ತಮ್ಮ ದೇಶವು ಅನೇಕ ಅಂತಾರಾಷ್ಟ್ರೀಯ ಸಮಾವೇಶಗಳಿಗೆ ಬದ್ಧವಾಗಿದೆ ಎಂದು ಯುನೆಸ್ಕೋದ ಮಹಾನಿರ್ದೇಶಕ ಆಡ್ರೆ ಅಜೌಲೆ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೆನಪಿಸಿದ್ದಾರೆ.
ಇರಾನಿನ ಹತ್ಯೆಗೆ ಟೆಹರಾನ್ ಪ್ರತೀಕಾರ ತೀರಿಸಬೇಕಾದರೆ ಇರಾನ್‌ನ 52 ತಾಣಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಶನಿವಾರ ನೀಡಿದ ಎಚ್ಚರಿಕೆಗೆ ಪ್ರತಿಕ್ರಿಯೆಯಾಗಿ ಯುಎನ್ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆಯ ಮುಖ್ಯಸ್ಥರಿಂದ ಈ ವಾರ್ನಿಂಗ್ ರವಾನೆ ಆಗಿದೆ.
ಶುಕ್ರವಾರ ಯುಎಸ್ ವೈಮಾನಿಕ ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಕಮಾಂಡರ್ ಜನರಲ್ ಕಾಸೆಮ್ ಸೊಲೈಮಾನಿ ಹತ್ಯೆ ಮಾಡಲಾಗಿತ್ತು.
ಮಧ್ಯಪ್ರಾಚ್ಯದ ಪರಿಸ್ಥಿತಿ ಮತ್ತು ಅದರ ಪರಂಪರೆಯ ವಿರುದ್ಧದ ಬೆದರಿಕೆಗಳನ್ನು ಪರಿಹರಿಸಲು ಅಜೌಲೆ ಸೋಮವಾರ ಯುನೆಸ್ಕೋದ ಇರಾನಿನ ರಾಯಭಾರಿ ಅಹ್ಮದ್ ಜಲಾಲಿಯನ್ನು ಭೇಟಿಯಾದರು ಎಂದು ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಯುಎಸ್ ಮತ್ತು ಇರಾನ್ ಎರಡೂ ರಾಷ್ಟ್ರಗಳು ಸಂಘರ್ಷ ಮತ್ತು ವಿಶ್ವ ಪರಂಪರೆಯ ಸಂದರ್ಭದಲ್ಲಿ ಸಾಂಸ್ಕೃತಿಕ ಆಸ್ತಿಯನ್ನು ರಕ್ಷಿಸಲು ಸಮಾವೇಶಗಳಿಗೆ ಸಹಿ ಹಾಕಿದ್ದವು ಎಂದು ಯುನೆಸ್ಕೋ ಮುಖ್ಯಸ್ಥರು ನೆನಪಿಸಿಕೊಂಡಿದ್ದಾರೆ. ಇದರರ್ಥ ಅವರು ಸಹಿ ಹಾಕಿದ ಇತರ ದೇಶಗಳ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ಹಾನಿ ಮಾಡಲು ಹಾಗೂ "ಉದ್ದೇಶಪೂರ್ವಕವಾಗಿ" ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.
2017 ರಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಯುಎನ್ ಸೆಕ್ಯುರಿಟಿ ಕೌನ್ಸಿಲ್ ರೆಸಲ್ಯೂಷನ್ 2347, ಸಾಂಸ್ಕೃತಿಕ ಪರಂಪರೆಯನ್ನು ನಾಶಮಾಡುವ ಕೃತ್ಯಗಳನ್ನು ಖಂಡಿಸುತ್ತದೆ ಎಂದು ಈ ವೇಳೆ ಅವರು ಗಮನಸೆಳೆದಿದ್ದಾರೆ.