ETV Bharat / international

ವಿಶ್ವಸಂಸ್ಥೆ, ವಿಶ್ವಬ್ಯಾಂಕ್, IMF​​ನಂತಹ ಸಂಸ್ಥೆಗಳ ತುರ್ತು ಸುಧಾರಣೆಯ ಅಗತ್ಯವಿದೆ: ವಿತ್ತ ಸಚಿವೆ ಸೀತಾರಾಮನ್ - World Bank

ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಂತಹ ಸಂಸ್ಥೆಗಳು ತುರ್ತಾಗಿ ಸುಧಾರಣೆಯಾಗಬೇಕು. ಏಕೆಂದರೆ ಅವರು ದಶಕಗಳವರೆಗೆ ಗಮನಿಸದೇ ಇರುವ ದೇಶಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಮೊಸಾವರ್-ರಹ್ಮಾನಿ ಸೆಂಟರ್ ಫಾರ್ ಬ್ಯುಸಿನೆಸ್ ಅಂಡ್ ಗವರ್ನಮೆಂಟ್ ಆಯೋಜಿಸಿದ್ದ ಭಾಷಣದಲ್ಲಿ ಹಾರ್ವರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಲಾರೆನ್ಸ್ ಸಮ್ಮರ್ಸ್ ಜೊತೆ ಸಂವಾದದಲ್ಲಿ ವಿತ್ತ ಸಚಿವೆ ಸೀತಾರಾಮನ್ ಈ ಹೇಳಿಕೆ ನೀಡಿದ್ದಾರೆ.

Finance Minister Sitharaman
Finance Minister Sitharaman
author img

By

Published : Oct 13, 2021, 4:36 PM IST

ಬೋಸ್ಟನ್: ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯಂತಹ ಸಂಸ್ಥೆಗಳು ತುರ್ತಾಗಿ ಸುಧಾರಣೆಯಾಗಬೇಕು. ಏಕೆಂದರೆ ಅವರು ದಶಕಗಳವರೆಗೆ ಗಮನಿಸದೇ ಇರುವ ದೇಶಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಎಲ್ಲಾ ಸಂಸ್ಥೆಗಳು ತಮ್ಮನ್ನು ತಾವು ಸುಧಾರಿಸಿಕೊಳ್ಳುವುದನ್ನು ನೋಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊಸಾವರ್-ರಹ್ಮಾನಿ ಸೆಂಟರ್ ಫಾರ್ ಬ್ಯುಸಿನೆಸ್ ಅಂಡ್ ಗವರ್ನಮೆಂಟ್ ಆಯೋಜಿಸಿದ್ದ ಭಾಷಣದಲ್ಲಿ ಹಾರ್ವರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಲಾರೆನ್ಸ್ ಸಮ್ಮರ್ಸ್ ಜೊತೆ ಸಂವಾದದಲ್ಲಿ ಪಾಲ್ಗೊಂಡ ವಿತ್ತ ಸಚಿವೆ ಸೀತಾರಾಮನ್ ಈ ಮಹತ್ವದ ಹೇಳಿಕೆ ನೀಡಿದ್ದಾರೆ.

ಹಿಂದುಳಿದ ರಾಷ್ಟ್ರಗಳ ಬಗ್ಗೆ ವಿಶ್ವಸಂಸ್ಥೆ ಗಮನಹರಿಸಬೇಕಿದೆ

ವ್ಯಾಪಾರ, ಭದ್ರತೆ, ವಿತ್ತೀಯ ಚೌಕಟ್ಟು ಮತ್ತು ಧನಸಹಾಯ ಅಭಿವೃದ್ಧಿಯ ವಿಷಯವಾಗಿ ದಶಕಗಳವರೆಗೆ ಗಮನಿಸದೇ ಉಳಿದಿರುವ ದೇಶಗಳ ಬಗ್ಗೆ ಅವರಲ್ಲಿ ಹೆಚ್ಚಿನವರು ಈಗ ಮಾತನಾಡುವುದಿಲ್ಲ ಎಂದು ಹೇಳಿದರು. ಈ ಎಲ್ಲ ಸಂಸ್ಥೆಗಳು ಹೆಚ್ಚು ಪಾರದರ್ಶಕವಾಗಿರಬೇಕು. ಸಾಕಷ್ಟು ಪ್ರಾತಿನಿಧ್ಯವನ್ನು ಪಡೆಯದ ದೇಶಗಳನ್ನು ಪ್ರತಿನಿಧಿಸಬೇಕು ಮತ್ತು ಆ ಬಗ್ಗೆ ಮಾತನಾಡಬೇಕಾದ ಅವಶ್ಯಕತೆಯಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದಾರೆ.

ಅದು ತಕ್ಷಣ ಸಂಭವಿಸಬೇಕಾದ ಸಂಗತಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಈ ಸಂಸ್ಥೆಗಳು ಹೆಚ್ಚು ಪ್ರಾತಿನಿಧಿಕವಾದಾಗ, ಸಂಪನ್ಮೂಲಗಳ ಹೆಚ್ಚು ನ್ಯಾಯಯುತ ವಿತರಣೆ, ಬೆಳವಣಿಗೆಗೆ ಸಮಾನ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ಇರುತ್ತದೆ ಎಂದು ಇದೇ ವೇಳೆ ಅವರು ಪ್ರಸ್ತಾಪಿಸಿದ್ದಾರೆ.

ಪೆಸಿಫಿಕ್​ ದ್ವೀಪಗಳ ಅನೇಕ ರಾಷ್ಟ್ರಗಳಿಗೆ ಅಭಿವೃದ್ಧಿ ತಲುಪಿಲ್ಲ

ಅಭಿವೃದ್ಧಿ ಇನ್ನೂ ಆಫ್ರಿಕಾದ ಹಲವು ಭಾಗಗಳನ್ನು ತಲುಪಿಲ್ಲ. ಸಣ್ಣ ಪೆಸಿಫಿಕ್ ದ್ವೀಪಗಳ ಅನೇಕ ಭಾಗಗಳನ್ನು ತಲುಪಿಲ್ಲ. ಆ ದೇಶಗಳ ಅನೇಕ ಭಾಗಗಳು, ದೇಶಗಳಲ್ಲಿಯೂ ಸಹ, ವಿಭಿನ್ನ ಅಭಿವೃದ್ಧಿ ಇದೆ. ಹಾಗಾಗಿ ಈ ಸಂಸ್ಥೆಗಳು ಈ ಸುಧಾರಣಾ ಕಾರ್ಯಸೂಚಿಯನ್ನು ಕೈಗೊಂಡಿದ್ದರೆ ಏನಾಗುತ್ತಿತ್ತು ಎಂದು ನಾನು ಭಾವಿಸುತ್ತೇನೆ ಎಂದರು.

ಅಮೆರಿಕ ಪ್ರವಾಸದಲ್ಲಿರುವ ಸೀತಾರಾಮನ್​

ಸೀತಾರಾಮನ್ ಅವರು ವಾಷಿಂಗನ್‌ನಲ್ಲಿ ವಿಶ್ವಬ್ಯಾಂಕ್ ಮತ್ತು ಐಎಂಎಫ್‌ನ ವಾರ್ಷಿಕ ಸಭೆ ಹಾಗೂ ಜಿ 20 ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಸಭೆಯಲ್ಲಿ ಭಾಗವಹಿಸಲು ಒಂದು ವಾರದ ಪ್ರವಾಸಕ್ಕಾಗಿ ಸೋಮವಾರ ಅಮೆರಿಕಕ್ಕೆ ಆಗಮಿಸಿದ್ದಾರೆ. ಅಮೆರಿಕಕ್ಕೆ ಅಧಿಕೃತ ಭೇಟಿಯ ಸಮಯದಲ್ಲಿ, ಸೀತಾರಾಮನ್ ಯುಎಸ್ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.