ETV Bharat / international

ಮರುಕಳಿಸಿದ ಅಮೆರಿಕ ಮತ್ತು ಚೀನಾ ಸಂಬಂಧಗಳು - ಅಮೆರಿಕ ಮತ್ತು ಚೀನಾ ವಹಿವಾಟು ಸುದ್ದಿ

“ವಾಣಿಜ್ಯ ಒಪ್ಪಂದಗಳಿಗೆ ಚೀನಾ ಈಗ ಸಿದ್ಧವಾಗಲೇಬೇಕು… ಒಂದು ವೇಳೆ ನಾನು ಎರಡನೇ ಅವಧಿಗೆ ಸ್ಪರ್ಧಿಸಿ, ಆಯ್ಕೆಯಾಗಿದ್ದೇ ಆದರೆ ಅದು ಇನ್ನಷ್ಟು ಕಠಿಣವಾಗಲಿದೆ”. ಇದಕ್ಕೆ ಉತ್ತರಿಸಿದ್ದ ಚೀನಾ, ಆಮದು ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಿಂತೆ ಅಮೆರಿಕಕ್ಕೆ ಯಾವುದೇ ವಿನಾಯಿತಿಗಳನ್ನು ನೀಡಲಾರೆ ಎಂದು ಸ್ಪಷ್ಟಪಡಿಸಿತ್ತು. ಜಗತ್ತಿನ ಈ ಎರಡೂ ಪ್ರಮುಖ ಆರ್ಥಿಕ ಶಕ್ತಿಗಳ ನಡುವಿನ ಈ ಬಹಿರಂಗ ತಿಕ್ಕಾಟವು ಜಾಗತಿಕ ಆರ್ಥಿಕ ಹಿಂಜರಿಕೆಯತ್ತ ವಾಲುವಂತೆ ಮಾಡುತ್ತಿದ್ದ ಈ ಸಮಯದಲ್ಲಿ, ವಾಷಿಂಗ್ಟನ್‌ ಮತ್ತು ಬೀಜಿಂಗ್‌ ಕೊನೆಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿವೆ.

us-and-china-bridge-relations
ಅಮೆರಿಕ ಮತ್ತು ಚೀನಾ
author img

By

Published : Jan 20, 2020, 11:51 PM IST

ಕಳೆದ ವರ್ಷದ ಮೇ ತಿಂಗಳ ಎರಡನೇ ವಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಬೀಜಿಂಗ್‌ಗೆ ಹೀಗೆ ಎಚ್ಚರಿಕೆ ನೀಡಿದ್ದರು: “ವಾಣಿಜ್ಯ ಒಪ್ಪಂದಗಳಿಗೆ ಚೀನಾ ಈಗ ಸಿದ್ಧವಾಗಲೇಬೇಕು… ಒಂದು ವೇಳೆ ನಾನು ಎರಡನೇ ಅವಧಿಗೆ ಸ್ಪರ್ಧಿಸಿ, ಆಯ್ಕೆಯಾಗಿದ್ದೇ ಆದರೆ ಅದು ಇನ್ನಷ್ಟು ಕಠಿಣವಾಗಲಿದೆ”. ಇದಕ್ಕೆ ಉತ್ತರಿಸಿದ್ದ ಚೀನಾ, ಆಮದು ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಿಂತೆ ಅಮೆರಿಕಕ್ಕೆ ಯಾವುದೇ ವಿನಾಯಿತಿಗಳನ್ನು ನೀಡಲಾರೆ ಎಂದು ಸ್ಪಷ್ಟಪಡಿಸಿತ್ತು. ಜಗತ್ತಿನ ಈ ಎರಡೂ ಪ್ರಮುಖ ಆರ್ಥಿಕ ಶಕ್ತಿಗಳ ನಡುವಿನ ಈ ಬಹಿರಂಗ ತಿಕ್ಕಾಟವು ಜಾಗತಿಕ ಆರ್ಥಿಕ ಹಿಂಜರಿಕೆಯತ್ತ ವಾಲುವಂತೆ ಮಾಡುತ್ತಿದ್ದ ಈ ಸಮಯದಲ್ಲಿ, ವಾಷಿಂಗ್ಟನ್‌ ಮತ್ತು ಬೀಜಿಂಗ್‌ ಕೊನೆಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿವೆ. ಸಂಕ್ರಾಂತಿ ದಿನದಂದು ಮೊದಲ ಹಂತದ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ, ಜಾಗತಿಕ ಆರ್ಥಿಕ ಹಿಂಜರಿಕೆಯನ್ನು ತಿಳಿಗೊಳಿಸುವ ಪರಿಹಾರವನ್ನು ಮೂಡಿಸುವಲ್ಲಿ ಅಮೆರಿಕ ಮತ್ತು ಚೀನಾ ಕೊನೆಗೂ ಯಶಸ್ವಿಯಾಗಿವೆ.

ಅಧ್ಯಕ್ಷ ಟ್ರಂಪ್‌ ಮತ್ತು ಚೀನಾದ ಉಪಪ್ರಧಾನಿ ಲೀ ಸಹಿ ಹಾಕಿರುವ 86 ಪುಟಗಳ ಒಪ್ಪಂದದ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದಿಂದ $ 20, 0000 ಶತಕಕೋಟಿ ಹೆಚ್ಚುವರಿ ಖರೀದಿಯನ್ನು ಬೀಜಿಂಗ್‌ ಮಾಡಲಿದೆ. ಆ ಮೂಲಕ, 2018ರಲ್ಲಿ ಅಮೆರಿಕದೊಂದಿಗೆ ಇದ್ದ $ 42,000 ಶತಕೋಟಿ ವಾಣಿಜ್ಯ ಕೊರತೆಯನ್ನು ಕಡಿತಗೊಳಿಸಿದಂತಾಗಿದೆ. ಚೀನಾ ಕಡೆಯಿಂದ ಬರುವ $ 12,000 ಶತಕೋಟಿ ಮೊತ್ತದ ಸರಕುಗಳ ಮೇಲಿನ ತೆರಿಗೆಯನ್ನು ಶೇಕಡಾ 50ರಷ್ಟು ತಗ್ಗಿಸಲು ಅಮೆರಿಕ ಒಪ್ಪಿಗೆ ಸೂಚಿಸಿದೆಯಲ್ಲದೇ ಹೆಚ್ಚುವರಿ ತೆರಿಗೆಗಳನ್ನು ವಿಧಿಸುವ ಪ್ರಸ್ತಾವನೆಗಳನ್ನು ರದ್ದು ಮಾಡಿದೆ. ಎರಡನೇ ಹಂತದಲ್ಲಿ ಬರುವ ಪ್ರಮುಖ ಹಾಗೂ ಮಹತ್ವದ ವಿಷಯಗಳನ್ನು ಒಳಗೊಂಡಿರುವ ಒಪ್ಪಂದಗಳಿಗೆ ಈ ವರ್ಷಾಂತ್ಯಕ್ಕೆ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರವೇ ಸಹಿ ಬೀಳಬಹುದು ಎಂಬ ವದಂತಿಗಳು ಹರಡಿವೆ. ಎರಡೂ ಪ್ರಮುಖ ಜಾಗತಿಕ ಶಕ್ತಿಗಳ ನಡುವಿನ ಆರ್ಥಿಕ ಹಾಗೂ ರಾಜಕೀಯ ಅನಿವಾರ್ಯತೆಗಳೇ ಪ್ರಸಕ್ತ ಒಪ್ಪಂದಕ್ಕೆ ಕಾರಣವಾಗಿವೆ ಎಂಬುದನ್ನು ಇದು ಸೂಚಿಸುತ್ತದೆ. ಆ ಮಟ್ಟಿಗೆ ಅಭಿವೃದ್ಧಿಶೀಲ ದೇಶಗಳ ಸಂಕಷ್ಟಕರ ಆರ್ಥಿಕತೆಗೆ ಈ ಒಪ್ಪಂದ ನೆಮ್ಮದಿ ತಂದಂತಾಗಿದೆ.

ಸೋವಿಯತ್‌ ಒಕ್ಕೂಟದೊಂದಿಗೆ ಇದ್ದ ಶೀತಲ ಸಮರದ ಹಿನ್ನೆಲೆಯಲ್ಲಿ ಅಮೆರಿಕದ ಅಧಿಕಾರಶಾಹಿ ೧೯೯೨ರಲ್ಲಿ ರೂಪಿಸಿದ್ದ ಭದ್ರತಾ ನೀತಿ ಮಾರ್ಗದರ್ಶಿ ಚೌಕಟ್ಟು ʼಅಭೇದ್ಯ ಅಮೆರಿಕʼ ಪರಿಕಲ್ಪನೆಯನ್ನು ಬಿಂಬಿಸಿತ್ತು. 1978ರಲ್ಲಿ ಆರ್ಥಿಕ ಸುಧಾರಣೆಗಳಿಗೆ ಚೀನಾ ಒತ್ತು ಕೊಟ್ಟಾಗ, ಅಮೆರಿಕದ ನಾಯಕರು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಈ ಬೃಹತ್‌ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಿದ್ದರು. ಅದರ ಫಲವಾಗಿ ಚೀನಾ ಗಣರಾಜ್ಯವು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಾಂತರ ಹೊಂದಿತು. ೧೯೯೦ರಲ್ಲಿ ಜಾಗತಿಕ ಉತ್ಪಾದನೆಯ ಶೇಕಡಾ ೩ರಷ್ಟು ಪಾಲನ್ನು ಮಾತ್ರ ಹೊಂದಿದ್ದ ಚೀನಾ ಇವತ್ತು ಜಗತ್ತಿನ ಒಟ್ಟು ಉತ್ಪಾದನೆಯ ಕಾಲು ಭಾಗವನ್ನು ಹೊಂದುವ ಮೂಲಕ ಜಗತ್ತಿನ ಸರ್ವಶಕ್ತ ದೇಶಕ್ಕೆ ಸ್ಪರ್ಧಿಯಾಗುವ ಮಟ್ಟಿಗೆ ಸೆಡ್ಡು ಹೊಡೆದು ಬೆಳೆದಿದೆ. 1945ರಲ್ಲಿ ಅಮೆರಿಕದೊಂದಿಗಿನ ವ್ಯಾಪಾರದಲ್ಲಿ $ 60 ಕೋಟಿ ವಾಣಿಜ್ಯ ಹೆಚ್ಚುವರಿ ಸಾಧಿಸಿದ್ದ ಚೀನಾ, 2018ರ ವೇಳೆಗೆ $ 420 ಶತಕೋಟಿ ವಾಣಿಜ್ಯ ಹೆಚ್ಚಳವನ್ನು ಸಾಧಿಸಿತು!

ಚೀನಾದ ಈ ಅಗಾಧ ವಾಣಿಜ್ಯ ಅಂತರದಿಂದ ಬೆಚ್ಚಿಬಿದ್ದಿದ್ದ ಅಧ್ಯಕ್ಷ ಟ್ರಂಪ್‌, ʼಇತಿಹಾಸದಲ್ಲಿ ಕಂಡು ಕೇಳರಿಯದ ಲೂಟಿʼ ಎಂದು 2016ರಲ್ಲಿ ಟೀಕಿಸಿದ್ದಲ್ಲದೇ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಚೀನಾ ಅಧ್ಯಕ್ಷರಿಗೆ 100 ದಿನಗಳ ಗಡುವು ವಿಧಿಸಿದ್ದರು. ಆದರೆ, ಯಾವುದೇ ಧನಾತ್ಮಕ ಕ್ರಮಗಳು ಕಂಡು ಬರದ್ದರಿಂದ, ಚೀನಾ ಆಮದಿನ ಮೇಲೆ ಅಮೆರಿಕ ಭಾರೀ ತೆರಿಗೆಗಳನ್ನು ಹೇರಿತು. ಇದಕ್ಕೆ ಪ್ರತಿಯಾಗಿ ಚೀನಾ ಸಹ ಅಮೆರಿಕದ ಆಮದನ್ನು ನಿರ್ಬಂಧಿಸುವ ಮೂಲಕ ಪ್ರತ್ಯುತ್ತರ ನೀಡಿತು. ಚೀನಾದ ಈ ಕ್ರಮದಿಂದಾಗಿ ಅಮೆರಿಕದ ಕೃಷಿ ಕ್ಷೇತ್ರದಲ್ಲಿ ಸಂಕಷ್ಟ ತಲೆದೋರಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು.

ಚುನಾವಣೆ ವರ್ಷದಲ್ಲಿ, ವಾಗ್ದಂಡನೆ ಕತ್ತಿ ನೇತಾಡುವಂತಹ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ನಡೆದ ಹಿನ್ನೆಲೆಯಲ್ಲಿ ಚೀನಾದ ವಿರುದ್ಧ ಮೇಲುಗೈ ಸಾಧಿಸುವಂತಹ ಒಪ್ಪಂದ ಮಾಡಿಕೊಳ್ಳುವುದೊಂದೇ ಟ್ರಂಪ್‌ಗೆ ತಕ್ಷಣದ ರಾಜಕೀಯ ಅವಶ್ಯಕತೆಯಾಗಿತ್ತು. ವಾಸ್ತವ ಅಂಶವೇನೆಂದರೆ, ತೈವಾನ್‌, ಹಾಂಗ್‌ಕಾಂಗ್‌ ಮತ್ತು ದಕ್ಷಿಣ ಚೀನಾ ಕಡಲು ತೀರದಲ್ಲಿ ತಾನು ಎದುರಿಸುತ್ತಿರುವ ರಾಜಕೀಯ ಸಮಸ್ಯೆಗಳ ಹಿನ್ನೆಲೆಯಲ್ಲಿ, ಅಮೆರಿಕದೊಂದಿಗೆ ಪರಸ್ಪರ ಸೌಹಾರ್ದಯುತ ಒಪ್ಪಂದವನ್ನು ತಕ್ಷಣ ಮಾಡಿಕೊಳ್ಳಲು ಒಪ್ಪಿಗೆ ನೀಡುವುದನ್ನು ಬಿಟ್ಟು ಚೀನಾಕ್ಕೆ ಬೇರೆ ದಾರಿಯೇ ಇರಲಿಲ್ಲ.

ಜಗತ್ತಿನಲ್ಲಿ ವ್ಯಾಪಾರಿ ಪದ್ಧತಿಗಳ ಏಕಸ್ವಾಮ್ಯವನ್ನು ತಡೆಗಟ್ಟುವ ಹಾಗೂ ಅಭಿವೃದ್ಧಿ ಹೊಂದಿದ ದೇಶಗಳ ಸ್ಪರ್ಧೆಯನ್ನು ಎದುರಿಸುವ ಮೂಲಕ ವಾಣಿಜ್ಯ ಹಾಗೂ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸ್ಥಿರತೆ ಹೊಂದುವಂತೆ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿದ್ದ ವಿಶ್ವ ವಾಣಿಜ್ಯ ಸಂಸ್ಥೆಯ (ವರ್ಲ್ಡ್‌ ಟ್ರೇಡ್‌ ಆರ್ಗನೈಜೇಶನ್‌ – ಡಬ್ಲ್ಯೂಟಿಒ) ರಜತ ಮಹೋತ್ಸವದ ವರ್ಷ ಇದು. ಮುಕ್ತ ವಾಣಿಜ್ಯ ಮತ್ತು ಎಲ್ಲರಿಗೂ ಅನುಕೂಲ ಎಂಬ ತತ್ವಕ್ಕೆ ದೊಡ್ಡ ದೇಶಗಳು ಸೂಜಿ ಚುಚ್ಚುತ್ತಿರುವ ಈ ಸಮಯದಲ್ಲಿ, ಡಬ್ಲ್ಯೂಟಿಒ ಸಂಸ್ಥೆಯ ಉಪಯುಕ್ತತೆ ಹಾಗೂ ಅಸ್ತಿತ್ವದ ಕುರಿತು ಶಂಕೆಗಳು ಮೂಡುತ್ತಿವೆ. ಅಮೆರಿಕದ ಹಿಂಬಾಗಿಲ ನೀತಿಗಳು ಡಬ್ಲ್ಯೂಟಿಒ ಸಂಸ್ಥೆಯನ್ನು ದುರ್ಬಲಗೊಳಿಸುತ್ತಿದ್ದು, ೧೦ ಶತಕೋಟಿ ಡಾಲರ್‌ ವಾಣಿಜ್ಯ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಅಮೆರಿಕ ಹಾಗೂ ಅಮೆರಿಕ ಮತ್ತು ಯುರೋಪ್‌ ಒಕ್ಕೂಟದ ನಡುವೆ ಸಂಘರ್ಷವನ್ನು ಮೂಡಿಸುತ್ತಿವೆ.

ತನ್ನ ವಾಣಿಜ್ಯ ಸಂಬಂಧಗಳಿಗೆ ಸಂಬಂಧಿಸಿದಂತೆ ಭಾರತಕ್ಕೂ ಸಮಸ್ಯೆಗಳನ್ನು ತರಲು ಟ್ರಂಪ್‌ ಸರಕಾರ ಪ್ರಯತ್ನಿಸಿದೆ. ಆದರೆ, ಪತ್ರಿಕೆಗಳ ಇತ್ತೀಚಿನ ವರದಿಗಳ ಪ್ರಕಾರ, ಉಭಯ ಸಮ್ಮತ ವಾಣಿಜ್ಯ ಒಪ್ಪಂದಗಳಿಗೆ ಸಂಬಂಧಿಸಿದಂತೆ ಅದು ಉದಾರವಾಗಲು ಯತ್ನಿಸುತ್ತಿದೆ. ಹೀಗಿದ್ದರೂ ʼರೈತರ ಆದಾಯವನ್ನು ದ್ವಿಗುಣಗೊಳಿಸುವುದು ಹಾಗೂ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಡೆಯಲಾಗಿದ್ದ ರೂ. ೨೫ ಲಕ್ಷ ಕೋಟಿ ಹಣ ವೆಚ್ಚ ಮಾಡುವ ಕುರಿತು ಕೈಗೊಂಡ ಕ್ರಮಗಳ ವಿವರಗಳನ್ನುʼ ನೀಡುವಂತೆ ಯುರೋಪ್‌ ಒಕ್ಕೂಟವು ಏಳು ತಿಂಗಳುಗಳ ಹಿಂದೆ ಭಾರತ ಸರಕಾರವನ್ನು ಕೇಳಿತ್ತು. ಇನ್ನೊಂದೆಡೆ, ಗೋದಿಯ ಬೆಂಬಲ ಬೆಲೆ ಏರಿಸಿದ್ದೇಕೆ ಹಾಗೂ ಗೋದಿಯನ್ನು ದಾಖಲೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿರುವುದೇಕೆ ಎಂದು ಅಮೆರಿಕ ಸರಕಾರವು ಭಾರತದಿಂದ ವಿವರಣೆಯನ್ನು ಬಯಸಿತ್ತು.

ಪ್ರಮುಖ ಶಕ್ತಿಗಳು ʼಸ್ವಹಿತಾಸಕ್ತಿಗಳಿಗೆ ಮೊದಲ ಆದ್ಯತೆʼಯನ್ನು ನೀಡುತ್ತಿದ್ದು, ಇತರ ದೇಶಗಳೊಂದಿಗೆ ವಾಣಿಜ್ಯ ಯುದ್ಧವನ್ನು ಸಾರಿವೆ. ನ್ಯಾಯಬದ್ಧ ಸಹಾಯಧನಗಳ ಕುರಿತು ಅವು ಪ್ರಶ್ನೆಗಳನ್ನು ಕೇಳುತ್ತಿವೆ. ಅಲ್ಲದೇ, ಭಾರತ ಈಗ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಉಳಿದಿಲ್ಲ ಎಂಬಂತಹ ಹುಚ್ಚು ವಾದಗಳನ್ನು ಮಾಡುತ್ತಿವೆ. ಇಂತಹ ಅಹಂಕಾರಯುಕ್ತ ಹಾಗೂ ಮೇಲುಗೈ ಸಾಧಿಸುವ ಗುಣಗಳು ಕಣ್ಮರೆಯಾದಾಗ ಮಾತ್ರ ಪರಸ್ಪರ ಅಭಿವೃದ್ಧಿ ಎಲ್ಲಾ ದೇಶಗಳಿಗೆ ಸಾಧ್ಯವಾಗಬಲ್ಲುದು.

ಮರುಕಳಿಸಿದ ಅಮೆರಿಕ ಮತ್ತು ಚೀನಾ ಸಂಬಂಧಗಳು

ಕಳೆದ ವರ್ಷದ ಮೇ ತಿಂಗಳ ಎರಡನೇ ವಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಬೀಜಿಂಗ್‌ಗೆ ಹೀಗೆ ಎಚ್ಚರಿಕೆ ನೀಡಿದ್ದರು: ವಾಣಿಜ್ಯ ಒಪ್ಪಂದಗಳಿಗೆ ಚೀನಾ ಈಗ ಸಿದ್ಧವಾಗಲೇಬೇಕು… ಒಂದು ವೇಳೆ ನಾನು ಎರಡನೇ ಅವಧಿಗೆ ಸ್ಪರ್ಧಿಸಿ, ಆಯ್ಕೆಯಾಗಿದ್ದೇ ಆದರೆ ಅದು ಇನ್ನಷ್ಟು ಕಠಿಣವಾಗಲಿದೆ”. ಇದಕ್ಕೆ ಉತ್ತರಿಸಿದ್ದ ಚೀನಾ, ಆಮದು ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದಿಂತೆ ಅಮೆರಿಕಕ್ಕೆ ಯಾವುದೇ ವಿನಾಯಿತಿಗಳನ್ನು ನೀಡಲಾರೆ ಎಂದು ಸ್ಪಷ್ಟಪಡಿಸಿತ್ತು. ಜಗತ್ತಿನ ಈ ಎರಡೂ ಪ್ರಮುಖ ಆರ್ಥಿಕ ಶಕ್ತಿಗಳ ನಡುವಿನ ಈ ಬಹಿರಂಗ ತಿಕ್ಕಾಟವು ಜಾಗತಿಕ ಆರ್ಥಿಕ ಹಿಂಜರಿಕೆಯತ್ತ ವಾಲುವಂತೆ ಮಾಡುತ್ತಿದ್ದ ಈ ಸಮಯದಲ್ಲಿ, ವಾಷಿಂಗ್ಟನ್‌ ಮತ್ತು ಬೀಜಿಂಗ್‌ ಕೊನೆಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿವೆ. ಸಂಕ್ರಾಂತಿ ದಿನದಂದು ಮೊದಲ ಹಂತದ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ, ಜಾಗತಿಕ ಆರ್ಥಿಕ ಹಿಂಜರಿಕೆಯನ್ನು ತಿಳಿಗೊಳಿಸುವ ಪರಿಹಾರವನ್ನು ಮೂಡಿಸುವಲ್ಲಿ ಅಮೆರಿಕ ಮತ್ತು ಚೀನಾ ಕೊನೆಗೂ ಯಶಸ್ವಿಯಾಗಿವೆ.

ಅಧ್ಯಕ್ಷ ಟ್ರಂಪ್‌ ಮತ್ತು ಚೀನಾದ ಉಪಪ್ರಧಾನಿ ಲೀ ಸಹಿ ಹಾಕಿರುವ ೮೬ ಪುಟಗಳ ಒಪ್ಪಂದದ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕದಿಂದ $ ೨೦,೦೦೦ ಶತಕಕೋಟಿ ಹೆಚ್ಚುವರಿ ಖರೀದಿಯನ್ನು ಬೀಜಿಂಗ್‌ ಮಾಡಲಿದೆ. ಆ ಮೂಲಕ, ೨೦೧೮ರಲ್ಲಿ ಅಮೆರಿಕದೊಂದಿಗೆ ಇದ್ದ $ ೪೨,೦೦೦ ಶತಕೋಟಿ ವಾಣಿಜ್ಯ ಕೊರತೆಯನ್ನು ಕಡಿತಗೊಳಿಸಿದಂತಾಗಿದೆ. ಚೀನಾ ಕಡೆಯಿಂದ ಬರುವ $ ೧೨,೦೦೦ ಶತಕೋಟಿ ಮೊತ್ತದ  ಸರಕುಗಳ ಮೇಲಿನ ತೆರಿಗೆಯನ್ನು ಶೇಕಡಾ ೫೦ರಷ್ಟು ತಗ್ಗಿಸಲು ಅಮೆರಿಕ ಒಪ್ಪಿಗೆ ಸೂಚಿಸಿದೆಯಲ್ಲದೇ ಹೆಚ್ಚುವರಿ ತೆರಿಗೆಗಳನ್ನು ವಿಧಿಸುವ ಪ್ರಸ್ತಾವನೆಗಳನ್ನು ರದ್ದು ಮಾಡಿದೆ. ಎರಡನೇ ಹಂತದಲ್ಲಿ ಬರುವ ಪ್ರಮುಖ ಹಾಗೂ ಮಹತ್ವದ ವಿಷಯಗಳನ್ನು ಒಳಗೊಂಡಿರುವ ಒಪ್ಪಂದಗಳಿಗೆ ಈ ವರ್ಷಾಂತ್ಯಕ್ಕೆ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಂತರವೇ ಸಹಿ ಬೀಳಬಹುದು ಎಂಬ ವದಂತಿಗಳು ಹರಡಿವೆ. ಎರಡೂ ಪ್ರಮುಖ ಜಾಗತಿಕ ಶಕ್ತಿಗಳ ನಡುವಿನ ಆರ್ಥಿಕ ಹಾಗೂ ರಾಜಕೀಯ ಅನಿವಾರ್ಯತೆಗಳೇ ಪ್ರಸಕ್ತ ಒಪ್ಪಂದಕ್ಕೆ ಕಾರಣವಾಗಿವೆ ಎಂಬುದನ್ನು ಇದು ಸೂಚಿಸುತ್ತದೆ. ಆ ಮಟ್ಟಿಗೆ ಅಭಿವೃದ್ಧಿಶೀಲ ದೇಶಗಳ ಸಂಕಷ್ಟಕರ ಆರ್ಥಿಕತೆಗೆ ಈ ಒಪ್ಪಂದ ನೆಮ್ಮದಿ ತಂದಂತಾಗಿದೆ.

ಸೋವಿಯತ್‌ ಒಕ್ಕೂಟದೊಂದಿಗೆ ಇದ್ದ ಶೀತಲ ಸಮರದ ಹಿನ್ನೆಲೆಯಲ್ಲಿ ಅಮೆರಿಕದ ಅಧಿಕಾರಶಾಹಿ ೧೯೯೨ರಲ್ಲಿ ರೂಪಿಸಿದ್ದ ಭದ್ರತಾ ನೀತಿ ಮಾರ್ಗದರ್ಶಿ ಚೌಕಟ್ಟು ʼಅಭೇದ್ಯ ಅಮೆರಿಕʼ ಪರಿಕಲ್ಪನೆಯನ್ನು ಬಿಂಬಿಸಿತ್ತು. ೧೯೭೮ರಲ್ಲಿ ಆರ್ಥಿಕ ಸುಧಾರಣೆಗಳಿಗೆ ಚೀನಾ ಒತ್ತು ಕೊಟ್ಟಾಗ, ಅಮೆರಿಕದ ನಾಯಕರು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಈ ಬೃಹತ್‌ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಿದ್ದರು. ಅದರ ಫಲವಾಗಿ ಚೀನಾ ಗಣರಾಜ್ಯವು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಾಂತರ ಹೊಂದಿತು. ೧೯೯೦ರಲ್ಲಿ ಜಾಗತಿಕ ಉತ್ಪಾದನೆಯ ಶೇಕಡಾ ೩ರಷ್ಟು ಪಾಲನ್ನು ಮಾತ್ರ ಹೊಂದಿದ್ದ ಚೀನಾ ಇವತ್ತು ಜಗತ್ತಿನ ಒಟ್ಟು ಉತ್ಪಾದನೆಯ ಕಾಲು ಭಾಗವನ್ನು ಹೊಂದುವ ಮೂಲಕ ಜಗತ್ತಿನ ಸರ್ವಶಕ್ತ ದೇಶಕ್ಕೆ ಸ್ಪರ್ಧಿಯಾಗುವ ಮಟ್ಟಿಗೆ ಸೆಡ್ಡು ಹೊಡೆದು ಬೆಳೆದಿದೆ. ೧೯೮೫ರಲ್ಲಿ ಅಮೆರಿಕದೊಂದಿಗಿನ ವ್ಯಾಪಾರದಲ್ಲಿ $ ೬೦ ಕೋಟಿ ವಾಣಿಜ್ಯ ಹೆಚ್ಚುವರಿ ಸಾಧಿಸಿದ್ದ ಚೀನಾ, ೨೦೧೮ರ ವೇಳೆಗೆ $ ೪೨೦ ಶತಕೋಟಿ ವಾಣಿಜ್ಯ ಹೆಚ್ಚಳವನ್ನು ಸಾಧಿಸಿತು!

ಚೀನಾದ ಈ ಅಗಾಧ ವಾಣಿಜ್ಯ ಅಂತರದಿಂದ ಬೆಚ್ಚಿಬಿದ್ದಿದ್ದ ಅಧ್ಯಕ್ಷ ಟ್ರಂಪ್‌, ʼಇತಿಹಾಸದಲ್ಲಿ ಕಂಡು ಕೇಳರಿಯದ ಲೂಟಿʼ ಎಂದು ೨೦೧೬ರಲ್ಲಿ ಟೀಕಿಸಿದ್ದಲ್ಲದೇ, ಇದಕ್ಕೆ ಪರಿಹಾರ ಕಂಡುಕೊಳ್ಳಲು ಚೀನಾ ಅಧ್ಯಕ್ಷರಿಗೆ ೧೦೦ ದಿನಗಳ ಗಡುವು ವಿಧಿಸಿದ್ದರು. ಆದರೆ, ಯಾವುದೇ ಧನಾತ್ಮಕ ಕ್ರಮಗಳು ಕಂಡು ಬರದ್ದರಿಂದ, ಚೀನಾ ಆಮದಿನ ಮೇಲೆ ಅಮೆರಿಕ ಭಾರೀ ತೆರಿಗೆಗಳನ್ನು ಹೇರಿತು. ಇದಕ್ಕೆ ಪ್ರತಿಯಾಗಿ ಚೀನಾ ಸಹ ಅಮೆರಿಕದ ಆಮದನ್ನು ನಿರ್ಬಂಧಿಸುವ ಮೂಲಕ ಪ್ರತ್ಯುತ್ತರ ನೀಡಿತು. ಚೀನಾದ ಈ ಕ್ರಮದಿಂದಾಗಿ ಅಮೆರಿಕದ ಕೃಷಿ ಕ್ಷೇತ್ರದಲ್ಲಿ ಸಂಕಷ್ಟ ತಲೆದೋರಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು.

ಚುನಾವಣೆ ವರ್ಷದಲ್ಲಿ, ವಾಗ್ದಂಡನೆ ಕತ್ತಿ ನೇತಾಡುವಂತಹ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ನಡೆದ ಹಿನ್ನೆಲೆಯಲ್ಲಿ ಚೀನಾದ ವಿರುದ್ಧ ಮೇಲುಗೈ ಸಾಧಿಸುವಂತಹ ಒಪ್ಪಂದ ಮಾಡಿಕೊಳ್ಳುವುದೊಂದೇ ಟ್ರಂಪ್‌ಗೆ ತಕ್ಷಣದ ರಾಜಕೀಯ ಅವಶ್ಯಕತೆಯಾಗಿತ್ತು. ವಾಸ್ತವ ಅಂಶವೇನೆಂದರೆ, ತೈವಾನ್‌, ಹಾಂಗ್‌ಕಾಂಗ್‌ ಮತ್ತು ದಕ್ಷಿಣ ಚೀನಾ ಕಡಲು ತೀರದಲ್ಲಿ ತಾನು ಎದುರಿಸುತ್ತಿರುವ ರಾಜಕೀಯ ಸಮಸ್ಯೆಗಳ ಹಿನ್ನೆಲೆಯಲ್ಲಿ, ಅಮೆರಿಕದೊಂದಿಗೆ ಪರಸ್ಪರ ಸೌಹಾರ್ದಯುತ ಒಪ್ಪಂದವನ್ನು ತಕ್ಷಣ ಮಾಡಿಕೊಳ್ಳಲು ಒಪ್ಪಿಗೆ ನೀಡುವುದನ್ನು ಬಿಟ್ಟು ಚೀನಾಕ್ಕೆ ಬೇರೆ ದಾರಿಯೇ ಇರಲಿಲ್ಲ.

ಜಗತ್ತಿನಲ್ಲಿ ವ್ಯಾಪಾರಿ ಪದ್ಧತಿಗಳ ಏಕಸ್ವಾಮ್ಯವನ್ನು ತಡೆಗಟ್ಟುವ ಹಾಗೂ ಅಭಿವೃದ್ಧಿ ಹೊಂದಿದ ದೇಶಗಳ ಸ್ಪರ್ಧೆಯನ್ನು ಎದುರಿಸುವ ಮೂಲಕ ವಾಣಿಜ್ಯ ಹಾಗೂ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸ್ಥಿರತೆ ಹೊಂದುವಂತೆ ಮಾಡುವ ಉದ್ದೇಶದಿಂದ ಸ್ಥಾಪಿತವಾಗಿದ್ದ ವಿಶ್ವ ವಾಣಿಜ್ಯ ಸಂಸ್ಥೆಯ (ವರ್ಲ್ಡ್‌ ಟ್ರೇಡ್‌ ಆರ್ಗನೈಜೇಶನ್‌ – ಡಬ್ಲ್ಯೂಟಿಒ) ರಜತ ಮಹೋತ್ಸವದ ವರ್ಷ ಇದು. ಮುಕ್ತ ವಾಣಿಜ್ಯ ಮತ್ತು ಎಲ್ಲರಿಗೂ ಅನುಕೂಲ ಎಂಬ ತತ್ವಕ್ಕೆ ದೊಡ್ಡ ದೇಶಗಳು ಸೂಜಿ ಚುಚ್ಚುತ್ತಿರುವ ಈ ಸಮಯದಲ್ಲಿ, ಡಬ್ಲ್ಯೂಟಿಒ ಸಂಸ್ಥೆಯ ಉಪಯುಕ್ತತೆ ಹಾಗೂ ಅಸ್ತಿತ್ವದ ಕುರಿತು ಶಂಕೆಗಳು ಮೂಡುತ್ತಿವೆ. ಅಮೆರಿಕದ ಹಿಂಬಾಗಿಲ ನೀತಿಗಳು ಡಬ್ಲ್ಯೂಟಿಒ ಸಂಸ್ಥೆಯನ್ನು ದುರ್ಬಲಗೊಳಿಸುತ್ತಿದ್ದು, ೧೦ ಶತಕೋಟಿ ಡಾಲರ್‌ ವಾಣಿಜ್ಯ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಅಮೆರಿಕ ಹಾಗೂ ಅಮೆರಿಕ ಮತ್ತು ಯುರೋಪ್‌ ಒಕ್ಕೂಟದ ನಡುವೆ ಸಂಘರ್ಷವನ್ನು ಮೂಡಿಸುತ್ತಿವೆ.

ತನ್ನ ವಾಣಿಜ್ಯ ಸಂಬಂಧಗಳಿಗೆ ಸಂಬಂಧಿಸಿದಂತೆ ಭಾರತಕ್ಕೂ ಸಮಸ್ಯೆಗಳನ್ನು ತರಲು ಟ್ರಂಪ್‌ ಸರಕಾರ ಪ್ರಯತ್ನಿಸಿದೆ. ಆದರೆ, ಪತ್ರಿಕೆಗಳ ಇತ್ತೀಚಿನ ವರದಿಗಳ ಪ್ರಕಾರ, ಉಭಯ ಸಮ್ಮತ ವಾಣಿಜ್ಯ ಒಪ್ಪಂದಗಳಿಗೆ ಸಂಬಂಧಿಸಿದಂತೆ ಅದು ಉದಾರವಾಗಲು ಯತ್ನಿಸುತ್ತಿದೆ. ಹೀಗಿದ್ದರೂ ʼರೈತರ ಆದಾಯವನ್ನು ದ್ವಿಗುಣಗೊಳಿಸುವುದು ಹಾಗೂ ಗ್ರಾಮೀಣ ಮತ್ತು ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಪಡೆಯಲಾಗಿದ್ದ ರೂ. ೨೫ ಲಕ್ಷ ಕೋಟಿ ಹಣ ವೆಚ್ಚ ಮಾಡುವ ಕುರಿತು ಕೈಗೊಂಡ ಕ್ರಮಗಳ ವಿವರಗಳನ್ನುʼ ನೀಡುವಂತೆ ಯುರೋಪ್‌ ಒಕ್ಕೂಟವು ಏಳು ತಿಂಗಳುಗಳ ಹಿಂದೆ ಭಾರತ ಸರಕಾರವನ್ನು ಕೇಳಿತ್ತು. ಇನ್ನೊಂದೆಡೆ, ಗೋದಿಯ ಬೆಂಬಲ ಬೆಲೆ ಏರಿಸಿದ್ದೇಕೆ ಹಾಗೂ ಗೋದಿಯನ್ನು ದಾಖಲೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿರುವುದೇಕೆ ಎಂದು ಅಮೆರಿಕ ಸರಕಾರವು ಭಾರತದಿಂದ ವಿವರಣೆಯನ್ನು ಬಯಸಿತ್ತು.

ಪ್ರಮುಖ ಶಕ್ತಿಗಳು ʼಸ್ವಹಿತಾಸಕ್ತಿಗಳಿಗೆ ಮೊದಲ ಆದ್ಯತೆʼಯನ್ನು ನೀಡುತ್ತಿದ್ದು, ಇತರ ದೇಶಗಳೊಂದಿಗೆ ವಾಣಿಜ್ಯ ಯುದ್ಧವನ್ನು ಸಾರಿವೆ. ನ್ಯಾಯಬದ್ಧ ಸಹಾಯಧನಗಳ ಕುರಿತು ಅವು ಪ್ರಶ್ನೆಗಳನ್ನು ಕೇಳುತ್ತಿವೆ. ಅಲ್ಲದೇ, ಭಾರತ ಈಗ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಉಳಿದಿಲ್ಲ ಎಂಬಂತಹ ಹುಚ್ಚು ವಾದಗಳನ್ನು ಮಾಡುತ್ತಿವೆ. ಇಂತಹ ಅಹಂಕಾರಯುಕ್ತ ಹಾಗೂ ಮೇಲುಗೈ ಸಾಧಿಸುವ ಗುಣಗಳು ಕಣ್ಮರೆಯಾದಾಗ ಮಾತ್ರ ಪರಸ್ಪರ ಅಭಿವೃದ್ಧಿ ಎಲ್ಲಾ ದೇಶಗಳಿಗೆ ಸಾಧ್ಯವಾಗಬಲ್ಲುದು.

--------------- 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.