ವಾಷಿಂಗ್ಟನ್: ಪೂರ್ವ ಉಕ್ರೇನ್ ಭಾಗದ ವಿಮಾನ ನಿಲ್ದಾಣಗಳನ್ನು ಉಕ್ರೇನ್ ಸರ್ಕಾರ ಬಂದ್ ಮಾಡಿದೆ. ಮಧ್ಯರಾತ್ರಿಯಿಂದ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ನಾಗರಿಕ ವಿಮಾನಗಳ ಹಾರಾಟಕ್ಕೆ ಅವಕಾಶ ನಿರ್ಬಂಧಿಸಲಾಗಿದೆ.
ರಷ್ಯಾದಿಂದ ಸಂಭಾವ್ಯ ವಾಯುದಾಳಿಯ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ದೇಶದ ಪೂರ್ವಭಾಗದಲ್ಲಿರುವ ವಾಯುವಲಯವನ್ನು 'ಅಪಾಯ ಪ್ರದೇಶ' ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ರಷ್ಯಾ ವಿಮಾನಯಾನ ಇಲಾಖೆ ಈ ವಾಯುಪ್ರದೇಶವನ್ನು ತನ್ನ ಸುಪರ್ದಿಗೆ ಪಡೆಯುವ ಸಾಧ್ಯತೆ ದಟ್ಟವಾಗಿದ್ದು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗಿದೆ.
ಈಗಾಗಲೇ ರಷ್ಯಾ ತನ್ನ ಆಕ್ರಮಣ ನೀತಿಯಿಂದ ಹಿಂದೆ ಸರಿಯುವಂತೆ ವಿಶ್ವಸಂಸ್ಥೆ ಪದೇ ಪದೇ ಮನವಿ ಮಾಡುತ್ತಿದೆ. ಇನ್ನೊಂದೆಡೆ, ಅಮೆರಿಕ ಸೇರಿದಂತೆ ಕೆಲವು ದೇಶಗಳು ರಷ್ಯಾಗೆ ಹಲವು ರೀತಿಯಲ್ಲಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದು ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದೆ.