ETV Bharat / international

ರಷ್ಯಾ - ಉಕ್ರೇನ್​​ ಸಂಘರ್ಷ: ಫ್ರೆಂಚ್ ಅಧ್ಯಕ್ಷರೊಂದಿಗೆ ಬೈಡನ್​ ಮಾತುಕತೆ

author img

By

Published : Mar 14, 2022, 10:04 AM IST

Russia-Ukraine Conflict: ಅಮೆರಿಕಾ ಅಧ್ಯಕ್ಷ ಜೋ ಬೈಡನ್​​ ಫ್ರೆಂಚ್ ಅಧ್ಯಕ್ಷ ಇಮ್ಮಾನ್ಯುವೆಲ್ ಮ್ಯಾಕ್ರೋನ್ ಅವರೊಂದಿಗೆ ಮಾತುಕತೆ ನಡೆಸಿದರು.

Biden discusses Ukraine war with Macron
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮತ್ತು ಫ್ರೆಂಚ್ ಅಧ್ಯಕ್ಷ ಇಮ್ಮಾನ್ಯುವೆಲ್ ಮ್ಯಾಕ್ರೋನ್

ವಾಷಿಂಗ್ಟನ್: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಫ್ರೆಂಚ್ ಅಧ್ಯಕ್ಷ ಇಮ್ಮಾನ್ಯುವೆಲ್ ಮ್ಯಾಕ್ರೋನ್ ಅವರೊಂದಿಗೆ ಮಾತನಾಡಿದರು. ಇಬ್ಬರೂ ನಾಯಕರು ಇತ್ತೀಚಿನ ರಾಜತಾಂತ್ರಿಕ ಬಿಕ್ಕಟ್ಟುಗಳನ್ನು ಪರಿಶೀಲಿಸಿದರು ಮತ್ತು ರಷ್ಯಾವನ್ನು ಅದರ ಕ್ರಮಗಳಿಗೆ ಹೊಣೆಗಾರರನ್ನಾಗಿ ಮಾಡಲು ಮತ್ತು ಉಕ್ರೇನ್ ಸರ್ಕಾರ ಮತ್ತು ಜನರನ್ನು ಬೆಂಬಲಿಸುವ ತಮ್ಮ ಬದ್ಧತೆಯನ್ನು ಇದೇ ವೇಳೆ ಒತ್ತಿಹೇಳಿದರು.

ಫೆ.24 ರಂದು, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಜನರು ತಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಕೋರಿದ ನಂತರ ರಷ್ಯಾ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ವಿಶೇಷ ಕಾರ್ಯಾಚರಣೆ ಉಕ್ರೇನಿಯನ್ ಮಿಲಿಟರಿ ಮೂಲಸೌಕರ್ಯವನ್ನು ಮಾತ್ರ ಗುರಿಯಾಗಿಸಿಕೊಂಡಿದೆ. ನಾಗರಿಕರಿಗೆ ಅಪಾಯವಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಆದಾಗ್ಯೂ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯನ್ನರ ಈ ಕ್ರಮವನ್ನು ನಿರಾಕರಿಸಿವೆ. ಮತ್ತು ಇದಕ್ಕೆ ಪ್ರತಿಕ್ರಿಯೆಯಾಗಿ ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿವೆ.

ಇದನ್ನೂ ಓದಿ: ಇಂದು ಮಾಸ್ಕೋ ಜತೆ ವಿಡಿಯೋ ಕಾನ್ಫರೆನ್ಸ್​​ ನಡೆಸಲಿರುವ ಉಕ್ರೇನ್​.. ಈಗಲಾದರೂ ಬೀಳುತ್ತಾ ಯುದ್ಧಕ್ಕೆ ಬ್ರೇಕ್​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.