ವಾಷಿಂಗ್ಟನ್(ಯುಎಸ್): ಬಹುದಿನಗಳ ಕಾಲ ನನೆಗುದ್ದಿಗೆ ಬಿದ್ದಿದ್ದ ಮಧ್ಯಪ್ರಾಚ್ಯ ಶಾಂತಿ ಯೋಜನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಾಲನೆ ನೀಡಿದ್ದಾರೆ. ಆದರೆ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪ್ಯಾಲೆಸ್ತೀನ್, ಇದು ಪಕ್ಷಪಾತದಿಂದ ಕೂಡಿದೆ ಎಂದು ದೂರಿದೆ.
ವೈಟ್ಹೌಸ್ನಲ್ಲಿ ಇಸ್ರೇಲ್ ಮಾಜಿ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು ಜೊತೆ ಮಾತನಾಡಿದ ಟ್ರಂಪ್, ದಶಕಗಳ ಕಾಲ ಎರಡು ರಾಷ್ಟ್ರಗಳ ನಡುವಿನ ಸಮಸ್ಯೆ ಇತ್ಯರ್ಥಕ್ಕೆ ಯುಎಸ್ ಮಧ್ಯಸ್ಥಿಕೆ ವಹಿಸಲು ಶ್ರಮಿಸಿದ್ದರೂ ಅದು ವಿಫಲವಾಗಿತ್ತು. ಈ ಯೋಜನೆಯಿಂದ ನಮ್ಮ ಪ್ರಯತ್ನಕ್ಕೆ ಜಯ ಸಿಗಲಿದೆ. ಅಲ್ಲದೇ ಇದು ಮಧ್ಯಪ್ರಾಚ್ಯದಲ್ಲಿ ಹೊಸ ಶಕೆಯೊಂದನ್ನು ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ. ಈ ವೇಳೆ ಜ್ಯುವಿಷ್ ಪ್ರತಿನಿಧಿಗಳು ಮತ್ತು ಯಹೂದಿ ಅಮೆರಿಕನ್ನರು ಉಪಸ್ಥಿತರಿದ್ದರು. ಆದ್ರೆ, ಪ್ಯಾಲೆಸ್ತೀನ್ನ ಪ್ರತಿನಿಧಿಗಳು ಪಾಲ್ಗೊಂಡಿರಲಿಲ್ಲ.
ಇದೇ ವೇಳೆ ಮಧ್ಯಪ್ರಾಚ್ಯ ಶಾಂತಿ ಯೋಜನೆಗೆ ಮುಂದಡಿಯಿಟ್ಟ ಇಸ್ರೇಲ್ಗೆ ಟ್ರಂಪ್ ಅಭಿನಂದನೆ ಸಲ್ಲಿಸಿದ್ದು, ಈ ಯೋಜನೆ ಶಸ್ತ್ರಾಸ್ತ ರಹಿತ ಹೊಸ ಪ್ಯಾಲೆಸ್ತೀನ್ ಕಟ್ಟಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಈ ಯೋಜನೆಗೆ ಪ್ಯಾಲೇಸ್ತೀನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜೆರುಸಲೇಂ ನಗರವನ್ನು ರಾಜಧಾನಿಯಾಗಿ ಪಡೆಯುವುದು ಸೇರಿದಂತೆ ಇಸ್ರೇಲ್ಗೆ ಈ ಯೋಜನೆ ಬಯಸಿದ್ದಕ್ಕಿಂತ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡಲಿದೆ ಎಂದಿದೆ.