ವಾಷಿಂಗ್ಟನ್: ಪ್ರಪಂಚದಾದ್ಯಂತ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಭಾರತ ಸೇರಿದಂತೆ ಅನೇಕ ದೇಶಗಳು ಈ ಸೋಂಕಿನಿಂದಾಗಿ ತತ್ತರಿಸಿ ಹೋಗಿವೆ. ಡೆಡ್ಲಿ ವೈರಸ್ಗೆ ಈಗಾಗಲೇ ಅನೇಕ ರಾಷ್ಟ್ರಗಳು ಲಸಿಕೆ ಕಂಡು ಹಿಡಿದಿವೆ. ಆದರೆ ಭಯದಿಂದಾಗಿ ಜನರು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಅಮೆರಿಕದಲ್ಲೂ ಅನೇಕರು ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಕಾರಣ, ಅಲ್ಲಿನ ಸರ್ಕಾರ ಮಹತ್ವದ ಆಫರ್ ನೀಡಿದೆ. ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿನ ಜನರಿಗೆ ಈ ಆಫರ್ ಘೋಷಣೆ ಮಾಡಲಾಗಿದೆ.
-
🍺We’ll see you from 4-8 pm at @VicturaParkDC! No appointment necessary. pic.twitter.com/Ljp75sdlnM
— Mayor Muriel Bowser (@MayorBowser) May 6, 2021 " class="align-text-top noRightClick twitterSection" data="
">🍺We’ll see you from 4-8 pm at @VicturaParkDC! No appointment necessary. pic.twitter.com/Ljp75sdlnM
— Mayor Muriel Bowser (@MayorBowser) May 6, 2021🍺We’ll see you from 4-8 pm at @VicturaParkDC! No appointment necessary. pic.twitter.com/Ljp75sdlnM
— Mayor Muriel Bowser (@MayorBowser) May 6, 2021
ವ್ಯಾಕ್ಸಿನ್ ಹಾಕಿಸಿಕೊಂಡರೆ ಬಿಯರ್ ಫ್ರೀ ಎಂದ ಮೇಯರ್
ಅಮೆರಿಕ ಜುಲೈ 4ರೊಳಗಾಗಿ ಶೇ 70ರಷ್ಟು ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿ ಇಟ್ಟುಕೊಂಡಿದೆ. ಆ ಗೋಲ್ ಮುಟ್ಟುವ ಉದ್ದೇಶದಿಂದ ಇದೀಗ 21 ವರ್ಷ ಮೇಲ್ಪಟ್ಟವರಿಗೆ ಈ ಆಫರ್ ನೀಡಲಾಗಿದೆ.
ಇದನ್ನೂ ಓದಿ: 'ಸರ್ ಕೋಪದಲ್ಲಿದಿರಾ, ಸ್ವಲ್ಪ ಕೇಳಿ ಸರ್.. ಪ್ಲೀಸ್': ಪೊಲೀಸರ ನಡೆಗೆ ನೆಟ್ಟಿಗರಿಂದ ಆಕ್ರೋಶ
ಅಲ್ಲಿನ ಮೇಯರ್ ಮುರಿಯಲ್ ಬೌಸರ್ ತಮ್ಮ ಟ್ವಿಟ್ಟರ್ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದು, ಲಸಿಕೆ ಹಾಕಿಸಿಕೊಳ್ಳುವ 21 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬಿಯರ್ ನೀಡಲಾಗುವುದು ಎಂದಿದ್ದಾರೆ. ಜುಲೈ 4ರಂದು ಅಮೆರಿಕ ಸ್ವಾತಂತ್ರ್ಯೋತ್ಸವ ದಿನ ಆಚರಣೆ ಮಾಡಲಿದ್ದು, ಅಷ್ಟರೊಳಗೆ ಬಹುತೇಕ ಎಲ್ಲರಿಗೂ ಲಸಿಕೆ ನೀಡುವ ಇರಾದೆ ಹೊಂದಿ ಈ ರೀತಿಯ ಆಫರ್ ನೀಡುತ್ತಿದೆ.