ಲಂಡನ್: ಯುಎಸ್ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಮಧ್ಯೆ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗ ಮತ್ತು ಮಾಜಿ ಟಿವಿ ನಿರೂಪಕಿ ಟೋಮಿ ಲಹ್ರೆನ್ ಅವರು ವಿಡಿಯೋ ಸಂದೇಶದಲ್ಲಿ ಟ್ರಂಪ್ "ಗೂಬೆಯಂತೆ ಬುದ್ಧಿವಂತ" ಎಂದು ಕರೆದಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಅಧ್ಯಕ್ಷ ಟ್ರಂಪ್ ಅವರನ್ನು "ಜಾಕಾಸ್" ಎಂದು ಕರೆಯಲು ಕ್ಯಾಮಿಯೊ ಆ್ಯಪ್ ಮೂಲಕ ಲಹ್ರೆನ್ಗೆ 85 ಯುಎಸ್ ಡಾಲರ್ ಪಾವತಿಸಲಾಗಿದೆ ಎಂದು ಲೇಖಕ ಅಲಿ-ಅಸ್ಗರ್ ಅಬೆಡಿ ಹೇಳಿದ್ದಾರೆ. ವಿಡಿಯೋದಲ್ಲಿ ಲಹ್ರೆನ್ ಅಮೆರಿಕ ಅಧ್ಯಕ್ಷರ ಭಾರತೀಯ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
"ಮೇಕ್ ಅಮೆರಿಕ ಗ್ರೇಟ್ ಅಜೆಂಡಾವನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಅಮೆರಿಕವನ್ನು ದೊಡ್ಡ ಕಾರ್ಯಸೂಚಿಯಾಗಿರಿಸಿದ್ದಕ್ಕಾಗಿ ಧನ್ಯವಾದಗಳು. ಅಧ್ಯಕ್ಷ ಟ್ರಂಪ್ ಗೂಬೆಯಂತೆ ಬುದ್ಧಿವಂತರು ಅಥವಾ ನೀವು ಹಿಂದಿಯಲ್ಲಿ ಹೇಳುವಂತೆ - ಅಧ್ಯಕ್ಷ ಟ್ರಂಪ್ ಉಲ್ಲೂ ಅವರಂತೆ ಬುದ್ಧಿವಂತರು" ಎಂದು ಅವರು ಹೇಳಿದ್ದಾರೆ.
'ಜಾಕಾಸ್' ಎಂಬ ಪದವನ್ನು ಹಿಂದಿ, ಉರ್ದು ಮತ್ತು ಪಂಜಾಬಿಯಲ್ಲಿ "ಉಲ್ಲೂ" ಎನ್ನಲಾಗುತ್ತದೆ. ಕ್ಯಾಮಿಯೊ ಎಂದರೆ, ಭಾಷಣ ಮಾಡುವವರು ಸಾರ್ವಜನಿಕ ವ್ಯಕ್ತಿಗಳಿಗೆ ಏನು ಹೇಳಬೇಕು ಎಂದು ತಿಳಿಸುವ ಒಂದು ಅಪ್ಲಿಕೇಶನ್ ಆಗಿದೆ.
"ಲೆಹ್ರನ್ ಟ್ರಂಪ ಅವರನ್ನು ಹೊಗಳುತ್ತಿದ್ದೇನೆ ಅಂದುಕೊಂಡಿರಬಹುದು. ಆದರೆ ಆಕೆ ಅವರನ್ನು ಅವಮಾನಿಸಿದ್ದಾಳೆ. ಬಹುಶಃ ಅವಳಿಗೆ ಏನು ಹೇಳಬೇಕು ಎಂಬುದನ್ನು ಮರೆತು ಈ ರೀತಿ ಮಾತನಾಡಿರಬಹುದು. ಅಥವಾ ಬೌದ್ಧಿಕ ಜ್ಞಾನದ ಕೊರತೆಯಿಂದಾಗಿ ಹೀಗಾಗಿರಬಹುದು" ಎಂದು ಅಬೆಡಿ ತಮ್ಮ ಲೇಖನದಲ್ಲಿ ಹೇಳಿದ್ದಾರೆ.