ETV Bharat / international

ಕೊರೊನಾ ಭೀತಿ: ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಿ ಎಂದ ಟ್ವಿಟ್ಟರ್​ - ಮಾರಣಾಂತಿಕ ಕೊರೊನಾ ವೈರಸ್

ಮಾರಣಾಂತಿಕ ಕೊರೊನಾ ವೈರಸ್ ಭೀತಿಯಿಂದ, ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್​​ ತನ್ನ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.

Twitter staff
ಟ್ವಿಟರ್​
author img

By

Published : Mar 4, 2020, 8:50 AM IST

ಸ್ಯಾನ್ ಫ್ರಾನ್ಸಿಸ್ಕೊ(ಕ್ಯಾಲಿಫೋರ್ನಿಯಾ): ಮಾರಣಾಂತಿಕ ಕೊರೊನಾ ವೈರಸ್​​ ವಿಶ್ವದಾದ್ಯಂತ ಹಬ್ಬಿ, ಅನೇಕ ಜನರನ್ನು ಬಲಿ ತೆಗೆದುಕೊಂಡಿದೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್​​ ತನ್ನ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ.

ಕಳೆದ ವರ್ಷದ ಕೊನೆಯಲ್ಲಿ ಮಧ್ಯ ಚೀನಾದಲ್ಲಿ ಕಾಣಿಸಿಕೊಂಡ ಈ ವೈರಸ್​​ ಏಕಾಏಕಿ ಪ್ರಪಂಚದಾದ್ಯಂತ ಹರಡಿದೆ. ಇಲ್ಲಿಯವರೆಗೆ ಸುಮಾರು 3,100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಮಾರು 90,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.

ಕಚೇರಿಯ ಸಿಬ್ಬಂದಿಗೆ ಈ ಸೋಂಕು ತಗುಲಬಾರದೆಂದು ಈ ನಿರ್ಣಯ ಕೈಗೊಂಡಿದೆ. ಅಲ್ಲದೇ ಈ ವೈರಸ್​​ ಕಂಡು ಬಂದ ಪ್ರದೇಶದಲ್ಲಿ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸರ್ಕಾರ ಕೂಡ ಸೂಚಿಸಿದೆ. ಜಾಗತಿಕವಾಗಿ ಎಲ್ಲಾ ಉದ್ಯೋಗಿಗಳಿಗೆ ಸಾಧ್ಯವಾದರೆ ಮನೆಯಿಂದ ಕೆಲಸ ಮಾಡಲು ನಾವು ಬಲವಾಗಿ ಪ್ರೋತ್ಸಾಹಿಸುತ್ತೇವೆ ಎಂದು ಟ್ವಿಟ್ಟರ್ ಮಾನವ ಸಂಪನ್ಮೂಲ ಮುಖ್ಯಸ್ಥ( ಹೆಚ್​ಆರ್​) ಜೆನ್ನಿಫರ್ ಕ್ರಿಸ್ಟಿ ತಮ್ಮ ಬ್ಲಾಗ್ ಮೂಲಕ ತಿಳಿಸಿದ್ದಾರೆ.

ಸಿಬ್ಬಂದಿಯಲ್ಲಿ COVID-19 ಬರದಂತೆ ತಡೆಯುವುದು ಮತ್ತು ಇದರ ಸಂಭವನೀಯತೆಯನ್ನು ಕಡಿಮೆ ಮಾಡುವುದು ನಮ್ಮ ಗುರಿಯಾಗಿದೆ. ದಕ್ಷಿಣ ಕೊರಿಯಾ, ಹಾಂಗ್ ಕಾಂಗ್ ಮತ್ತು ಜಪಾನ್ ಕಚೇರಿಗಳಲ್ಲಿನ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಕ್ರಿಸ್ಟಿ ಹೇಳಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಇದುವರೆಗೆ ಸುಮಾರು 5,000 ಮಂದಿಗೆ ಸೋಂಕು ತಗುಲಿರುವುದು ದಾಖಲಾಗಿದ್ದು, ಅಲ್ಲದೇ 28 ಜನ ಸಾವನ್ನಪ್ಪಿದ್ದಾರೆ. ಚೀನಾದ ಬಳಿಕ ದಕ್ಷಿಣ ಕೊರಿಯಾದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ದೇಶಾದ್ಯಂತ ಶಾಲೆಗಳನ್ನು ಮುಚ್ಚಬೇಕೆಂದು ಜಪಾನ್ ಸರ್ಕಾರ ಒತ್ತಾಯಿಸಿದೆ. ಹಣಕಾಸಿನ ಕೇಂದ್ರವು 100 ಸೋಂಕು ತಗುಲಿರುವ ಪ್ರಕರಣಗಳನ್ನು ದಾಖಲಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.