ವಿಶ್ವಸಂಸ್ಥೆ: ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್, ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಹೆನ್ರಿಯೆಟಾ ಫೋರ್ ಅವರ ರಾಜೀನಾಮೆ ತೀವ್ರ ವಿಷಾದದಿಂದ ಒಪ್ಪಿಕೊಂಡಿದ್ದು, ಅಂಗೀಕರಿಸಿದ್ದಾರೆ. ವಿಶ್ವಸಂಸ್ಥೆ ಮಕ್ಕಳ ಏಜೆನ್ಸಿಯ ಮುಖ್ಯಸ್ಥರಾಗಿ ಅವರ ಸ್ಪೂರ್ತಿದಾಯಕ ನಾಯಕತ್ವವನ್ನು ಗುಟೆರೆಸ್ ಹೊಗಳಿದ್ದಾರೆ.
ವಿಶ್ವಸಂಸ್ಥೆ ಉಪ ವಕ್ತಾರ ಫರ್ಹಾನ್ ಹಕ್ ಮಾತನಾಡಿದ್ದು, "ಕುಟುಂಬ ಮತ್ತು ಆರೋಗ್ಯದ ವಿಚಾರಕ್ಕೆ ತನ್ನನ್ನು ತೊಡಗಿಸಿಕೊಳ್ಳುವ ಫೋರ್ ನಿರ್ಧಾರವನ್ನು ಗುಟೆರೆಸ್ ಅವರು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ ಆಕೆಯ ರಾಜೀನಾಮೆಗೆ ಒಪ್ಪಿಗೆ ಸೂಚಿಸಿದ್ದಾರೆ" ಎಂದು ಹೇಳಿದರು.
ಯುಎಸ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್‌ನ ಮುಖ್ಯಸ್ಥರಾಗಿ ಮತ್ತು ಅಮೆರಿಕದ ಸಾರ್ವಜನಿಕ ಆರೋಗ್ಯ ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಫೋರ್, ಜನವರಿ 1, 2018ರಂದು ಯುನಿಸೆಫ್ನಲ್ಲಿ ನಾಯಕತ್ವವನ್ನು ವಹಿಸಿಕೊಂಡರು.
2001-2005ರವರೆಗೆ ಯುಎಸ್ ಮಿಂಟ್ ನಿರ್ದೇಶಕರಾಗಿ, 2005 - 2007ರವರೆಗೆ ಯುಎಸ್‌ನ ರಾಜ್ಯ ಉಪ ಕಾರ್ಯದರ್ಶಿಯಾಗಿ ಮತ್ತು 2007-2009ರಲ್ಲಿ ಯುಎಸ್‌ಐಐಡಿ ನಿರ್ವಾಹಕರಾಗಿ ಆಗಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ಆಡಳಿತದಲ್ಲಿ ಫೋರ್ ಸೇವೆ ಸಲ್ಲಿಸಿದ್ದಾರೆ.