲುತ್ತದೆ. ಸುಮಾರು 100 ಚದರ ಮೈಲಿ ಪ್ರದೇಶ ಸಮತಟ್ಟಾಗಿಸಬಹುದು ಎಂದು ಅಂದಾಜಿಸಲಾಗಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರತಿಬಂಧಿಸುವ ಸವಾಲು ಮುಂದಿನ 15 ವರ್ಷಗಳವರೆಗೆ ಉಳಿಯುತ್ತದೆ ಎಂದು ವರದಿಯು ಹೇಳುತ್ತದೆ. ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣೆಯನ್ನು ಅಭಿವೃದ್ಧಿಪಡಿಸುವಲ್ಲಿ ಹಾಗೂ ಇದನ್ನು ನಿಯೋಜಿಸುವಲ್ಲಿ ಒಳಗೊಂಡಿರುವ ಕೆಲವು ಪ್ರಮುಖ ಸವಾಲುಗಳನ್ನು ಮಾತ್ರ ಪರಿಹರಿಸಲಾಗಿದೆ.
ಪ್ರಸ್ತುತ ಅಥವಾ ಪ್ರಸ್ತಾವಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳು ಉತ್ತರ ಕೊರಿಯಾದಿಂದ ಉಡಾವಣೆಯಾದ ಏಕ ಪರಮಾಣು - ಶಸ್ತ್ರಸಜ್ಜಿತ ಐಸಿಬಿಎಂ ಅಥವಾ 10 ಐಸಿಬಿಎಂಗಳ ಸಾಲ್ವೊವನ್ನು ಒಳಗೊಂಡಿರುವ ಬೇಸ್‌ಲೈನ್ ಬೆದರಿಕೆಯ ವಿರುದ್ಧ ಅಮೆರಿಕ ರಕ್ಷಿಸಬಹುದೇ ಎಂಬ ಮೂಲಭೂತ ಪ್ರಶ್ನೆಯು ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ವರದಿಯು ಭಾರಿ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಉಕ್ರೇನ್ - ರಷ್ಯಾ ಸಂಘರ್ಷದಲ್ಲಿ ಮಾಸ್ಕೋದ 1,000ಕ್ಕೂ ಅಧಿಕ ಸೈನಿಕರ ಸಾವು: ಉಕ್ರೇನ್ ರಕ್ಷಣಾ ಸಚಿವಾಲಯ