ETV Bharat / international

ಬೈಡನ್​​​​​​​​​​ ಆಡಳಿತದಲ್ಲಿ ಮತ್ತೆ ಮಿಂಚುತ್ತಿದ್ದಾರೆ ಭಾರತೀಯರು:​​ ಕೋವಿಡ್ ಟಾಸ್ಕ್ ಫೋರ್ಸ್​​​ಗೆ ಇಬ್ಬರು ವೈದ್ಯರು !!

author img

By

Published : Nov 10, 2020, 7:14 AM IST

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪಣ ತೊಟ್ಟಿದ್ದು ಅದಕ್ಕಾಗಿ ಟಾಸ್ಕ್ ಫೋರ್ಸ್‌ ವೊಂದನ್ನು ರಚಿಸಿದ್ದಾರೆ. ವಿಶೇಷ ಅಂದ್ರೆ ಈ ಸಲಹಾ ಸಮಿತಿಯಲ್ಲಿ ಇಬ್ಬರು ಭಾರತೀಯ - ಅಮೆರಿಕನ್ ಶಸ್ತ್ರಚಿಕಿತ್ಸಕರಾದ ಡಾ.ವಿವೇಕ್ ಮೂರ್ತಿ ಮತ್ತು ಡಾ.ಅತುಲ್ ಗವಾಂಡೆ ಇದ್ದಾರೆ.

Biden's Covid task force
ಕೊರೊನಾ ನಿಯಂತ್ರಣಕ್ಕೆ ಯುಎಸ್​​ ಕೋವಿಡ್ ಟಾಸ್ಕ್ ಫೋರ್ಸ್

ವಾಷಿಂಗ್​ಟನ್​​: ಅಮೆರಿಕದಲ್ಲಿ ಕೊರೊನಾ ಹತೋಟಿಗೆ ತರುವಲ್ಲಿ ನೂತನ ಚುನಾಯಿತ ಅಧ್ಯಕ್ಷ ಜೋ ಬೈಡನ್​, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಇತರ ಕೋವಿಡ್​ ನಿವಾರಣಾ ಸಿಬ್ಬಂದಿಗೆ ಅಗತ್ಯ ಸಲಹೆಗಳನ್ನು ನೀಡುವ ಸಲುವಾಗಿ ಮುಂಚೂಣಿ ಸಾರ್ವಜನಿಕ ಆರೋಗ್ಯ ತಂಡವನ್ನು ಒಳಗೊಂಡ ಕೋವಿಡ್​-19 ಟಾಸ್ಕ್​ಫೋರ್ಸ್​​ ಸ್ಥಾಪಿಸಲಾಗಿದೆ.

ಈ ಟಾಸ್ಕ್​ಫೋರ್ಸ್​​ ಅನ್ನು ಭಾರತೀಯ ಮೂಲದ ಮಾಜಿ ಸರ್ಜನ್ ಜನರಲ್ ವಿವೇಕ್ ಮೂರ್ತಿ ಮತ್ತು ಸಹ ಮುಖ್ಯಸ್ಥರಾದ ಡಾ. ಡೇವಿಡ್ ಕೆಸ್ಲರ್ ಮತ್ತು ಡಾ. ಮಾರ್ಸೆಲ್ಲಾ ನುನೆಜ್ - ಸ್ಮಿತ್ ಮುನ್ನಡೆಸಲಿದ್ದಾರೆ. ಮೂಲತಃ ಕರ್ನಾಟಕದವರಾದ ಡಾ.ವಿವೇಕ್ ಮೂರ್ತಿ ಅವರು 2014 - 2017ರವರೆಗೆ ಅಮೆರಿಕದ 19 ನೇ ಸರ್ಜನ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರು ಜನಸಂಖ್ಯಾ ನಿಯಂತ್ರಣ ಎಬೋಲಾ ಮತ್ತು ಜಿಕಾ ವೈರಸ್​ನಿಂದ ರಾಷ್ಟ್ರವನ್ನು ರಕ್ಷಿಸುವುದು, ಚಂಡಮಾರುತಗಳಂತಹ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಜನರನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಟಾಸ್ಕ್​ಫೋರ್ಸ್​​ನಲ್ಲಿರುವ ಮತ್ತೊಬ್ಬ ಭಾರತೀಯರಾದ ಶಸ್ತ್ರಚಿಕಿತ್ಸಕ ಮತ್ತು ಪ್ರಶಸ್ತಿ ವಿಜೇತ ಲೇಖಕ ಡಾ.ಗವಾಂಡೆ ಮೂಲತಃ ಮಹಾರಾಷ್ಟ್ರದವರಾಗಿದ್ದಾರೆ. ಈ ಹಿಂದೆ ಕ್ಲಿಂಟನ್ ಆಡಳಿತದಲ್ಲಿ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯಲ್ಲಿ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ.

ಅಮೆರಿಕ ಕೋವಿಡ್​-19 ಟಾಸ್ಕ್​ಫೋರ್ಸ್ ನುರಿತ ಮತ್ತು ಅನುಭವಿ ವೈದ್ಯರು ಮತ್ತು ವಿಜ್ಞಾನಿಗಳ ಕೂಡಿದ ತಂಡವಾಗಿದೆ. ಈ ಟಾಸ್ಕ್​​ಫೋರ್ಸ್​ನ ಸದಸ್ಯರು ಹಿಂದಿನ ಆಡಳಿತಾವಧಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ರಾಷ್ಟ್ರವ್ಯಾಪಿ ಮತ್ತು ವಿಶ್ವಾದ್ಯಂತ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟುಗಳ ನಿಯಂತ್ರಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮತ್ತು ಮುನ್ನಡೆಸಿದ ಅನುಭವವನ್ನು ಹೊಂದಿದ್ದಾರೆ.

"ನಮ್ಮ ಟಾಸ್ಕ್​ಫೋರ್ಸ್ ತಂಡವು ಬೈಡನ್-ಹ್ಯಾರಿಸ್ ಕೋವಿಡ್ -19 ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಹಾಯವಾಗುವಂತೆ ನಾನು ವಿಶೇಷ ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡ ಕೋವಿಡ್ -19 ಪರಿವರ್ತನಾ ಸಲಹಾ ಮಂಡಳಿಗೆ ಹೆಸರಿಸಿದ್ದೇನೆ" ಎಂದು ಡೆಲಾವೇರ್ ನ ಸುದ್ದಿಗೋಷ್ಠಿಯಲ್ಲಿ ಯುಎಸ್​ ಅಧ್ಯಕ್ಷ ಬೈಡನ್ ಹೇಳಿದ್ದಾರೆ. ಜನವರಿ 20, 2021 ರಂದು ಕಮಲಾ ಹ್ಯಾರಿಸ್​ ಮತ್ತು ನಾನು ಪ್ರಮಾಣವಚನ ಸ್ವೀಕರಿಸಿದ ಕೂಡಲೇ ನಾವು ಜಾರಿಗೆ ತರಬಹುದಾದ ಪರಿವರ್ತನೆಗಳ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ನಾವು ಹೊಂದಿರುವ ಮಹತ್ವದ ದೃಷ್ಟಿಕೋನವನ್ನು ಜಾರಿಗೊಳಿಸಲು ನೀಲನಕ್ಷೆ ತಯಾರಿಸಿದ್ದು , ನಾವು ಈ ಟಾಸ್ಕ್​ಫೋರ್ಸ್​ಗೆ ಇತರ ಸದಸ್ಯರನ್ನು ಸೇರಿಸಲು ಪ್ರಯತ್ನಿಸುತ್ತೇವೆ ಎಂದು ಬೈಡನ್​ ಹೇಳಿದ್ದಾರೆ.

ಡಾ. ಬೆತ್ ಕ್ಯಾಮರೂನ್ ಮತ್ತು ಡಾ. ರೆಬೆಕಾ ಕಾಟ್ಜ್ ಅವರು ಈ ಟಾಸ್ಕ್​ಫೋರ್ಸ್​​ನ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಗವಾಂಡೆ ಯವರ ಜೊತೆ ಮಂಡಳಿಯ ಇತರ ಸದಸ್ಯರಾದ ಡಾ. ಲೂಸಿಯಾನಾ ಬೋರಿಯೊ, ಡಾ. ರಿಕ್ ಬ್ರೈಟ್, ಡಾ. ಎಜಿಕಿಯೆಲ್ ಇಮ್ಯಾನ್ಯುಯೆಲ್, ಡಾ. ಸೆಲೀನ್ ಗೌಂಡರ್, ಡಾ. ಜೂಲಿ ಮೊರಿಟಾ, ಡಾ. ಮೈಕಲ್​.ಡಾ. ಎರಿಕ್​ ಗೂಸ್​ಬೈ ಕಾರ್ಯನಿರ್ವಹಿಸಲಿದ್ದಾರೆ.

ಟಾಸ್ಕ್​ಫೋರ್ಸ್ ತಂಡವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಚುನಾಯಿತ "ಅಧ್ಯಕ್ಷ ಬೈಡನ್​ ಪ್ರತಿ ವಾರ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಕೋವಿಡ್​ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರುವುದಾಗಿ ವಾಗ್ದಾನ ಮಾಡಿದ್ದಾರೆ. ರೋಗದ ಹರಡುವಿಕೆಯನ್ನು ತಡೆಯುವ ಮೂಲಕ, ಅಗತ್ಯವಿರುವವರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ, ಮತ್ತು ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ಸೇವೆಗಳನ್ನು ಹೆಚ್ಚಿಸುವುದು ಅವರ ಉದ್ದೇಶ.

ಟಾಸ್ಕ್​ಫೋರ್ಸ್​​ನ ಪ್ರಮುಖ ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ವೈರಸ್ ನಿಯಂತ್ರಣಕ್ಕೆ ಬರಲು ಅಗತ್ಯವಾದ ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕ ಕ್ರಮಗಳನ್ನು ಯೋಜಿಸಲು, ಕಾರ್ಮಿಕ ಕುಟುಂಬಗಳಿಗೆ ತಕ್ಷಣದ ಪರಿಹಾರವನ್ನು ನೀಡಲು, ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ನಿಂದನೆ ಮತ್ತು ಜನಾಂಗೀಯ ಅಸಮಾನತೆಗಳನ್ನು ತಡೆಯಲು ಮತ್ತು ಕೊರೊನಾ ಬಿಕ್ಕಟ್ಟಿನಿಂದ ಬಂದ್​ ಆಗಿರುವ ದೇಶದ ಶಾಲೆಗಳು ಮತ್ತು ವ್ಯವಹಾರ ವಹಿವಾಟುಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಮತ್ತೆ ತೆರೆಯಲು ಶ್ರಮಿಸಲಿದ್ದಾರೆ.

ಇನ್ನು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ನೀಡಿದ ಮಾಹಿತಿ ಪ್ರಕಾರ, ಯುಎಸ್​​ನ ಕನಿಷ್ಠ 40 ರಾಜ್ಯಗಳಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿವೆ ಎಂದು ಯುಎಸ್ ವರದಿ ಮಾಡಿದೆ, ಒಟ್ಟು 9.3 ದಶಲಕ್ಷಕ್ಕೂ ಹೆಚ್ಚಿನ ಜನರಲ್ಲಿ ಸೋಂಕು ಪತ್ತೆಯಾಗಿದೆ ಮತ್ತು 236,000 ಕ್ಕೂ ಹೆಚ್ಚು ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.