ETV Bharat / international

ವಿಶ್ವಸಂಸ್ಥೆಯಿಂದ ಭಾರತಕ್ಕೆ 10,000 ಆಮ್ಲಜನಕ ಸಾಂದ್ರಕ, 10 ಮಿಲಿಯನ್‌ ಮಾಸ್ಕ್‌ ಪೂರೈಕೆ

ವಿಶ್ವಸಂಸ್ಥೆಯ ಹಲವು ಸಂಸ್ಥೆಗಳು ಸುಮಾರು 10,000 ಆಮ್ಲಜನಕ ಸಾಂದ್ರಕಗಳನ್ನು ಮತ್ತು ಸುಮಾರು 10 ದಶಲಕ್ಷ ವೈದ್ಯಕೀಯ ಮಾಸ್ಕ್​ಗಳನ್ನು ಭಾರತಕ್ಕೆ ತಲುಪಿಸಿವೆ. ಈ ಬಗ್ಗೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ವಕ್ತಾರ ಸ್ಟೀಫನ್ ಡುಜಾರಿಕ್ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

UN agencies
ಭಾರತಕ್ಕೆ ಯುಎನ್​ ಬೆಂಬಲ
author img

By

Published : May 7, 2021, 12:12 PM IST

ಯುನೈಟೆಡ್​ ನೇಷನ್ಸ್​: ಭಾರತದಲ್ಲಿ ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಹಲವು ಸಂಸ್ಥೆಗಳು ಸುಮಾರು 10,000 ಆಮ್ಲಜನಕ ಸಾಂದ್ರಕಗಳು ಮತ್ತು ಸುಮಾರು 10 ದಶಲಕ್ಷ ವೈದ್ಯಕೀಯ ಮಾಸ್ಕ್​ಗಳನ್ನು ಭಾರತಕ್ಕೆ ತಲುಪಿಸಿವೆ ಎಂದು ಯುಎನ್ ವಕ್ತಾರರು ತಿಳಿಸಿದ್ದಾರೆ.

ಯುನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಯುಎನ್ ಜನಸಂಖ್ಯಾ ನಿಧಿ (ಯುಎನ್‌ಎಫ್‌ಪಿಎ) ಸುಮಾರು 10,000 ಆಮ್ಲಜನಕ ಸಾಂದ್ರಕಗಳು, ಸುಮಾರು 10 ದಶಲಕ್ಷ ವೈದ್ಯಕೀಯ ಮಾಸ್ಕ್​ಗಳು ಮತ್ತು 1.5 ದಶಲಕ್ಷಕ್ಕೂ ಹೆಚ್ಚು ಫೇಸ್​ ಶೀಲ್ಡ್​, ವೆಂಟಿಲೇಟರ್, ಆಮ್ಲಜನಕವನ್ನು ಉತ್ಪಾದಿಸುವ ಸ್ಥಾವರ, ಕೋಲ್ಡ್ ಚೈನ್ ಉಪಕರಣಗಳನ್ನು ಸಹ ರವಾನಿಸಿದೆ" ಎಂದು ಹೇಳಿದ್ದಾರೆ.

"ನಮ್ಮ ತಂಡವು ವಿಮಾನ ನಿಲ್ದಾಣದ ಥರ್ಮಲ್ ಸ್ಕ್ಯಾನರ್‌, ಟೆಸ್ಟಿಂಗ್​ ಕಿಟ್​ಗಳನ್ನು ಕಳುಹಿಸಿಕೊಟ್ಟಿದೆ. ತಾತ್ಕಾಲಿಕ ಆರೋಗ್ಯ ಸೌಲಭ್ಯಗಳಿಗಾಗಿ ಡಬ್ಲ್ಯುಎಚ್‌ಒ ಟೆಂಟ್ ಮತ್ತು ಬೆಡ್​ಗಳನ್ನು ಕೂಡಾ ಒದಗಿಸುತ್ತಿದೆ. ಸಾಂಕ್ರಾಮಿಕ ರೋಗವನ್ನು ನಿವಾರಿಸಲು ಸಂಸ್ಥೆ ಸಾವಿರಾರು ಸಾರ್ವಜನಿಕ ಆರೋಗ್ಯ ತಜ್ಞರನ್ನು ನಿಯೋಜಿಸಿದೆ" ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಯುನಿಸೆಫ್ ಮತ್ತು ಯುಎನ್ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಸಹ ಭಾರತದಾದ್ಯಂತ 175,000 ಕ್ಕೂ ಹೆಚ್ಚು ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.