ವಾಷಿಂಗ್ಟನ್ (ಯುಎಸ್): ಮೈಕ್ರೋ - ಬ್ಲಾಗಿಂಗ್ ಸೈಟ್ ಟ್ವಿಟರ್ ತನ್ನ ಬಳಕೆದಾರರಿಗೆ ಮರೆತುಹೋದ ಪಾಸ್ವರ್ಡ್ ಅನ್ನು ಮತ್ತೆ ಪಡೆಯಲು ಸಹಾಯವಾಗುವಂತೆ ಆವಿಷ್ಕಾರವೊಂದನ್ನು ಮಾಡಿದ್ದು, ಸೈನ್ - ಇನ್ಗೆ ತಮ್ಮ ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯ ಆಯ್ಕೆಯನ್ನು ನೀಡಲಿದೆ.
ಜನಪ್ರಿಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್, ಗೂಗಲ್ ಖಾತೆಯನ್ನು ಬಳಸಿಕೊಂಡು ಬಳಕೆದಾರರಿಗೆ ಲಾಗಿನ್ ಆಗಲು ಅವಕಾಶ ನೀಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಂಡ್ರಾಯ್ಡ್ ಬಳಕೆದಾರರಿಗಾಗಿ ಟ್ವಿಟರ್‌ನ ಬೀಟಾ ಅಪ್ಲಿಕೇಶನ್‌ನಲ್ಲಿ ಆಯ್ಕೆಯನ್ನು ಈಗಾಗಲೇ ಸಕ್ರಿಯಗೊಳಿಸಲಾಗಿದೆ ಎಂದು ಮಾಶಬಲ್ ಇಂಡಿಯಾ ವರದಿ ಮಾಡಿದೆ.
ಟ್ವಿಟರ್ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯು ಪ್ರಸ್ತುತ ಬಳಕೆದಾರ ಗೂಗಲ್‌ನೊಂದಿಗೆ ಸೈನ್ ಇನ್ ಮಾಡಲು ಆಯ್ಕೆಗಳನ್ನು ನೀಡಿದೆ. ಆದರೆ, ಅಪ್ಲಿಕೇಶನ್‌ನ ಐಒಎಸ್ ಆವೃತ್ತಿಗೆ, ಹೆಚ್ಚುವರಿ ಆಯ್ಕೆಯನ್ನು ಸೇರಿಸಬಹುದು.
ಈ ಹೊಸ ಸೈನ್ - ಇನ್ ಆಯ್ಕೆಗಳು ಬಳಕೆದಾರರಿಗೆ ಯಾವಾಗ ಲಭ್ಯವಾಗಲಿದೆ ಎಂಬುದರ ಕುರಿತು ವರದಿ ಬಂದಿಲ್ಲ. ಆದರೆ, ಬಳಕೆದಾರರು ಈಗಾಗಲೇ ಟ್ವಿಟರ್‌ನ ಬೀಟಾ ಪ್ರೋಗ್ರಾಂನ ಭಾಗವಾಗಿದ್ದರೆ, ಟ್ವಿಟರ್ ಅಪ್ಲಿಕೇಶನ್ ಅನ್ನು v 9.3.0-beta.04 ಆವೃತ್ತಿಗೆ ನವೀಕರಿಸುವುದು ಅತ್ಯಗತ್ಯ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಹೊಸ ವರ್ಷನ್ ಬಂದಿದೆ.