ETV Bharat / international

'ವಾಗ್ದಂಡನೆ'ಯ ಅಡಕತ್ತರಿಗೆ ಸಿಲುಕಿದ ಟ್ರಂಪ್​... ಈ ಕುಖ್ಯಾತಿಗೆ ಪಾತ್ರನಾದ 4ನೇ ಅಧ್ಯಕ್ಷ

author img

By

Published : Nov 13, 2019, 6:01 AM IST

ಉಕ್ರೇನ್​ನಲ್ಲಿ ಅನಿಲ ಕಂಪನಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮತ್ತು ಅವರ ಪುತ್ರ ಹಂಟರ್​ ವಿರುದ್ಧ ಆಧಾರವಿಲ್ಲದ ಆರೋಪ ಮಾಡಿದ್ದು, ತನಿಖೆ ಮಾಡುವಂತೆ ಟ್ರಂಪ್​ ಅವರ ಕಾನೂನು ಸಲಹೆಗಾರ ರೂಡಿ ಗಿಲಾನಿ ಅವರು, ಉಕ್ರೇನ್​ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಹೀಗಾಗಿ, ಡೆಮಾಕ್ರಟಿಕ್​ ಪಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಇತ್ತೀಚೆಗೆ ಮಂಡಿಸಿತ್ತು. ಇದರ ವಿಚಾರಣೆಯು ಇಂದು ನಡೆಯಲಿದೆ.

ಟ್ರಂಪ್

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಗ್ದಂಡನೆಗೆ ಒಳಪಡಿಸಲು ಡೆಮಾಕ್ರಟಿಕ್​ ಪಕ್ಷದ ಸಂಸದರು ನಿರ್ಣಯೆ ತೆಗೆದುಕೊಂಡ ಬೆನ್ನಲ್ಲೇ ಇಂದು (ಬುಧವಾರ) ಅವರನ್ನು ಸಾರ್ವಜನಿಕ ವಿಚಾರಣೆಗೆ ಒಳಪಡಿಸಲಿದೆ.

ಉಕ್ರೇನ್​ನಲ್ಲಿ ಅನಿಲ ಕಂಪನಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಮತ್ತು ಅವರ ಪುತ್ರ ಹಂಟರ್​ ವಿರುದ್ಧ ಆಧಾರವಿಲ್ಲದ ಆರೋಪ ಮಾಡಿದ್ದು, ತನಿಖೆ ಮಾಡುವಂತೆ ಟ್ರಂಪ್​ ಅವರ ಕಾನೂನು ಸಲಹೆಗಾರ ರೂಡಿ ಗಿಲಾನಿ ಅವರು, ಉಕ್ರೇನ್​ ಅಧಿಕಾರಿಗಳನ್ನು ಒತ್ತಾಯಿಸಿದ್ದರು ಎನ್ನಲಾಗಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಡೆಮಾಕ್ರಟಿಕ್​ ಪಕ್ಷ ಟ್ರಂಪ್ ಅವರ ವಿರುದ್ಧ ವಾಗ್ದಂಡನೆ ನಿರ್ಣಯವನ್ನು ಇತ್ತೀಚೆಗೆ ಮಂಡಿಸಿತ್ತು.

ಈ ಮೂಲಕ ವಾಗ್ದಂಡನೆ ಎದುರಿಸಲಿರುವ ಅಮೆರಿಕದ 4ನೇ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್​ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಆಂಡ್ರೂ ಜಾನ್ಸನ್​, ರಿಚರ್ಡ್​ ನಿಕ್ಸನ್​ ಮತ್ತು ಬಿಲ್​ ಕ್ಲಿಂಟನ್​ ವಾಗ್ದಂಡನೆ ವಿಚಾರಣೆ ಎದುರಿಸಿದ್ದರು.

ಟೆಲಿವಿಷನ್ ವಿಚಾರಣೆ ಬುಧವಾರದಿಂದ ಆರಂಭವಾಗಲಿದೆ. ಮೂರು ಪ್ರಮುಖ ಸಾಕ್ಷಿಗಳು ಟ್ರಂಪ್​ ವಿರುದ್ಧ ಅಧಿಕಾರ ದುರುಪಯೋಗಪಡಿಸಿಕೊಂಡ ಬಗ್ಗೆ ಸಾಕ್ಷಿ ಹೇಳಲಿವೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ಅಮೆರಿಕದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರಿಗೆ ಇದು ಹಿನ್ನೆಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.