ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಯುಎಸ್ ಸೈನಿಕರನ್ನು ಹತ್ಯೆಗೈದ ಕುರಿತು ರಷ್ಯಾ ಮತ್ತು ತಾಲಿಬಾನ್ ಸಂಚು ರೂಪಿಸಿವೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದರು.
ಟ್ರಂಪ್ ಈ ವಿಚಾರವನ್ನು ನಿರಾಕರಿಸಿರುವುದು ಗಮನಾರ್ಹವಾಗಿದೆ ಎಂದು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜಾನ್ ಬೋಲ್ಟನ್ ಹೇಳಿದ್ದಾರೆ.
"ಟ್ರಂಪ್ ಈ ಕುರಿತು ಏನೂ ಕೇಳಿಲ್ಲವೆಂದು ಹೇಳಿರುವುದು ಬಹಳ ಗಮನಾರ್ಹವಾಗಿದೆ. ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ?" ಎಂದು ಬೋಲ್ಟನ್ ಪ್ರಶ್ನಿಸಿದ್ದಾರೆ.
ಯುಎಸ್ ಸೈನಿಕರ ಹತ್ಯೆಗೆ ರಷ್ಯಾ ತಾಲಿಬಾನ್ಗೆ ಕೊಡುಗೆ ನೀಡಿರಬಹುದು ಎಂದು ಆರೋಪಿಸಿ ಗುಪ್ತಚರ ವರದಿಯನ್ನು ಟ್ರಂಪ್ಗೆ ನೀಡಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಉಲ್ಲೇಖಿಸಿತ್ತು. ಆದರ ಈ ವಿಷಯವನ್ನು ಅಧ್ಯಕ್ಷ ಟ್ರಂಪ್ ನಿರಾಕರಿಸಿದ್ದಾರೆ.