ETV Bharat / international

ಅಮೆರಿಕದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿ

ವಿಶ್ವದ ಹಲವು ದೇಶಗಳಲ್ಲಿ ಹರಡುತ್ತಿರುವ ಮಾರಣಾಂತಿಕ ಕೊರೊನಾ ಸೋಂಕಿನಿಂದ ಅಮೆರಿಕದಲ್ಲೂ ಮೊದಲ ಸಾವು ಸಂಭವಿಸಿದೆ.

author img

By

Published : Mar 1, 2020, 4:57 AM IST

Updated : Mar 1, 2020, 5:28 AM IST

coronavirus
ಕೊರೊನಾ ವೈರಸ್​

ವಾಷಿಂಗ್ಟನ್: ವಿಶ್ವದ ಹಲವು ದೇಶಗಳಲ್ಲಿ ಹರಡುತ್ತಿರುವ ಮಾರಣಾಂತಿಕ ಕೊರೊನಾ ಸೋಂಕಿಗೆ ಜನತೆ ಭಯಭೀತರಾಗಿದ್ದು, ಅಮೆರಿಕದಲ್ಲೂ ಮೊದಲ ಬಲಿಯಾಗಿದೆ. ವಾಷಿಂಗ್ಟನ್​ನಲ್ಲಿ ಸೋಂಕಿನಿಂದ ಮಹಿಳೆಯೋರ್ವಳು ಸಾವನ್ನಪ್ಪಿದ್ದಾಳೆ.

ಕಿಂಗ್ ಕೌಂಟಿಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಹಿಳೆ ಸಾವನ್ನಪ್ಪಿರುವುದನ್ನ ದೃಢಪಡಿಸಿದ್ದಾರೆ. ಈಗಾಗಲೇ ಅಮೆರಿಕದಲ್ಲಿ 22 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ವೈರಸ್​ ವಿರುದ್ಧ ಲಸಿಕೆ ಕಂಡುಹಿಡಿಯಲು ಔಷಧಿ ತಯಾರಿಕಾ ಕಂಪನಿಯೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.

ಈಗಾಗಲೇ ಕೊರೊನಾ ವೈರಸ್ ಪ್ರಕರಣಗಳು ಅಮೆರಿಕ, ಸಿಂಗಾಪುರ್, ಇಟಲಿ, ಫ್ರಾನ್ಸ್, ರಷ್ಯಾ, ಸ್ಪೇನ್ ಮತ್ತು ಭಾರತ ಸೇರಿದಂತೆ 45ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿವೆ. ಈ ಮಹಾಮಾರಿಗೆ ಚೀನಾದಲ್ಲಿ ಇಲ್ಲಿಯವರೆಗೆ 2,835ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ವರದಿಯಾಗಿದೆಎಂದು ತಿಳಿದು ಬಂದಿದೆ.

Last Updated : Mar 1, 2020, 5:28 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.