ನ್ಯೂಯಾರ್ಕ್(ಯುಎಸ್ಎ): ನಗರದಲ್ಲಿರುವ ವಿಶ್ವಸಂಸ್ಥೆಯ ಕೇಂದ್ರ ಕಛೇರಿಯು ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದು, ವಾರದ ಕೊನೆ ದಿನಗಳಲ್ಲಿ ಕೇಂದ್ರ ಕಛೇರಿಯನ್ನು ಮುಚ್ಚಲಾಗುತ್ತಿದೆ.
ಹಣದ ಸಮಸ್ಯೆಯಲ್ಲಿರುವ ವಿಶ್ವಸಂಸ್ಥೆಯು ಈ ನಿರ್ಧಾರಕ್ಕೆ ಬಂದಿದ್ದು, ಶನಿವಾರ- ಹಾಗೂ ಭಾನುವಾರ ಕೇಂದ್ರ ಕಛೇರಿಯನ್ನು ತೆರೆಯಲಾಗುವುದಿಲ್ಲ ಎಂದು ವಿಶ್ವಸಂಸ್ಥೆಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಲಾಗಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಬಜೆಟ್ಗೆ ಸದಸ್ಯ ರಾಷ್ಟ್ರಗಳು ನೀಡಬೇಕಾದ ಮೊತ್ತವನ್ನು ಕೆಲ ಸದಸ್ಯ ರಾಷ್ಟ್ರಗಳು ಇನ್ನೂ ಪಾವತಿಸಿಲ್ಲ. ಹೀಗಾಗಿ ಹಣಕಾಸಿನ ಸಮಸ್ಯೆ ಎದುರಾಗಿದ್ದು, 'ನಿಮ್ಮ ದೇಶ ವಿಶ್ವಸಂಸ್ಥೆಯ ಸಾಮಾನ್ಯ ಬಜೆಟ್ಗೆ ಕೊಡುಗೆ ನೀಡಿದೆಯೇ?' ಎಂದು ಟ್ವೀಟ್ನಲ್ಲಿ ಬರೆಯಲಾಗಿದೆ.
-
The UNHQ buildings in NYC will be closed on weekends (Saturday-Sunday) due to the ongoing cash crisis.
— United Nations (@UN) October 18, 2019 " class="align-text-top noRightClick twitterSection" data="
Has your country made its contribution to this year's regular UN budget yet?
See which countries are on the honour roll: https://t.co/vyLe4dEHjb pic.twitter.com/VG3jSXIi4O
">The UNHQ buildings in NYC will be closed on weekends (Saturday-Sunday) due to the ongoing cash crisis.
— United Nations (@UN) October 18, 2019
Has your country made its contribution to this year's regular UN budget yet?
See which countries are on the honour roll: https://t.co/vyLe4dEHjb pic.twitter.com/VG3jSXIi4OThe UNHQ buildings in NYC will be closed on weekends (Saturday-Sunday) due to the ongoing cash crisis.
— United Nations (@UN) October 18, 2019
Has your country made its contribution to this year's regular UN budget yet?
See which countries are on the honour roll: https://t.co/vyLe4dEHjb pic.twitter.com/VG3jSXIi4O
ಇನ್ನು ಈ ವಿಚಾರದಲ್ಲಿ ಭಾರತ ಎಡವಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದಿನ್, ಒಟ್ಟು ಸದಸ್ಯ ರಾಷ್ಟ್ರಗಳಲ್ಲಿ ಕೇವಲ 35 ರಾಷ್ಟ್ರಗಳು ಮಾತ್ರವೇ ಎಲ್ಲಾ ಬಾಕಿ ಮೊತ್ತವನ್ನು ಪಾವತಿಸಿದ್ದು, ಇದರಲ್ಲಿ ಭಾರತವೂ ಸೇರಿದೆ. ಭಾರತವು ವಿಶ್ವಸಂಸ್ಥೆ ವಿಧಿಸುವ ಗಡುವಿಗೂ ಮುನ್ನ ಎಲ್ಲಾ ಬಾಕಿ ಪಾವತಿಸಿದೆ ಎಂದಿದ್ದಾರೆ. ಭಾರತ ಈ ವರ್ಷ 2,32,53,808 ಯುಎಸ್ ಡಾಲರ್ ಮೊತ್ತ ಪಾವತಿಸಿದೆ.