ವಿಶ್ವಸಂಸ್ಥೆ : ವಿಶ್ವಾಸಾರ್ಹ,ನಿಖರವಾದ ಮಾಹಿತಿಯ ಪ್ರಮಾಣ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ ಕೋವಿಡ್ -19 ಕುರಿತ ತಪ್ಪು ಮಾಹಿತಿಯನ್ನು ಎದುರಿಸಲು ಯುಎನ್ 'ವೆರಿಫೈಡ್' ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ.
ಈ ಬಗ್ಗೆ ಮಾತನಾಡಿದ ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಸುಳ್ಳು. ಭಯ ಹುಟ್ಟಿಸುವ ಮತ್ತು ದ್ವೇಷ ಸಾಧಿಸುವ ಮಾಹಿತಿಗಳನ್ನು ಪಸರಿಸುವವರಿಗೆ ನಾವು ಅವಕಾಶ ನೀಡಲು ಸಾಧ್ಯವಿಲ್ಲ. ಸುಳ್ಳು ಮಾಹಿತಿಯನ್ನು ಆನ್ಲೈನ್ ಮೆಸೇಜಿಂಗ್, ಅಪ್ಲಿಕೇಶನ್ಗಳ ಮೂಲಕ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸುಳ್ಳು ಮಾಹಿತಿಗಳನ್ನು ಪಸರಿಸುವವರು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಅದಕ್ಕೆ ಕೌಂಟರ್ ಕೊಡಲು ವಿಜ್ಞಾನಿಗಳು ಮತ್ತು ವಿಶ್ವಸಂಸ್ಥೆ ಜನರಿಗೆ ನಿಖರ ಮಾಹಿತಿಗಳನ್ನು ತಲುಪಿಸಲಿದೆ ಎಂದಿದ್ದಾರೆ.
ಯುಎನ್ ಡಿಪಾರ್ಟ್ಮೆಂಟ್ ಫಾರ್ ಗ್ಲೋಬಲ್ ಕಮ್ಯುನಿಕೇಷನ್ಸ್ (ಡಿಜಿಸಿ) ನೇತೃತ್ವದ ವೆರಿಫೈಡ್, ವಿಜ್ಞಾನ, ಒಗ್ಗಟ್ಟು ಮತ್ತು ಪರಿಹಾರಗಳು ಎಂಬ ಮೂರು ವಿಷಯಗಳಲ್ಲಿ ಜನರಿಗೆ ಮಾಹಿತಿಯನ್ನು ಒದಗಿಸಲಿದೆ. ಇದು ಹವಾಮಾನ ಬಿಕ್ಕಟ್ಟನ್ನು ನಿಭಾಯಿಸುವುದು, ಬಡತನ, ಅಸಮಾನತೆ ಮತ್ತು ಹಸಿವಿನ ಮೂಲ ಕಾರಣಗಳನ್ನು ಪರಿಹರಿಸಲು ಉತ್ತೇಜಿಸುತ್ತದೆ ಎಂದು ವಿಶ್ವಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.